ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ವಿರೋಧ ಪಕ್ಷಗಳ ಒಗ್ಗಟ್ಟನ್ನು ಕಂಡು ಮಳೆಯಲ್ಲಿ ನೆನೆಯದೇ ನಡುಗುತ್ತಿರುವ ಮೋದಿ,ಬಿಜೆಪಿ ನಾಯಕರು -ಸುರೇಶ್ ಶೆಟ್ಟಿ ಬನ್ನಂಜೆ
ಉಡುಪಿ: ಡಬ್ಬಲ್ ಇಂಜಿನ್ ಸರ್ಕಾರ ಎಂದು ಹೆಸರೇಳಿಕೊಂಡು ದೇಶದ ಬಡ ಜನರಿಗೆ ರೈತರಿಗೆ ಕಾರ್ಮಿಕರಿಗೆ ಮಧ್ಯಮ ವರ್ಗದವರಿಗೆ ಮೋಸ ಮಾಡಿದ ಡಬಲ್ ಗೇಮ್ ಮೋದಿ ಸರ್ಕಾರ ಇದೀಗ ವಿಪಕ್ಷಗಳ ಒಗ್ಗಟ್ಟನ್ನು ಕಂಡು ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಾವು ಸೋಲುವುದು ಖಚಿತ ಎಂದು ಗೊತ್ತಾಗಿದೆ.
ಈ ಹಿಂದೆ ಕೇಂದ್ರದಲ್ಲಿ ಬಹುಮತ ಬಂದಾಗ ಎನ್ ಡಿ ಎ ಜೊತೆಗಿದ್ದ ಎಲ್ಲಾ ಮಿತ್ರ ಪಕ್ಷಗಳನ್ನು ಕಾಲಿನಿಂದ ಒದ್ದಂತೆ ದೂರ ಮಾಡಿ ಇದೀಗ ವಿರೋಧ ಪಕ್ಷಗಳು ಒಗ್ಗಟ್ಟನ್ನು ಕಂಡು ಮಳೆಯಲ್ಲಿ ನೆನೆಯದೇ ಮೋದಿ ನಾಯಕತ್ವದ ಬಿಜೆಪಿಯವರು ನಡುಗಿ ನಡುಗಿ ಈ ಹಿಂದೆ ತಾವು ಒದ್ದೋಡಿಸಿದಂತಹ ತಮ್ಮ ಮಾಜಿ ಮಿತ್ರ ಪಕ್ಷಗಳ ನಾಯಕರ. ಕೈ ಕಾಲು ಹಿಡಿದು ರತ್ನಗಂಬಳಿ ಹಾಕಿ ತಮ್ಮ ಎನ್ ಡಿ ಎ ತೆಕ್ಕೆಗೆ ಬರುವಂತೆ ಬೇಡಿಕೊಂಡು ಅವರನ್ನು ಒಗ್ಗೂಡಿಸುತ್ತಿರುವುದು ವಿಶ್ವಗುರುವಿಗೆ ನಾಚಿಕೆಗೇಡಿತನವಲ್ಲವೇ ನಮ್ಮ ದೇಶದ ಬಡ ಜನರು ಕಾರ್ಮಿಕರು ಮಧ್ಯಮ ವರ್ಗದವರು ರೈತರು ಬುಡಕಟ್ಟು ಜನಾಂಗದವರು ಮೋದಿ ಅವರ ಬೆಂಬಲಕ್ಕೆ ಇಲ್ಲ ಎಂಬುದು ಸಾಬೀತಾಗಿದ್ದು ಈ ಭಾರತ ದೇಶದಲ್ಲಿ ಮೋದಿಗೆ ಬೆಂಬಲವೇ ಇಲ್ಲ ಎಂದು ತಿಳಿದು ಬೇರೆ ಬೇರೆ ಪಕ್ಷದ ನಾಯಕ ರನ್ನು ತಮ್ಮ ಬೆಂಬಲಕ್ಕೆ ಬರುವಂತೆ ಮೋದಿ ಹಾಗೂ ಬಿಜೆಪಿ ನಾಯ ಕರು ಬೇಡಿಕೊಳ್ಳುತ್ತಿದ್ದಾರೆ.
ಇವರಿಗೆ ಮುಂದೆ ತಮಗೆ ಸೋಲು ಖಚಿತ ಎಂಬುದು ಮನ ವರಿಕೆಯಾಗಿದ್ದು ಇದೀಗ ವಿರೋಧ ಪಕ್ಷದ ಎಲ್ಲಾ ನಾಯಕರ ವಿರುದ್ಧ ಇಲ್ಲಸಲ್ಲದ ಹೇಳಿಕೆಯನ್ನು ನೀಡಲು ಪ್ರಾರಂಭಿಸಿದ್ದಾರೆ ಇವರ ಬೆಲೆ ಏರಿಕೆ ನೀತಿಯಿಂದ ರೋ ಸಿ ಹೋದ ನಮ್ಮ ದೇಶದ ಜನಸಾಮಾನ್ಯರು ಯಾವತ್ತು ಇವರನ್ನು ಬೆಂಬಲಿಸುವುದಿಲ್ಲ .ಯಾವತ್ತು ಇವರನ್ನು ಕ್ಷಮಿಸುವುದು ಕೂಡ ಇಲ್ಲ ಇವರು ದೊಡ್ಡ ದೊಡ್ಡ ಉದ್ದಿಮೆಗಾರರ ಶ್ರೀಮಂತರ ಕೈ ಗೊಂಬೆಗಳು ಎಂಬುದು ಈ ದೇಶದ ಜನರಿಗೆ ಇದೀಗಲೇ ಮನಯವರಕೆಯಾಗಿದ್ದು ಕರ್ನಾಟಕ ರಾಜ್ಯದ ಮತದಾರರಂತೆ ಈ ದೇಶದ ಎಲ್ಲಾ ಮತದಾರರು ಇವರನ್ನು ಅಧಿಕಾರದಿಂದ ದೂರ ಇಡಲು ಇದೀಗಲೇ ಸಜ್ಜಗಿದ್ದಾರೆ ಎಂದು ಕಾ೦ಗ್ರೆಸ್ ನ ಉಡುಪಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ತಿಳಿಸಿರುತ್ತಾರೆ.