ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಕುಂದಾಪುರ: ಅರಶಿಣ ಗುಂಡಿ ಜಲಪಾತ ವೀಕ್ಷಣೆಗೆ ಹೋದ ಯುವಕ ನೀರುಪಾಲು
ಕುಂದಾಪುರ:ಜು 24. ಜಲಪಾತ ವೀಕ್ಷಣೆಗೆ ಹೋಗಿದ್ದ ಯುವಕ ಕಾಲು ಜಾರಿ ನೀರು ಪಾಲಾದ ಘಟನೆ ಕೊಲ್ಲೂರು ಸಮೀಪದ ಅರಶಿಣ ಗುಂಡಿ ಜಲಪಾತದಲ್ಲಿ ನಡೆದಿದೆ.
ನೀರಿಗೆ ಬಿದ್ದ ಯುವಕನನ್ನು ಭದ್ರಾವತಿ ಮೂಲದ 23 ವರ್ಷದ ಶರತ್ ಕುಮಾರ್ ಎಂದು ಗುರುತಿಸಲಾಗಿದೆ.ಭಾನುವಾರ ಸ್ನೇಹಿತನೊಂದಿಗೆ ಕೊಲ್ಲೂರಿಗೆ ಬಂದಿದ್ದ ಶರತ್, ಅರಶಿನಗುಂಡಿ ಜಲಪಾತ ನೊಡಲು ತೆರಳಿದ್ದರು. ಬಂಡೆಕಲ್ಲಿನ ಮೇಲೆ ನಿಂತು ವಿಡಿಯೋ ಮಾಡುವ ವೇಳೆ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಜೊತೆಯಲ್ಲಿದ್ದ ಸ್ನೇಹಿತ ತಕ್ಷಣ ಸಮೀಪದ ಅರಣ್ಯ ಇಲಾಖೆ ಸಿಬ್ಬಂದಿಗೆ ಸುದ್ದಿ ತಿಳಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ, ಅಗ್ನಿಶಾಮಕ ದಳ ಸಿಬ್ಬಂದಿ, ಸ್ಥಳೀಯರ ಸಹಕಾರದಿಂದ ಹುಡುಕಿದರೂ ಇದುವರೆಗೆ ಮೃತ ದೇಹ ಪತ್ತೆಯಾಗಿಲ್ಲ. ಶರತ್ ಅವರು ಕೆಳಗೆ ಬೀಳುತ್ತಿರುವ ದೃಶ್ಯವು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ವಿಡಿಯೋ ವೈರಲ್ ಆಗಿದೆ.