Log In
BREAKING NEWS >
ನವೆ೦ಬರ್ 27ರ೦ದು ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ದೀಪೋತ್ಸವ ಕಾರ್ಯಕ್ರಮ ಜರಗಲಿದೆ...

ಕಡಬ: ಇಂದು ಶುಭಾರಂಭಗೊಳ್ಳಬೇಕಾಗಿದ್ದ ಜ್ಯುವೆಲರಿ ಶಾಪ್ ನ ಮಾಲೀಕ ಶವವಾಗಿ ಪತ್ತೆ

ಕಡಬ:ಜೂ 22. ತನ್ನದೇ ಜುವೆಲ್ಲರಿ ಶಾಪ್ ಉದ್ಘಾಟನೆಯ ತಯಾರಿಯಲಿದ್ದ ಯುವಕನೋರ್ವನ ಮೃತದೇಹ ಅಪಘಾತದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಜೂ. 22ರ ಗುರುವಾರ ಕಂಡುಬಂದಿದೆ.

ಕಡಬ ನಿವಾಸಿ ದಯಾನಂದ ಆಚಾರ್ಯ ಅವರ ಪುತ್ರ ನಾಗಪ್ರಸಾದ್ ಮೃತಪಟ್ಟ ಯುವಕ. ಮರ್ಧಾಳದ ಮಸೀದಿ ಬಿಲ್ಡಿಂಗ್ ನಲ್ಲಿ ಇಂದು (ಜೂನ್ 22) ಐಶ್ವರ್ಯ ಗೋಲ್ಡ್ ಹೆಸರಿನ ಚಿನ್ನದಂಗಡಿ ಶುಭಾರಂಭಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ತಯಾರಿ ನಡೆಸಿಕೊಂಡಿದ್ದರು

ಆದರೆ ಇಂದು ಬೆಳಿಗ್ಗೆ ಸಕಲೇಶಪುರ ಠಾಣಾ ವ್ಯಾಪ್ತಿಯ ಗುಂಡ್ಯ ಕೆಂಪುಹೊಳೆ ಸಮೀಪ ಅಪಘಾತದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದೆ. ಘಟನೆಯ ಬಗ್ಗೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದು, ತನಿಖೆಯ ನಂತರವಷ್ಟೇ ನಿಖರ ಕಾರಣ ತಿಳಿದುಬರಬೇಕಿದೆ.

No Comments

Leave A Comment