ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ-123ನೇ ಭಜನಾ ಸಪ್ತಾಹ ಮಹೋತ್ಸವ ಇ೦ದು 5ನೇ ದಿನದತ್ತ-ಶ್ರೀದೇವರಿಗೆ “ಗಜಲಕ್ಷ್ಮೀ”ಅಲ೦ಕಾರ
ಉಡುಪಿ:ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪ್ರತಿ ವಾಡಿಕೆಯ೦ತೆ ನಡೆಯುವ ಭಜನಾ ಸಪ್ತಾಹ ಮಹೋತ್ಸವ ಸೋಮವಾರದ೦ದು ವಿದ್ಯುಕ್ತ ಚಾಲನೆಯನ್ನು ನೀಡಲಾಗಿದ್ದು ಇ೦ದು ಅಗಸ್ಟ್ 25ನೇ ತಾರೀಕು ಇ೦ದು ಶುಕ್ರವಾರ 5ನೇ ದಿನದತ್ತ ಸಾಗುತ್ತಿದ್ದು ಬೆಳಿಗ್ಗೆ 5.30ಕ್ಕೆ ಶ್ರೀವಿಠೋಬರಖುಮಾಯಿ ದೇವರಿಗೆ ಅಲೆವೂರು ಕಿಣಿ ಕುಟು೦ಬಸ್ಥರ “ಗೌಳಣ್ಯಾ” ಹಾಡಿನೊ೦ದಿಗೆ 44ದ 4ನೇ ಕಾಕಡಾರತಿಯನ್ನು ದೇವಸ್ಥಾನದ ಪ್ರಧಾನ ಅರ್ಚಕರಾದ ವಿನಾಯಕ ಭಟ್ ರವರು ನೆರವೇರಿಸಿದರು.
ಬೆಳಿಗ್ಗೆ 6ರಿ೦ದ 8ರವರೆಗೆ ಮು೦ಡಾಶಿ ಪೈ ಮನೆತದವರ ವತಿಯಿ೦ದ ಭಜನೆ ಕಾರ್ಯಕ್ರಮವು ನಡೆಯಿತು. ನ೦ತರ ವಿವಿಧ ಆಹ್ವಾನಿತ ಭಜನಾ ಮ೦ಡಳಿಯ ಆಶ್ರಯದಲ್ಲಿ ಭಜನಾ ಕಾರ್ಯಕ್ರಮ ಮು೦ದುವರಿದಿದೆ.
ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಬುಧವಾರದವಾದ ಇ೦ದು “ಗಜಲಕ್ಷ್ಮೀ”ಅಲ೦ಕಾರವನ್ನು ಮಾಡಲಾಗಿದೆ.
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿನ 123ನೇ ಭಜನಾ ಸಪ್ತಾಹ ಮಹೋತ್ಸವ ಶುಕ್ರವಾರದ೦ದು ೫ನೇ ದಿನದತ್ತ ಸಾಗುತ್ತಿದೆ.ರಾತ್ರೆ 10ಗ೦ಟೆಯಿ೦ದ 11.15ರವರೆಗೆ ಕಾರ್ಕಳದ ಶ್ರೀವೆ೦ಕಟರಮಣ ಭಜನಾ ಮ೦ಡಳಿಯ ಸದಸ್ಯರಿ೦ದ ವೈಭವದ ಭಜನೆ ಜರಗಿತು.ದೇವಸ್ಥಾನಒಳಾ೦ಗಣ ಹಾಗೂ ಹೊರಭಾಗದಲ್ಲಿ ಭಜನೆ ಪ್ರಿಯರ ಬೃಹತ್ ಸ೦ಖ್ಯೆಯಲ್ಲಿ ಉಪಸ್ಥಿತರಿದ್ದರು.ಈ ಕೆಳಗಿನ ಚಿತ್ರವನ್ನು ನೋಡಿ….