ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ವಿಶ್ ಕಪ್ನಲ್ಲಿ ಟೀಂ ಇಂಡಿಯಾಗೆ ಆಘಾತ: ಆರಂಭಿಕ ಬ್ಯಾಟರ್ ಶುಬ್ ಮನ್ ಗಿಲ್ ಗೆ ಡೆಂಗ್ಯೂ
ಚೆನ್ನೈ: ಭಾರತ ತಂಡದ ಯುವ ಆರಂಭಿಕ ಬ್ಯಾಟರ್ ಶುಬ್ಮನ್ ಗಿಲ್ ಡೆಂಗ್ಯೂನಿಂದ ಬಳಲುತ್ತಿದ್ದಾರೆ ಎಂಬುದಾಗಿ ಸುದ್ದಿಯಾಗಿದೆ. ಇದರಿಂದ ವಿಶ್ವ ಕಪ್ಗೆ ಸಜ್ಜಾಗಿರುವ ಭಾರತಕ್ಕೆ ಭಾರಿ ಹೊಡೆತ ಬಿದ್ದಿದೆ. ಭಾನುವಾರ (ಅಕ್ಟೋಬರ್ 8) ಆಸ್ಟ್ರೇಲಿಯಾ ವಿರುದ್ಧದ ಭಾರತದ ಮೊದಲ ವಿಶ್ವಕಪ್ ಪಂದ್ಯದಲ್ಲಿ 24 ವರ್ಷದ ಗಿಲ್ ಆಡುವ ಸಾಧ್ಯತೆಯಿಲ್ಲ.
ಬಲಗೈ ಬ್ಯಾಟರ್ 2023 ರರಲ್ಲಿ ಏಕ ದಿನ ಮಾದರಿಯಲ್ಲಿ ಭಾರತಕ್ಕಾಗಿ ಅತಿ ಹೆಚ್ಚು ರನ್ ಗಳಿಸಿದವರಾಗಿರುವುದರಿಂದ ಮೊದಲ ಪಂದ್ಯದ ಅನುಪಸ್ಥಿತಿಯು ತಂಡದ ಪಾಲಿಗೆ ದೊಡ್ಡ ಹಿನ್ನಡೆಯಾಗಿದೆ.
ಗಿಲ್ ಗುರುವಾರದ ತರಬೇತಿ ಅವಧಿಯಲ್ಲಿ ಡೆಂಗ್ಯೂನಿಂದ ಬಳಲುತ್ತಿದ್ದರು. ಭಾರತವು ಶುಕ್ರವಾರ ತ್ತೊಂದು ತರಬೇತಿ ಅವಧಿಯನ್ನು ಹೊಂದಿರುತ್ತದೆ. 24 ವರ್ಷದ ಆಟಗಾರ ಅದರ ಭಾಗವಾಗಿರುವುದಿಲ್ಲ ಎನ್ನಲಾಗಿದೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ವಿಶ್ವಕಪ್ ಪಂದ್ಯದಲ್ಲಿ ಗಿಲ್ ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ. ಅವರ ಬದಲಿಗೆ ಇಶಾನ್ ಕಿಶನ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎಂಬುದಾಗಿ ವರದಿ ಮಾಡಲಾಗಿದೆ.
ಒಂದು ವೇಳೆ ಗಿಲ್ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಚೇತರಿಸಿಕೊಳ್ಳಲು ವಿಫಲವಾದರೆ, ಇನ್ನಿಂಗ್ಸ್ ಆರಂಭದಲ್ಲಿ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಇಶಾನ್ ಕಿಶನ್ ಅಥವಾ ಕೆಎಲ್ ರಾಹುಲ್ ಆಡಲು ಇಳಿಯಬೇಕೇ ಎಂಬ ಬಗ್ಗೆ ಭಾರತ ತನ್ನ ಆಯ್ಕೆಗಳನ್ನು ಪರಿಶೀಲಿಸಲಿದೆ. ಪ್ಲೇಯಿಂಗ್ ಇಲೆವೆನ್ನಲ್ಲಿ ಗಿಲ್ ಅನುಪಸ್ಥಿತಿಯು ತಂಡಕ್ಕೆ ಹಿನ್ನಡೆಯಾಗಿದೆ.
ಗಿಲ್ ಈ ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್ ವಿರುದ್ಧ ಅದ್ಭುತ ದ್ವಿಶತಕ ಗಳಿಸಿದ್ದರು. ವೆಸ್ಟ್ ಇಂಡೀಸ್ ಪ್ರವಾಸದ ಸಮಯದಲ್ಲಿ ಸ್ವಲ್ಪ ಕುಸಿತವನ್ನು ಹೊರತುಪಡಿಸಿ, ಅವರು ನಂಬಲಾಗದ ಸ್ಥಿರತೆಯನ್ನು ತೋರಿಸಿದ್ದರು.