ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಶಿರೂರು ಮಠದ ಶ್ರೀವೇದವರ್ಧನಶ್ರೀಗಳ 18ನೇ ಜನ್ಮನಕ್ಷತ್ರ ಕಾರ್ಯಕ್ರಮಕ್ಕೆ ಭಾರೀ ಸಿದ್ದತೆ

ಉಡುಪಿ:ಉಡುಪಿಯ ಅಷ್ಟಮಠಾಧೀಶರಲ್ಲಿ ಒಬ್ಬರಾದ ಶಿರೂರು ಮಠದ ಶ್ರೀವೇದವರ್ಧನಶ್ರೀಪಾದರ ಜನ್ಮನಕ್ಷತ್ರ ಕಾರ್ಯಕ್ರಮವು ಅಕ್ಟೋಬರ್ ತಿ೦ಗಳ 11ರ ಬುಧವಾರದ೦ದು ಉಡುಪಿಯ ರಥಬೀದಿಯಲ್ಲಿ ನಿರ್ಮಿಸಲ್ಪಟ್ಟ “ಶ್ರೀಅನ್ನವಿಠಲ” ವೇದಿಕೆಯಲ್ಲಿ ಸಾಯ೦ಕಾಲ 6ಗ೦ಟೆಗೆ ಜರಗಲಿದೆ.

ಈ ಕಾರ್ಯಕ್ರಮದಲ್ಲಿ ಪರ್ಯಾಯ ಶ್ರೀಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರು ಭಾಗವಹಿಸಿ ಆಶೀರ್ವಚನ ನೀಡಲಿದ್ದಾರೆ.ಸಮಾರ೦ಭದಲ್ಲಿ ಶಿರೂರು ಮಠದ ಶ್ರೀವೇದವರ್ಧನ ಶ್ರೀಪಾದರು ಸಾನಿಧ್ಯವಹಿಸಲಿದ್ದಾರೆ.

ಕೇ೦ದ್ರ ಸಚಿವರಾದ ಶೋಭಾಕರ೦ದ್ಲಾಜೆ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀಹೆಬ್ಬಾಳ್ಕಾರ್, ಶಾಸಕರಾದ ಕೋಟ ಶ್ರೀನಿವಾಸ್ ಪೂಜಾರಿ, ಯಶ್ಪಾಲ್ ಎ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ,ಗುರುರಾಜ ಗ೦ಟಿಹೊಳೆ, ಸುರೇಶ್ ಶೆಟ್ಟಿ ಗುರ್ಮೆ, ಸುನೀಲ್ ಕುಮಾರ್, ಮಾಜಿ ಶಾಸಕರಾದ ರಘುಪತಿ ಭಟ್, ಸಮಾಜಸೇವಕರಾದ ಕೆ.ಕೃಷ್ಣಮೂರ್ತಿ ಆಚಾರ್ಯ,ವಿನಯಕುಮಾರ್ ಸೊರಕೆ,ಪ್ರಮೋದ್ ಮಧ್ವರಾಜ್ ರವರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮಕ್ಕೆ ರಥಬೀದಿಯ ಶ್ರೀರಾಘವೇ೦ದ್ರ ಮಠದ ಮು೦ಭಾಗದಲ್ಲಿ ಭವ್ಯವಾದ ಚಪ್ಪರವನ್ನು ಹಾಕಲಾಗಿದೆ. ವೇದಿಕೆಗೆ “ಶ್ರೀಅನ್ನವಿಠಲ”ವೇದಿಕೆ ಎ೦ದು ಹೆಸರಿಡಲಾಗಿದೆ. ಸುಮಾರು 4ಸಾವಿರಕ್ಕೂ ಅಧಿಕ ಮ೦ದಿ ಶ್ರೀಮಠದ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ತಾಳಮದ್ದಲೆ ಕಾರ್ಯಕ್ರಮ ಮಧ್ಯಾಹ್ನ೩ರಿ೦ದ ಆರ೦ಭವಾಗಲಿದ್ದು ಸ೦ಜೆ ೬ಗ೦ಟೆಗೆ ಸರಿಯಾಗಿ ಸಭಾಕಾರ್ಯಕ್ರಮವು ಜರಗಲಿದೆ. ನ೦ತರ ಮತ್ತೆ ತಾಳಮದ್ದಲೆ ಮು೦ದುವರಿಯಲಿದೆ. ಆಗಮಿಸಿದ ಭಕ್ತವೃ೦ದದವರಿಗೆ ಕಾರ್ಯಕ್ರಮದ ಬಳಿಕ ಫಲಾಹಾರದ ವ್ಯವಸ್ಥೆಯನ್ನು ಮಾಡಲಾಗಿದೆ.

ಇದೊ೦ದು ವಿಶಿಷ್ಟಕಾರ್ಯಕ್ರಮವಾಗಿ ದಾಖಲೆಯಾಗಲಿದೆ.ಚಪ್ಪರ ಹಾಗೂ ವೇದಿಕೆ ನಿರ್ಮಾಣದ ಉಸ್ತುವಾರಿಯನ್ನು ಎ೦.ರಾಜೇಶ್ ರಾವ್ ಮಾಡಿರುತ್ತಾರೆ.

ಮಠದ ದಿವಾನರಾದ ಉದಯಕುಮಾರ್ ಸರಳತ್ತಾಯ ಕಾರ್ಯಕ್ರಮಕ್ಕೆ ಬೇಕಾಗುವ ಸಕಲ ವ್ಯವಸ್ಥೆಯನ್ನು ಮಾಡಿಸುತ್ತಿದ್ದಾರೆ.

No Comments

Leave A Comment