Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಅಮೆರಿಕಾದಲ್ಲಿ ಬಂಧೂಕುಧಾರಿಗಳ ಅಟ್ಟಹಾಸ: ಸಾಮೂಹಿಕ ಗುಂಡಿನ ದಾಳಿಯಲ್ಲಿ 22 ಮಂದಿ ದುರ್ಮರಣ

ಮೈನೆ (ಅಮೆರಿಕ): ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ ಮತ್ತೆ ಬಂದೂಕುಧಾರಿಗಳು ಅಟ್ಟಹಾಸ ಮೆರೆದಿದ್ದಾರೆ. ಲೆವಿಸ್ಟನ್ ಪ್ರಾಂತ್ಯದ ಮೈನೆಯಲ್ಲಿ ಬುಧವಾರ ರಾತ್ರಿ ಬಂದೂಕುಧಾರಿಯೊಬ್ಬ ಸಾಮೂಹಿಕ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ 22 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

ದಾಳಿಯಲ್ಲಿ 12ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ.

ಈ ನಡುವೆ ಆಂಡ್ರೊಸ್ಕೊಗಿನ್ ಕೌಂಟಿ ಶೆರಿಫ್ ಕಚೇರಿಯು ದಾಳಿಯ ಶಂಕಿತನ ಎರಡು ಛಾಯಾಚಿತ್ರಗಳನ್ನು ಪೋಸ್ಟ್ ಮಾಡಿದೆ. ಚಿತ್ರದಲ್ಲಿ ಆರೋಪಿ ಸ್ಥಳದಲ್ಲಿ ರೈಫಲ್ ಹಿಡಿದು ನಿಂತಿರುವುದು ಕಂಡು ಬಂದಿದೆ. ಈತ ಸದ್ಯ ತಲೆಮರೆಸಿಕೊಂಡಿದ್ದಾನೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಅಧಿಕಾರಿಗಳು ಚಿತ್ರದಲ್ಲಿರುವ ಶಂಕಿತನನ್ನು ಗುರುತಿಸಲು ಸಾರ್ವಜನಿಕರ ಸಹಾಯವನ್ನು ಕೇಳಿದ್ದಾರೆ.

ಲೆವಿಸ್ಟನ್ ನಗರದಲ್ಲಿ ಶೂಟರ್ ಸಕ್ರಿಯವಾಗಿದ್ದು, ಯಾರೂ ಮನೆಯಿಂದ ಹೊರಗಡೆ ಬರಬೇಡಿ. ಬಾಗಿಲು ಹಾಕಿಕೊಂಡು ಒಳಗಡೆ ಇರಿ. ಕಾನೂನು ಜಾರಿ ಅಧಿಕಾರಿಗಳನ್ನು ಬೆಂಬಲಿಸಿ. ನೀವು ಯಾವುದೇ ಅನುಮಾನಾಸ್ಪದ ಚಟುವಟಿಕೆ ಅಥವಾ ವ್ಯಕ್ತಿಗಳನ್ನು ನೋಡಿದರೆ ದಯವಿಟ್ಟು 911 ಗೆ ಕರೆ ಮಾಡಿ” ಎಂದು ಪೋಸ್ಟ್ ಮಾಡಿದ್ದಾರೆ.

No Comments

Leave A Comment