ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಇ೦ದು ಕಟೀಲಿನಲ್ಲಿ ಉಡುಪಿ ಶ್ರೀಶೀರೂರು ಮಠಾಧೀಶರಾದ ಶ್ರೀ ವೇದವರ್ಧನತೀರ್ಥಶ್ರೀಪಾದರ ಉಪಸ್ಥಿತಿಯಲ್ಲಿ ‘ನಾರೀಶಕ್ತಿ’ ತಾಳಮದ್ದಳೆ-ವೀಳ್ಯ ಪ್ರದಾನ ಕಾರ್ಯಕ್ರಮ

ಉಡುಪಿ:ಸುಶಾಸನ ಉಡುಪಿಯ ಸಂಯೋಜನೆಯಲ್ಲಿ ಸುಧಾಕರ ಆಚಾರ್ಯ ಸಂಕಲ್ಪಿತ ಪ್ರೋ. ಪವನ್ ಕಿರಣ್‍ಕೆರೆ  ಪರಿಕಲ್ಪಿತ ನೂತನ ಪ್ರಯೋಗಾತ್ಮಕ ಯಕ್ಷಗಾನ ತಾಳಮದ್ದಳೆ ‘ನಾರೀಶಕ್ತಿ’… ಮಾನಿನಿ ಮನ್ವಂತರ’ ಪ್ರಸಂಗ ರಚನೆಗೆ ನವರಾತ್ರಿಯ ಮೂಲಾ ನಕ್ಷತ್ರ, ಶಾರದಾ ಪ್ರತಿಷ್ಠೆಯ ದಿನವಾದ ಅಕ್ಟೋಬರ್ 20ನೇ ಶುಕ್ರವಾರ ಸಂಜೆ 5.00 ಗಂಟೆಗೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ಸಾನಿಧ್ಯದಲ್ಲಿ ವೀಳ್ಯ ಪ್ರದಾನ ನೆರವೇರಲಿದೆ.

ಉಡುಪಿಯ ಶ್ರೀಶೀರೂರು ಮಠಾಧೀಶರಾದ ಶ್ರೀ ವೇದವರ್ಧನತೀರ್ಥಶ್ರೀಪಾದರ ದಿವ್ಯ ಉಪಸ್ಥಿತಿ ಶ್ರೀಕ್ಷೇತ್ರ ಕಟೀಲಿನ ಅರ್ಚಕ ಆಸ್ರಣ್ಣ ಬಂಧುಗಳ ಆಶೀರ್ವಚನದೊಂದಿಗೆ, ನವ ಕನ್ನಿಕಾಮುತ್ತೈದೆಯರು, ಶ್ರೀಕ್ಷೇತ್ರ ಕಟೀಲಿನ ಆಡಳಿತಮಂಡಳಿಯ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು ಹಾಗೂ ಕಲೋಪಾಸಕರ ಉಪಸ್ಥಿತಿಯಲ್ಲಿ ವೀಳ್ಯ ಪ್ರದಾನ ಹಾಗೂ ಫೋಸ್ಟರ್ ಬಿಡುಗಡೆ ಸಮಾರಂಭ ನಡೆಯಲಿದೆ.

ದೇಶದ 70ನೇ ಸ್ವಾತಂತ್ರ್ಯೋತ್ಸವದ ಸಂದರ್ಭ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಹಿರಿತನದಲ್ಲಿ ‘ಸ್ವರಾಜ್ಯ ವಿಜಯ’, ‘ಹೈದರಾಬಾದ್ ವಿಜಯ’, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭ, ಕಾಶ್ಮೀರದ ಇತಿಹಾಸ, ಪುರಾಣ, ಪ್ರಚಲಿತಗಳನ್ನು ತಿಳಿಯಪಡಿಸಿದ ಯಶಸ್ವಿ ‘ಕಾಶ್ಮೀರ ವಿಜಯ’ ತಾಳಮದ್ದಳೆಯನ್ನು ಪ್ರಸ್ತುತಪಡಿಸಿದ್ದ ಸುಶಾಸನ ಉಡುಪಿಯ ಆಯೋಜಕರಿಂದ 2024ರ ಜನವರಿಯಲ್ಲಿ ಯಕ್ಷಲೋಕ ಉಡುಪಿಯಲ್ಲಿ ಪ್ರಥಮ ಪ್ರದರ್ಶನ
ನಡೆಯಲಿರುವುದು ಎಂದು ಸಂಘಟಕರಾದ ಸುಧಾಕರ ಆಚಾರ್ಯಉಡುಪಿ ತಿಳಿಸಿರುತ್ತಾರೆ.

No Comments

Leave A Comment