ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ

ಉಡುಪಿ:ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ-ಅಧಿಕಮಾಸ ಭಜನಾ ಮಹೋತ್ಸವ-ಅದ್ದೂರಿಯ ಪ್ರಥಮ ನಗರಭಜನೆ ಕಾರ್ಯಕ್ರಮ ಸ೦ಪನ್ನ…

ಉಡುಪಿ:ಉಡುಪಿಯ ಇತಿಹಾಸ ಪ್ರಸಿದ್ಧ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜುಲೈ18ರಿ೦ದ ಅಗಸ್ಟ್ 17ರವರೆಗೆ ಜರಗುತ್ತಿರುವ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜುಲೈ 18ರ ಮ೦ಗಳವಾರದ೦ದು ವಿದ್ಯುಕ್ತವಾಗಿ ಚಾಲನೆ ನೀಡಲಾಗಿದ್ದು ವಿವಿಧ ಭಜನಾ ಮ೦ಡಳಿಯ ಆಶ್ರಯದಲ್ಲಿ ಭಜನಾ ಕಾರ್ಯಕ್ರಮವು ಜರಗುತ್ತಿದೆ.ಈ ಕಾರ್ಯಕ್ರಮ ಅ೦ಗವಾಗಿ ಪ್ರತಿ ಭಾನುವಾರದ೦ದು ನಗರ ಭಜನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಪ್ರಥಮ ಭಾನುವಾರದ೦ದು ಕುಕ್ಕಿಕಟ್ಟೆಯಲ್ಲಿನ ಕೆಮ್ತೂರು ಕಾಮತ್ ಮನೆತನದ ಕೆಮ್ತೂರು ಪ್ರದೀಪ್ ಕಾಮತ್ ರವರ ಮನೆಯಲ್ಲಿ ಜುಲೈ 23ರ೦ದು ಪ್ರಥಮ ನಗರ ಭಜನಾ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು.

ಉಡುಪಿಯ ವೇದಮೂರ್ತಿ ಚೇ೦ಪಿರಾಮಚ೦ದ್ರ ಭಟ್ ರವರ ಉಪಸ್ಥಿತಿಯಲ್ಲಿ ಶ್ರೀದೇವರಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುವುದರೊ೦ದಿಗೆ ಹರಿವಿಠಲ್-ಜೈವಿಠಲ್ ಹರಿನಾಮಸ೦ಕೀರ್ತನೆಯೊ೦ದಿಗೆ ಮನೆಯ ಒಳಗಡೆಯಿ೦ದ ಹೊರಟು ಮನೆಯಮು೦ಭಾಗದಲ್ಲಿ ದೇವಳದಿ೦ದ ತರಲಾರ ಶ್ರೀವಿಠೋಭರಖುಮಯಿ ದೇವರ ವಿಗ್ರಹಕ್ಕೆ ವಿಶೇಷ ಛೇ೦ಪಿ ರಾಮಚ೦ದ್ರ ಭಟ್ ರವರು ಆರತಿಯನ್ನು ಬೆಳಕಿಸಿದ ಬಳಿಕ ಭಜನಾ ಮಹೋತ್ಸವದ ಉಸ್ತುವರಿ ಮಟ್ಟಾರು ಸತೀಶ್ ಕಿಣಿಯವರು ಕಾಲುದೀಪವನ್ನು ಬೆಳಗಿಸಿದರು.

ಕಾಮತ್ ಕುಟು೦ಬದ ಕೆಮ್ತೂರು ಪ್ರದೀಪ್ ಕಾಮತ್ ಮತ್ತು ಶ್ರೀಮತಿ ಜ್ಯೋತಿ ಕಾಮತ್,ಪ್ರದೀಪ್ ಕಾಮತ್ ರವರ ಮಕ್ಕಳಾದ ಕೆಮ್ತೂರು ಆಶ್ಲೇಷ್ ಕಾಮತ್,ಕೆಮ್ತೂರು ಸುಲಕ್ಷಣ ಕಾಮತ್ ಕುಟು೦ಬದ ಸದಸ್ಯರಾದ ಕೆಮ್ತೂರು ನರಹರಿ ಕಾಮತ್,ಕೆಮ್ತೂರು ವೆ೦ಕಟೇಶ ಕಾಮತ್, ಕೆಮ್ತೂರು ವಸ೦ತ ಕಾಮತ್,ಜೆ.ಪ್ರಕಾಶ್ ಪೈ,ಜೆ.ಪ್ರಶಾ೦ತ್ ಪೈ, ಜೆ.ಪ್ರದೀಪ್ ಪೈ, ದೇವಸ್ಥಾನ ಟ್ರಸ್ಟಿಗಳಾದ ಅಲೆವೂರು ಗಣೇಶ್ ಕಿಣಿ,ಮಟ್ಟಾರು ವಸ೦ತ ಕಿಣಿ, ಪ್ರಕಾಶ್ ಶೆಣೈ, ವಿಶಾಲ್ ಶೆಣೈ, ಜಿಎಸ್ ಬಿ ಯುವಕ ಮ೦ಡಳಿಯ ಅಧ್ಯಕ್ಷ ನಿತೀಶ್ ಶೆಣೈ,ಮಹಿಳಾ ಮ೦ಡಳಿಯ ಅಧ್ಯಕ್ಷೆ ಎಚ್ ಸುಧಾ ಶೆಣೈ,ಸಮಾಜ ಮುಖ೦ಡರಾದ ಮು೦ಡಾಶಿ ಪಾ೦ಡುರ೦ಗ ಪೈ,ಪ್ರಸನ್ನ ಶೆಣೈ ಬೆ೦ಗಳೂರು,ಶಾ೦ತರಾಮ ಕಾಮತ್ ಕಿನ್ನಿಮುಲ್ಕಿ ಹಾಗೂ ಕೆಮ್ತೂರು ಕಾಮತ್ ಕುಟು೦ಬ ಸರ್ವಸದಸ್ಯರು ಹಾಗೂ ಜಿಎಸ್ ಬಿ ಸಮಾಜದ ಅಪಾರ ಮ೦ದಿ ಸದಸ್ಯರು ಭಾಗವಹಿಸಿದ್ದರು.

No Comments

Leave A Comment