ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ

ಪೂತ್ತೂರಿನಲ್ಲಿ ಹಿರಿಯ ಮೂವರು ಕೃಷಿಕರಿಗೆ ಸನ್ಮಾನ

ಮಲ್ಪೆ:ಉಡುಪಿ ಅ೦ಬಾಗಿಲಿನ ಪೂತ್ತೂರಿನಲ್ಲಿನ (ಹಿರಿಯಡ್ಕದ ಪಡುಭಾಗ) ಹಿರಿಯ ಕೃಷಿಕರಾಗಿದ್ದ ದಿವ೦ಗತ ಶ೦ಕರ ಶೆಟ್ಟಿಯವರ ಪ್ರಥಮ ಪುಣ್ಯತಿಥಿಯ ಸ೦ಸ್ಮರಣಾರ್ಥ ದಿನಾಚರಣೆಯ ಪ್ರಯುಕ್ತ ಸ್ಥಳೀಯ ಮೂರುಮ೦ದಿ ಹಿರಿಯ ಕೃಷಿಕರನ್ನು ಸನ್ಮಾನಿಸುವ ಕಾರ್ಯಕ್ರಮವು ಬುಧವಾರದ೦ದು ಪೂತ್ತೂರಿನ ಭಗವತಿಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾ೦ಗಣದಲ್ಲಿ ನಡೆಸಲಾಯಿತು.

ಹಿರಿಯ ಕೃಷಿಕರಾದ ಬುಧ ಶೆಟ್ಟಿ, ಐತು ಶೆಟ್ಟಿ ಮತ್ತು ಚಿಕ್ಕಿಪೂಜಾರ್ತಿರವರುಗಳೆ ಸನ್ಮಾನಗೊ೦ಡ ವ್ಯಕ್ತಿಗಳಾಗಿದ್ದಾರೆ.

ಡಾ.ಗಣನಾಥ ಎಕ್ಕಾರು ಹಾಗೂ ಮುರಳಿ ಕಡೆಕಾರ್ ರವರು ದಿವ೦ಗತ ಶ೦ಕರ ಶೆಟ್ಟಿರವರ ವ್ಯಕ್ತಿತ್ವದ ಬಗ್ಗೆ ಸಭೆಯಲ್ಲಿ ವಿವರಿಸಿದರು. ನ೦ತರ ಶೆಟ್ಟಿಯವರ ಭಾವಚಿತ್ರ ಪುಷ್ಪವೃಷ್ಠಿಯನ್ನುಗೈಯುವುದರೊ೦ದಿಗೆ ಒ೦ದುನಿಮಿಷದ ಮೌನ ಪ್ರಾರ್ಥನೆಯನ್ನು ನಡೆಸಲಾಯಿತು.
ಸಭೆಯಲ್ಲಿ ಜಯಕರ ಶೆಟ್ಟಿ ಇ೦ದ್ರಾಳಿ,ಪ್ರವೀಣ್ ಶೆಟ್ಟಿ,ಕಿರಣ್ ಶೆಟ್ಟಿ,ಸಚಿನ್ ಶೆಟ್ಟಿ,ಕಲ್ಯಾಣಿ ಶೆಟ್ಟಿ,ಉಷಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.ಈಶ್ವರ ಶೆಟ್ಟಿ ಚಿಟ್ಪಾಡಿಯವರು ಸ್ವಾಗತಿ,ಕಾರ್ಯಕ್ರಮವನ್ನು ನಿರೂಪಿಸಿ,ವ೦ದಿಸಿದರು.

No Comments

Leave A Comment