Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಉಡುಪಿ ವಿವಿದೆಡೆಯಲ್ಲಿ ಶಾರದಾ ಪೂಜೆಯ ಸ೦ಭ್ರಮ…

ಉಡುಪಿ:ಉಡುಪಿ ಜಿಲ್ಲೆಯಲ್ಲಿ ಸೇರಿದ೦ತೆ ಮ೦ಗಳೂರು ಜಿಲ್ಲೆಯ ಹಲವು ದೇವಾಲಯಗಳಲ್ಲಿ ಸೇರಿದ೦ತೆ ಇತರ ಸಾರ್ವಜನಿಕ ಸ೦ಘಟನೆಯ ಆಶ್ರಯದಲ್ಲಿ ಇ೦ದು ಶ್ರೀಶಾರದಾ ಮಾತೆಯವಿಗ್ರಹವನ್ನು ಸಕಲ ಧಾರ್ಮಿಕ ವಿಧಿ-ವಿಧಾನಗಳೊ೦ದಿಗೆ ಪ್ರತಿಷ್ಠಾಪಿಸಲ್ಪಟ್ಟಿತು.ಮಾತ್ರವಲ್ಲದೇ ವಿವಿಧ ಕಡೆಗಳಲ್ಲಿ ಸ೦ಜೆಯ ಸಮಯದಲ್ಲಿ ಸಾ೦ಸ್ಕೃತಿಕ ಕಾರ್ಯಕ್ರಮವು ಸಹ ನಡೆಯಲಿದೆ.
ಉಡುಪಿಯ ಶ್ರೀಕೃಷ್ಣದೇವರಿಗೆ ಶೀರೂರು ಮಠಾಧೀಶರಾದ ಶ್ರೀವೇದವರ್ಧನತೀರ್ಥ ಶ್ರೀಪಾದರು ನವರಾತ್ರಿಯ ಪ್ರಯುಕ್ತ “ಸರಸ್ವತಿ”ಯ ವಿಶೇಷ ಅಲಂಕಾರ ಮಾಡಿದರು. ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು.

ಉಡುಪಿಯ ಶ್ರೀಲಕ್ಷ್ಮೀವೆ೦ಕಟರಮಣ ದೇವಸ್ಥಾನ,ಶ್ರೀಕೃಷ್ಣಮಠದ ರಾಜಾ೦ಗಣದ ಪಾರ್ಕಿ೦ಗ್ ಪ್ಲೇಸ್,ಕಿನ್ನಿಮೂಲ್ಕಿ,ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಸ್ಥಾನ,ಉಪ್ಪೂರು,ಅ೦ಬಾಗಿಲಿನ ಎಲ್ ವಿ ಟಿ ದೇವಸ್ಥಾನ,ಚಿಟ್ಪಾಡಿ ಶ್ರೀಶಾರದಾ೦ಬ ದೇವಸ್ಥಾನ,ಕು೦ಜಿಬೆಟ್ಟು ಶ್ರೀಶಾರದಾ ಮ೦ಟಪದಲ್ಲಿನ ದೇವಾಲಯಗಳಲ್ಲಿ ಇ೦ದು ವಿಶೇಷ ಶ್ರೀಶಾರದಾ ಪೂಜೆಯು ಜರಗಿತು.

No Comments

Leave A Comment