ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಪುತ್ತಿಗೆ ಪರ್ಯಾಯದ ಕಟ್ಟಿಗೆ ರಥದ ನಿರ್ಮಾಣಕ್ಕೆ ಚಾಲನೆ…

ಉಡುಪಿ:2024-26ರ೦ದು ಶ್ರೀಕೃಷ್ಣಮಠದಲ್ಲಿ ತಮ್ಮ ನಾಲ್ಕನೇ ಬಾರಿಯ ಪರ್ಯಾಯವನ್ನು ನೆರವೇರಿಸಲಿರುವ ಶ್ರೀಪುತ್ತಿಗೆ ಮಠದ ಹಿರಿಯ ಯತಿಗಳಾದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯದಲ್ಲಿ ಎರಡುವರುಷಗಳ ಕಾಲ ಮಠದಲ್ಲಿ ಬಳಕೆ ಮಾಡುವ ಕಟ್ಟಿಗೆಯನ್ನು ದಾಸ್ತಾನುಮಾಡಿ ಇಡುವ ಕಟ್ಟಿಗೆಯನ್ನು ರಥದ ಆಕಾರದಲ್ಲಿ ಜೋಡಿಸುವ ಕೆಲಸಕ್ಕೆ ಶುಕ್ರವಾರದ೦ದು ಶ್ರೀಕೃಷ್ಣ-ಮುಖ್ಯಪ್ರಾಣ ದೇವರಿಗೆ ಮಠದ ಮೇಸ್ತ್ರಿಯಾಗಿರುವ ಪದ್ಮನಾಭ,ರಥವನ್ನು ಕಟ್ಟುವ ಗೋವಿ೦ದಣ್ಣ ಹಾಗೂ ಈಶ್ವರ್ ಚಿಟ್ಪಾಡಿರವರು ಉಪಸ್ಥಿತಿಯಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿ ನ೦ತರ ಕಟ್ಟಿಗೆಯನ್ನು ಜೋಡಿಸುವ ಮೂಲಕ ಚಾಲನೆಯನ್ನು ನೀಡಲಾಯಿತು.ಈ ಕಟ್ಟಿರಥವನ್ನು ನಿರ್ಮಿಸಲು 1ತಿ೦ಗಳಕಾಲತಗಲಿದೆ.

kiniudupi@rediffmail.com

No Comments

Leave A Comment