Log In
BREAKING NEWS >
````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಹಾಗೂ ಓದುಗರಿಗೆ ಶ್ರೀ ಗೌರಿ-ಗಣೇಶನ ಹಬ್ಬದ ಶುಭಾಶಯಗಳು```````

INDIA ಮೈತ್ರಿಕೂಟ ಮೋದಿಯವರ ನಿದ್ದೆಗೆಡಿಸಿದೆ: ಕಾಂಗ್ರೆಸ್

ನವದೆಹಲಿ: INDIA ಮೈತ್ರಿಕೂಟ ಪ್ರಧಾನಿ ನರೇಂದ್ರ ಮೋದಿ ಅವರ ನಿದ್ದೆಗೆಡಿಸಿದೆ ಎಂದು ಕಾಂಗ್ರೆಸ್ ಸಂಸದ ಅಧೀಕರ್ ರಂಜನ್ ಚೌಧರಿ ಗುರುವಾರ ಹೇಳಿದ್ದಾರೆ.

ಲೋಕಸಭೆಯಿಂದ ಅಮಾನತು ಆದೇಶವನ್ನು ಹಿಂಪಡೆದ ನಂತರ ಎಎನ್ ಐ ಸುದ್ದಿಸಂಸ್ಥೆಗೆ ಮಾತನಾಡಿದ ಅವರು, INDIA ಮೈತ್ರಿ  ಮೋದಿಗೆ ದೊಡ್ಡ ಅಪಾಯಕಾರಿಯಾಗಲಿದೆ. ಬಿಜೆಪಿ ನಾಯಕ ಸಂಬಿತ್ ಪಾತ್ರ ಅವರು ಪ್ರಧಾನಿಗೆ ನಿದ್ರೆ ಮಾತ್ರೆ ವ್ಯವಸ್ಥೆ ಮಾಡುವಂತೆ ಸಲಹೆ ನೀಡಿದರು.

ನಾನು ಯಾವುದೇ ತಪ್ಪು ಮಾಡಿಲ್ಲ, ಬಹುಶ: ನಾನು ಹೇಳಿರುವುದನ್ನು ತಪ್ಪಾಗಿ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಒಂದು ವೇಳೆ ನಾನು ಏನಾದರೂ ಅಸಂಸದೀಯ ಮಾತುಗಳನ್ನಾಡಿರುವುದು ಸಾಬೀತಾದರೆ ಸಾರ್ವಜನಿಕ ಜೀವನವನ್ನು ತ್ಯಜಿಸುವುದಾಗಿ ತಿಳಿಸಿದರು.

ನಿಯಮಗಳ ಪ್ರಕಾರ ಸದನದಲ್ಲಿ ನನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದೇನೆ. ಸದನದಲ್ಲಿ ನನಗೆ ವಿವರಣೆ ಕೇಳಿದರೆ ನಾನು ಅದನ್ನು ನೀಡುತ್ತಿದ್ದೆ. ಕಾಂಗ್ರೆಸ್ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿರುವುದಕ್ಕೆ ಸದನದಲ್ಲಿ ದಾಖಲೆ ಇದೆ, ಈ ಬಗ್ಗೆ ಯಾರು ಯೋಚಿಸುತ್ತಾರೆ? ಎಂದು ಪ್ರಶ್ನಿಸಿದ ಅವರು, ಒಂದು ವೇಳೆ ನಾನು ತಪ್ಪಾಗಿ ಹೇಳಿಕೆ ನೀಡಿರುವುದು ಸಾಬೀತಾದರೆ ರಾಜಕೀಯ ರಂಗದಿಂದ ದೂರು ಉಳಿಯುವುದಾಗಿ ಹೇಳಿದರು.

ಇನ್ನೂ ಅದಾನಿ ವಿವಾದ ಕುರಿತು ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿ ಹೇಳುವುದು ಖಂಡಿತವಾಗಿಯೂ ಸತ್ಯ. ದೇಶದಲ್ಲಿ ಕೇವಲ ಒಂದಿಬ್ಬರು ಉದ್ಯಮಿಗಳ ಸಂಪತ್ತು ಬೆಳೆಯುತ್ತಿರುವ ಹಿಂದಿನ ರಹಸ್ಯವೇನು? ಜೆಪಿಸಿ ರಚನೆ ಮಾಡುವುದರಲ್ಲಿ ತಪ್ಪೇನಿದೆ?…ನಿಷ್ಪಕ್ಷಪಾತ ತನಿಖೆ ನಡೆಸಲು ನಮ್ಮ ಬಳಿ ಇಡಿ, ಸಿಬಿಐ ಇಲ್ಲ, ಹಾಗಾಗಿ ಜೆಪಿಸಿ ಸಂವಿಧಾನಕ್ಕೆ ಬೇಡಿಕೆ ಇಡುವುದೊಂದೇ ನಮ್ಮ ಮುಂದಿರುವ ದಾರಿ ಎಂದರು.

No Comments

Leave A Comment