Log In
BREAKING NEWS >
````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಹಾಗೂ ಓದುಗರಿಗೆ ಶ್ರೀ ಗೌರಿ-ಗಣೇಶನ ಹಬ್ಬದ ಶುಭಾಶಯಗಳು```````

ಉಡುಪಿ:ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನ-ಅಧಿಕ ಮಾಸದ ಭಜನಾ ಮಹೋತ್ಸವ ಸ೦ಪನ್ನ…

ಉಡುಪಿ: ಉಡುಪಿಯ ತೆಂಕಪೇಟೆಯಲ್ಲಿನ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಪುರುಷೋತ್ತಮ ಅಧಿಕ ( ಶ್ರಾವಣ ) ಮಾಸ ಅಹೋರಾತ್ರಿ ಭಜನಾ ಮಹೋತ್ಸವ ದಿನಾಂಕ 18-07-23 ರಿಂದ 17-08-23 ತನಕ ನಿರಂತರ ಊರ ಪರಊರ ಭಜನಾ ಮಂಡಳಿಗಳಿಂದ ವಿಶೇಷ ಒಂದು ತಿಂಗಳ ಕಾಲ ಅಹೋರಾತ್ರಿ ಭಜನಾ ಮಹೋತ್ಸವವು ಜರಗಿತು.ಪ್ರತೀ ಭಾನುವಾರದ೦ದು ಸಂಜೆ ನಗರ ಭಜನೆ ಹಾಗೂ ಆಹ್ವಾನಿತ ಪ್ರಸಿದ್ಧ ಕಲಾವಿದರಿಂದ ವಿಶೇಷ ಭಜನಾ ಕಾರ್ಯಕ್ರಮ ದೊಂದಿಗೆ ಇಂದು ಗುರುವಾರ ಅಧಿಕ ಶ್ರಾವಣ ಮಾಸದ ಭಜನಾ ಮಂಗಲೋತ್ಸವವು ಸ೦ಪನ್ನ ಗೊ೦ಡಿತು.

ದೇವಳದ ಅರ್ಚಕ ಮಂಗಳಾಚರಣೆಯ ಮಹಾ ಪೂಜೆ ನೆರವೇರಿಸಿದರು.ಆಡಳಿತ ಮೊಕ್ತೇಸರ ಪಿ. ವಿ. ಶೆಣೈ , ಉಮೇಶ್ ಪೈ , ಮಟ್ಟಾರ್ ವಸಂತ ಕಿಣಿ ,ಎ೦. ವಿಶ್ವನಾಥ ಭಟ್ , ಪ್ರಕಾಶ್ ಶೆಣೈ , ಅಶೋಕ ಬಾಳಿಗಾ , ಅಲೆವೂರು ಗಣೇಶ ಕಿಣಿ ,ಎ೦. ರೋಹಿತಾಕ್ಷ ಪಡಿಯಾರ್ , ಪುಂಡಲೀಕ್ ಕಾಮತ್ , ಅರ್ಚಕ ರಾದ ದಯಾಘನ್ ಭಟ್ ,ದೀಪಕ್ ಭಟ್ ,ಗಿರೀಶ ಭಟ್ , ಭಜನಾ ರೂವಾರಿ ಮಟ್ಟಾರು ಸತೀಶ್ ಕಿಣಿ , ವಿವೇಕ ಶಾನಭೋಗ , ವಿಶಾಲ್ ಶೆಣೈ , ಭಾಸ್ಕರ್ ಶೆಣೈ , ಪಾಂಡುರಂಗ ಪೈ , ವ್ಯಾಸ ರಘುಪತಿ ಮಲ್ಯ , ಪ್ರಭಾಕರ್ ಭಟ್ ಹಾಗೂ ಭಜನಾ ಸಪ್ತಾಹ ಸಮಿತಿಯ ಸದಸ್ಯರು , ಜಿ .ಎಸ್. ಬಿ ಯುವಕ ಮತ್ತು ಮಹಿಳಾ ಮಂಡಳಿ ಸದಸ್ಯರು , ಹಾಗೂ ಸಾವಿರಾರು ಸಮಾಜಭಾಂದವರು ಉಪಸ್ಥಿತರಿದ್ದರು.

 

No Comments

Leave A Comment