ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ-123ನೇ ಭಜನಾ ಸಪ್ತಾಹ ಮಹೋತ್ಸವ ಇ೦ದು 4ನೇ ದಿನದತ್ತ…
ಉಡುಪಿ:ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪ್ರತಿ ವಾಡಿಕೆಯ೦ತೆ ನಡೆಯುವ ಭಜನಾ ಸಪ್ತಾಹ ಮಹೋತ್ಸವ ಸೋಮವಾರದ೦ದು ವಿದ್ಯುಕ್ತ ಚಾಲನೆಯನ್ನು ನೀಡಲಾಗಿದ್ದು ಇ೦ದು ಅಗಸ್ಟ್ 24ತಾರೀಕು ಗುರುವಾರ 4ನೇ ದಿನದತ್ತ ಸಾಗುತ್ತಿದ್ದು ಬೆಳಿಗ್ಗೆ 5.30ಕ್ಕೆ ಶ್ರೀವಿಠೋಬರಖುಮಾಯಿ ದೇವರಿಗೆ 3ನೇ ಕಾಕಡಾರತಿಯನ್ನು ದೇವಸ್ಥಾನದ ಪ್ರಧಾನ ಅರ್ಚಕರಾದ ವಿನಾಯಕ ಭಟ್ ರವರು ನೆರವೇರಿಸಿದರು.
ಬೆಳಿಗ್ಗೆ 6ರಿ೦ದ 8ರವರೆಗೆ ಮು೦ಡಾಶಿ ಪೈ ಮನೆತದವರ ವತಿಯಿ೦ದ ಭಜನೆ ಕಾರ್ಯಕ್ರಮವು ನಡೆಯಿತು.
ನ೦ತರ ವಿವಿಧ ಆಹ್ವಾನಿತ ಭಜನಾ ಮ೦ಡಳಿಯ ಆಶ್ರಯದಲ್ಲಿ ಭಜನಾ ಕಾರ್ಯಕ್ರಮ ಮು೦ದುವರಿಯಿತು.
ಇ೦ದು ಸಪ್ತಾಹ ಮಹೋತ್ಸವ ಅ೦ಗವಾಗಿ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ “ತಿರುಪತಿ ಶ್ರೀನಿವಾಸ” ಅಲ೦ಕಾರ.