`````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಓದುಗರಿಗೆ ಮತ್ತು ನಮ್ಮ ಜಾಹೀರಾತುದಾರರಿಗೆ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು``````````````
ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡು ಮಾನಸಿಕರಾದ ಬಿಜೆಪಿ ನಾಯಕರು ಸುರೇಶ್ ಶೆಟ್ಟಿ ಬನ್ನಂಜೆ
ರಾಜ್ಯದಲ್ಲಿ ಅಧಿಕಾರವನ್ನು ಕಳೆದುಕೊಂಡಂತ ಬಿಜೆಪಿ ನಾಯಕರು ಮಾನಸಿಕ ರಾಗಿ ಮೆಂಟಲ್ ಗಳಂತೆ ವರ್ತಿಸುತ್ತಾ ಕಾಂಗ್ರೆಸ್ ಪಕ್ಷದ ವಿರುದ್ಧ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ರಾಷ್ಟ್ರೀಯ ಆಹಾರ ನಿಗಮ ನಮ್ಮ ರಾಜ್ಯಕ್ಕೆ ಅಕ್ಕಿಯನ್ನು ಕೊಡಲು ಮುಂದಾಗಿದ್ದು ನನ್ಖ್ಮಾನ್ಯ ನಮ್ಮ ಮುಖ್ಯಮಂತ್ರಿಸಿದ್ದರಾಮಯ್ಯನವರು ಅದಕ್ಕೆ ತಕ್ಕದಾದ ಬೆಲೆಯನ್ನು ಕೂಡ ನೀಡಿ ಅದನ್ನು ಪಡೆಯಲು ಮುಂದಾಗಿದ್ದು ಇದನ್ನು ಅರಿತ ಕೇಂದ್ರದ ಮೋದಿ ಸರಕಾರ ನಮ್ಮ ರಾಜ್ಯಕ್ಕೆ ಅಕ್ಕಿಯನ್ನು ನೀಡದಂತೆ ಆಹಾರ ನಿಗಮಕ್ಕೆ ನಿರ್ದೇಶಿಸಿದ್ದು ನಮ್ಮ ರಾಜ್ಯದ ಬಡ ಜನರ ಹೊಟ್ಟೆಗೆ ಹೊಡೆದಿದೆ ನಮ್ಮ ರಾಜ್ಯದ ಜನರ ವಿರುದ್ಧ ದ್ವೇಷವನ್ನು ಸಾಧಿಸುತ್ತಿದ್ದು ನಮ್ಮ ರಾಜ್ಯಕ್ಕೆ ರಾಜ್ಯದ ಜನತೆಗೆ ಅನ್ಯಾಯವನ್ನು ಮಾಡುತ್ತಿದೆ ಇದರ ಬಗ್ಗೆ ಚಕಾರವೆತ್ತದ ರಾಜ್ಯದ ಬಿಜೆಪಿ ನಾಯಕರು ನಮ್ಮ ಕಾಂಗ್ರೆಸ್ ಸರಕಾರದ ವಿರುದ್ಧ ಮಾತನಾಡುತ್ತಿದ್ದಾರೆ ಹೆಗಡೆವಾರು ಹಾಗೂ ಸಾರ್ವಂಕರ್ ಇವರುಗಳ ಪಠ್ಯವನ್ನು ತೆಗೆದು ಹಾಕಲು ಉದ್ದೇಶಿಸಿದ ರಾಜ್ಯ ಸರ್ಕಾರದ ವಿರುದ್ಧ ಅನಗತ್ಯ ಹೇಳಿಕೆ ನೀಡುತ್ತಿದ್ದಾರೆ.
ನಮ್ಮ ರಾಜ್ಯದ ಮಕ್ಕಳಿಗೆ ಇವರ ಪಾಠದ ಅಗತ್ಯವೇ ಇಲ್ಲ ಒಬ್ಬರು ನಕಲಿ ಹಿಂದುತ್ವವಾದಿ ಮತ್ತೊಬ್ಬರು ನಕಲಿ ಸ್ವಾತಂತ್ರ್ಯ ಹೋರಾಟಗಾರ ಇವರ ಅಗತ್ಯತೆ ಬಿಜೆಪಿಯವರಿಗೆ ಮಾತ್ರ ಬೇಕಾಗಿರುವುದು ಆದರೆ ನಮ್ಮ ರಾಜ್ಯದ ಮಕ್ಕಳಿಗೆ ಇವರ ಪಠ್ಯದ ಅಗತ್ಯವೇ ಇಲ್ಲ ಎಂಬುದನ್ನು ರಾಜ್ಯದ ಬಿಜೆಪಿ ನಾಯಕರು ತಿಳಿದುಕೊಂಡರೆ ಒಳಿತು.
ಅನಗತ್ಯವಾಗಿ ಮಾನಸಿಕ ಸ್ತಿಮಿತವನ್ನು ಕಳೆದುಕೊಂಡು ಮಾತನಾಡುವುದನ್ನು ಕೂಡಲೇ ನಿಲ್ಲಿಸಿ ರಾಜ್ಯದ ಜನರಿಗೆ ಒಳಿತಾಗುವಂತೆ ವರ್ತಿಸಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ಬಿಜೆಪಿ ನಾಯಕರಿಗೆ ತೀಕ್ಷ್ಣವಾದ ಉತ್ತರವನ್ನು ನೀಡಿರುತ್ತಾರೆ.