ಭಾರತ-ಕೆನಡಾ ಮಧ್ಯೆ ಹೆಚ್ಚಿದ ರಾಜತಾಂತ್ರಿಕ ಸಮಸ್ಯೆ: ಕೆನಡಿಯನ್ನರಿಗೆ ವೀಸಾ ಸೇವೆ ತಾತ್ಕಾಲಿಕ ರದ್ದು
ನವದೆಹಲಿ: ಎರಡೂ ದೇಶಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಭಾರತವು ಕೆನಡಾದಲ್ಲಿ ತನ್ನ ವೀಸಾ ಸೇವೆಗಳನ್ನು ಮುಂದಿನ ಸೂಚನೆಯವರೆಗೆ ಸ್ಥಗಿತಗೊಳಿಸಿದೆ. ಬಿಎಲ್ ಎಸ್ ಇಂಟರ್‌ನ್ಯಾಶನಲ್ ಎಂಬ ಕೆನಡಿಯನ್ನರ ವೀಸಾ ಅರ್ಜಿಗಳ ಆರಂಭಿಕ ಪರಿಶೀಲನೆಗಾಗಿ ನೇಮಕಗೊಂಡ ಖಾಸಗಿ ಏಜೆನ್ಸಿ ಕಾರ್ಯಾಚರಣೆಯ ಕಾರಣಗಳಿಂದಾಗಿ, ಸೆಪ್ಟೆಂಬರ್ 21, 2023 ರಿಂದ ಜಾರಿಗೆ ಬರುವಂತೆ ಭಾರತೀಯ ವೀಸಾ ಸೇವೆಗಳನ್ನು ಮುಂದಿನ ಸೂಚನೆಯವರೆಗೆ ರದ್ದುಗೊಳಿಸಲಾಗಿದೆ.
ಆಸಕ್ತ ವೀಸಾ ಅರ್ಜಿದಾರರು ಸಮಸ್ಯೆಯ ಕುರಿತು ಹೆಚ್ಚಿನ ಮಾಹಿತಿಗೆ ಬಿಎಲ್ ಎಸ್ ವೆಬ್‌ಸೈಟ್ ನ್ನು ಪರಿಶೀಲಿಸಲು ಸಲಹೆ ನೀಡಲಾಗಿದೆ.
ಭಾರತೀಯ ಮಿಷನ್‌ನಿಂದ ಪ್ರಮುಖ ಸೂಚನೆ: ಕಾರ್ಯಾಚರಣೆಯ ಕಾರಣಗಳಿಂದಾಗಿ, 21 ಸೆಪ್ಟೆಂಬರ್ 2023 ರಿಂದ ಜಾರಿಗೆ ಬರುವಂತೆ, ಮುಂದಿನ ಸೂಚನೆಯವರೆಗೆ ಭಾರತೀಯ ವೀಸಾ ಸೇವೆಗಳನ್ನು ರದ್ದುಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಬಿಎಲ್ ಎಸ್ ವೆಬ್‌ಸೈಟ್ ನ್ನು ಪರಿಶೀಲಿಸುತ್ತಿರಿ ಎಂದು ವೆಬ್ ಸೈಟ್ ನಲ್ಲಿ ಸೂಚನೆ ನೀಡಲಾಗಿದೆ.
ಜೂನ್ನಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರ “ಸಂಭಾವ್ಯ” ಒಳಗೊಳ್ಳುವಿಕೆಯ ಬಗ್ಗೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆರೋಪದ ನಂತರ ಭುಗಿಲೆದ್ದ ರಾಜತಾಂತ್ರಿಕ ಗದ್ದಲದ ನಡುವೆ ಈ ಕ್ರಮವು ಬಂದಿದೆ.