ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ
ಜೂನ್ 24ರ೦ದು “ಸ್ನೇಹ-ಧರ್ಮ-ಕರ್ತವ್ಯ “ಚಿ೦ತನ ಮ೦ಥನ ಕಾರ್ಯಕ್ರಮ- “ಶ್ರೀಪೂರ್ಣಪ್ರಜ್ಞ ಯಕ್ಷಗಾನ ಗುರುಕುಲ”ದ ಉದ್ಘಾಟನೆ
ಉಡುಪಿ:ಶ್ರೀಕೃಷ್ಣಸೇವಾ ಬಳಗ,ಶ್ರೀಅದಮಾರು ಮಠ ಉಡುಪಿ ಇವರು ಆಯೋಜಿಸಿರುವ ವಿಶ್ವಾರ್ಪಣಮ್ ಕಾರ್ಯಕ್ರಮದ ಅ೦ಗವಾಗಿ ಜೂನ್ 24ರ ಶನಿವಾರದ೦ದು ಮಧ್ಯಾಹ್ನ 3.00ಗ೦ಟೆಗೆ ಉಡುಪಿಯ ಶ್ರೀಪೂರ್ಣಪ್ರಜ್ಞ ಆಡಿಟೋರಿಯ೦ನಲ್ಲಿ “ಸ್ನೇಹ-ಧರ್ಮ-ಕರ್ತವ್ಯ “ಚಿ೦ತನ ಮ೦ಥನ ಕಾರ್ಯಕ್ರಮವು ಜರಗಲಿದೆ. ಚಿ೦ತಕರಾದ ಶ್ರೀವಿಜಯಯ ಸಿ೦ಹ ತೋಟಿ೦ತಿಲ್ಲಾಯ ಮತ್ತು ಪುಷ್ಪಪಾಲ್ ಎಸ್ ಬೆ೦ಗಳೂರು,ಸ೦ಸ್ಥಾಪಕರಾದ,ಸಿ೦ಹವಾಹಿನಿ ಸೇವಾ ಟ್ರಸ್ಟ್ ಇವರಿ೦ದ ಈ ಕಾರ್ಯಕ್ರಮವು ಜರಗಲಿದೆ.
ಈ ಕಾರ್ಯಕ್ರಮವು ಶ್ರೀಅದಮಾರು ಮಠದ ಕಿರಿಯ ಯತಿಶ್ರೀಗಳಾದ ಶ್ರೀಈಶಪ್ರಿಯ ತೀರ್ಥಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಜರಗಲಿದೆ. ಇದೇ ಸ೦ದರ್ಭದಲ್ಲಿ ಯಕ್ಷಗುರು ಬನ್ನ೦ಜೆ ಸ೦ಜೀವ ಸುವರ್ಣರ ಸಾರಾಥ್ಯದಲ್ಲಿ ಗುರುಕುಲ ಪದ್ದತಿಯ ಯಕ್ಷಗಾನ ತರಬೇತಿಕೇ೦ದ್ರ “ಶ್ರೀಪೂರ್ಣಪ್ರಜ್ಞ ಯಕ್ಷಗಾನ ಗುರುಕುಲ“ದ ಉದ್ಘಾಟನೆಯು ಶ್ರೀಗಳ ದಿವ್ಯ ಹಸ್ತದಿ೦ದ ನೆರವೇರಲಿದೆ.