ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ

ನೇಪಾಳ: ನಾಪತ್ತೆಯಾಗಿದ್ದ ಹೆಲಿಕಾಪ್ಟರ್ ಪತನ, 6 ಶವಗಳು ಪತ್ತೆ, ಭರದಿಂದ ಸಾಗಿದ ಕಾರ್ಯಾಚರಣೆ

ಕಠ್ಮಂಡು: ನೇಪಾಳದಲ್ಲಿ ಮತ್ತೊಂದು ಹೆಲಿಕಾಪ್ಟರ್ ದುರಂತ ಸಂಭವಿಸಿದ್ದು, ಇಂದು ಬೆಳಗ್ಗೆ ಸಂಪರ್ಕ ಕಡಿತಗೊಂಡಿದ್ದ ಪ್ರಯಾಣಿಕ ಹೆಲಿಕಾಪ್ಟರ್ ಪತನವಾಗಿದೆ ಎಂದು ತಿಳಿದುಬಂದಿದೆ.

ಮಂಗಳವಾರ ನೇಪಾಳದ ಮೌಂಟ್ ಎವರೆಸ್ಟ್ ಪ್ರದೇಶದ ಬಳಿ ನಾಪತ್ತೆಯಾಗಿದ್ದ ಐವರು ಮೆಕ್ಸಿಕನ್ ಪ್ರಜೆಗಳು ಸೇರಿದಂತೆ ಆರು ಜನರಿದ್ದ ಖಾಸಗಿ ವಾಣಿಜ್ಯ ಹೆಲಿಕಾಪ್ಟರ್ ದೇಶದ ಪೂರ್ವ ಪ್ರದೇಶದ ಗುಡ್ಡಗಾಡು ಪ್ರದೇಶದಲ್ಲಿ ಪತನಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮನಂಗ್ ಏರ್ NA-MV ಚಾಪರ್ ಸೋಲುಖುಂಬು ಜಿಲ್ಲೆಯ ಸುರ್ಕೆ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 10:04 ಕ್ಕೆ ಕಠ್ಮಂಡುವಿಗೆ ಹೊರಟಿತು. ಮತ್ತು 10:13 ಕ್ಕೆ 12,000 ಅಡಿ ಎತ್ತರದಲ್ಲಿ ಇದ್ದಕ್ಕಿದ್ದಂತೆ ಸಂಪರ್ಕವನ್ನು ಕಳೆದುಕೊಂಡಿತು. ಇದೀಗ ಹೆಲಿಕಾಪ್ಟರ್ ಪತನವಾಗಿದೆ ಎಂದು ತಿಳಿದುಬಂದಿದೆ ಎಂದು ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (TIA) ವ್ಯವಸ್ಥಾಪಕ ಜ್ಞಾನೇಂದ್ರ ಭುಲ್ ಮಾಹಿತಿ ನೀಡಿದ್ದಾರೆ.

ಹೆಲಿಕಾಪ್ಟರ್‌ನಲ್ಲಿದ್ದ ಪ್ರಯಾಣಿಕರಲ್ಲಿ ಐವರು ಮೆಕ್ಸಿಕನ್ ಪ್ರಜೆಗಳಿದ್ದರು.ಹೆಲಿಕಾಪ್ಟರ್ ಅನ್ನು ಹಿರಿಯ ಕ್ಯಾಪ್ಟನ್ ಚೆಟ್ ಬಿ ಗುರುಂಗ್ ಚಾಲನೆ ಮಾಡುತ್ತಿದ್ದರು. ಇದೀಗ ಪೈಲಟ್ ಸಹಿತ ಹೆಲಿಕಾಪ್ಟರ್ ನಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ದೂರದ ಪರ್ವತ ಪ್ರದೇಶವಾದ ಸೊಲುಖುಂಬು ಜಿಲ್ಲೆಯ ಲಿಖುಪಿಕೆ ಗ್ರಾಮೀಣ ಪುರಸಭೆಯ ಲಮ್ಜುರಾ ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವುದರಿಂದ ವಿವರವಾದ ವರದಿ ಬರಬೇಕಿದೆ ಎಂದು ಟಿಐಎಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರೀ ಸ್ಫೋಟದೊಂದಿಗೆ ಹೆಲಿಕಾಪ್ಟರ್ ಪತನಗೊಂಡಿದ್ದು, ಅಪಘಾತದ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಚಿಹಂದಂಡದಲ್ಲಿ ಅಪಘಾತಕ್ಕೀಡಾದ ಹೆಲಿಕಾಪ್ಟರ್ ಅನ್ನು ಸ್ಥಳೀಯರು ಪತ್ತೆ ಮಾಡಿದ್ದಾರೆ ಎಂದು ಗ್ರಾಮೀಣ ಪುರಸಭೆಯ ಉಪಾಧ್ಯಕ್ಷ ನ್ವಾಂಗ್ ಲಕ್ಪಾ ಹೇಳಿದ್ದಾರೆ ಎಂದು ಕಠ್ಮಂಡು ಪೋಸ್ಟ್ ಪತ್ರಿಕೆ ವರದಿ ಮಾಡಿದೆ.

1997 ರಲ್ಲಿ ಸ್ಥಾಪನೆಯಾದ ಮನಂಗ್ ಏರ್ ಕಠ್ಮಂಡು ಮೂಲದ ಹೆಲಿಕಾಪ್ಟರ್ ಏರ್‌ಲೈನ್ ಆಗಿದೆ. ಇದು ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರದ ನಿಯಂತ್ರಣದ ಅಡಿಯಲ್ಲಿ ನೇಪಾಳದ ಪ್ರದೇಶದೊಳಗೆ ವಾಣಿಜ್ಯ ವಾಯು ಸಾರಿಗೆಯಲ್ಲಿ ಹೆಲಿಕಾಪ್ಟರ್‌ಗಳನ್ನು ನಿರ್ವಹಿಸುತ್ತಿದೆ. ಕಂಪನಿಯು ಚಾರ್ಟರ್ಡ್ ಸೇವೆಗಳನ್ನು ಒದಗಿಸುತ್ತದೆ ಮತ್ತು ಸಾಹಸ ವಿಮಾನಗಳು ಹೆಲಿಕಾಪ್ಟರ್ ವಿಹಾರಗಳು ಅಥವಾ ಯಾತ್ರೆಯಂತಹ ವೈಯಕ್ತಿಕ ಸೇವೆಗಳ ಮೇಲೆ ಕೇಂದ್ರೀಕರಿಸಿದೆ.

No Comments

Leave A Comment