ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...
ಮಂಗಳೂರು: ಕೊಲೆ ಯತ್ನ ಪ್ರಕರಣ – ನಾಲ್ವರು ಆರೋಪಿಗಳು ಪೊಲೀಸರ ವಶಕ್ಕೆ
ಮಂಗಳೂರು:ಜೂ 18. ನಗರದ ಖಾಸಗಿ ಕಾಲೇಜು ಬಳಿ ನಡೆದ ಕೊಲೆ ಯತ್ನ ಘಟನೆಗೆ ಸಂಬಂಧಿಸಿದಂತೆ ನಗರ ಉತ್ತರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕದ್ರಿ ಮಲ್ಲಿಕಟ್ಟೆ ನಿವಾಸಿ ಮೊಹಮ್ಮದ್ ತುಫೈಲ್ (20), ನೀರು ಮಾರ್ಗ ನಿವಾಸಿ ಮೊಹಮ್ಮದ್ ಅಫ್ರಿದ್ (19), ಮಕ್ಸುದ್ ಸಾಗ್ (21), ಬೋಳಾರ ಮುಳಿಹಿತ್ಲು ನಿವಾಸಿ ಅಬ್ದುಲ್ ಸತ್ತಾರ್ (19) ಎಂದು ಗುರುತಿಸಲಾಗಿದೆ.
ಜೂನ್ 16ರಂದು ರಾತ್ರಿ ಕಾಲೇಜು ಬಳಿ ಕಿನ್ನಿಗೋಳಿ ಏಳಿಂಜೆ ಯುವತಿಯೊಬ್ಬಳು ನಿದೀಶ್ ಎಂಬಾತನನ್ನು ಇನ್ಸ್ಟಾಗ್ರಾಮ್ ನಲ್ಲಿ ಸಂಪರ್ಕ ಮಾಡಿ ಮಾತನಾಡಲು ಬರುವಂತೆ ತಿಳಿಸಿದ್ದಾಳೆ. ನಿದೀಶ್ ತನ್ನಿಬ್ಬರು ಸ್ನೇಹಿತರೊಂದಿಗೆ ಸ್ಥಳಕ್ಕೆ ಬಂದಾಗ ಕಾರಿನಲ್ಲಿ ಬಂದ ಯುವತಿ ಮತ್ತು ಆಕೆಯ ಜತೆಯಲ್ಲಿದ್ದ ನಾಲ್ವರು ಆರೋಪಿಗಳು ನಿದೀಶ್ ಮತ್ತು ಸ್ನೇಹಿತರ ಜತೆ ಗಲಾಟೆ ಮಾಡಿದ್ದಾರೆ.
ಇನ್ನು ಈ ವೇಳೆ ನಿದೀಶ್ ಎಂಬಾತನಿಗೆ ಹೊಡೆದು, ಚೂರಿಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದು, ನಿದೀಶ್ ನ ಎದೆಯ ಎಡಭಾಗಕ್ಕೆ ಚೂರಿಯಿಂದ ಇರಿದು ಹಲ್ಲೆ ಮಾಡಲಾಗಿದ್ದು, ನಿದೀಶ್ ಸ್ನೇಹಿತರ ಮೇಲೂ ಆರೋಪಿಗಳು ಹಲ್ಲೆ ನಡೆಸಿದ್ದಾರೆ.
ಈ ಬಗ್ಗೆ ನಿದೀಶ್ ಸ್ನೇಹಿತ ನೀಲೆಶ್ ಎಂಬಾತ ಶನಿವಾರ ಮಧ್ಯಾಹ್ನ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ತನಿಖೆ ನಡೆಸಿದ ಪೊಲೀಸರು ಶನಿವಾರ ಸಂಜೆ ವೇಳೆಗೆ ನಗರದ ಬೈತುರ್ಲಿ ಬಳಿಯ ಫ್ಲ್ಯಾಟ್ ನಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.