ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ
ಶಿವಮೊಗ್ಗ: ನಾಲ್ವರು ಪೊಲೀಸರಿಂದ ಥಳಿತ, ವ್ಯಕ್ತಿ ಆತ್ಮಹತ್ಯೆ!
ಶಿವಮೊಗ್ಗ: ನಾಲ್ವರು ಪೊಲೀಸರು ಥಳಿಸಿದ್ದರಿಂದ ಮನನೊಂದ ಕಾರ್ಮಿಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವ್ಯಕ್ತಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ನಾಲ್ವರು ಸಿಬ್ಬಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ದಿನಗೂಲಿ ಕಾರ್ಮಿಕ ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡ ದಿನಗೂಲಿ ಕಾರ್ಮಿಕ, ಮೃತರ ಪತ್ನಿ ನೀಡಿದ ದೂರಿನ ಪ್ರಕಾರ, ಜೂನ್ 11 ರಂದು ಹೊಳೆಹೊನ್ನೂರು ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿಗಳಾದ ಬಿಲ್ಲಾಲ್ ಮತ್ತು ಲಿಂಗೇಗೌಡ ಹಾಗೂ ಇನ್ನಿಬ್ಬರಾದ ಸುದರ್ಶನ್ ಮತ್ತು ವಿಶ್ವನಾಥ್ ಹೊಳೆಹೊನ್ನೂರಿನ ಪಟ್ಟಣ ಪಂಚಾಯಿತಿ ಬಳಿ ಮಂಜುನಾಥನಿಗೆ ಥಳಿಸಿದ್ದಾರೆ. ಬಳಿಕ ಠಾಣೆಗೆ ಕರೆದೊಯ್ದು ಸಂಬಂಧಿಕರು ಠಾಣೆಗೆ ತೆರಳಿದ ಬಳಿಕ ಹೊರಗೆ ಕಳುಹಿಸಿದ್ದಾರೆ.
ಘಟನೆಯ ನಂತರ ಮಂಜುನಾಥ್ ಮನನೊಂದಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಪತ್ನಿ ಗರ್ಭಿಣಿಯಾಗಿರುವ ಕಾರಣ ಮಂಜುನಾಥ್ ಜೂನ್ 15ರಂದು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಚುಚ್ಚುಮದ್ದು ಹಾಕಿಸಿ ಮನೆಗೆ ಮರಳಿದ್ದರು. ಅದೇ ದಿನ ರಾತ್ರಿ ಮಂಜುನಾಥ್ ಕ್ರಿಕೆಟ್ ನೋಡಬೇಕು ಎಂದು ಪಕ್ಕದ ಕೋಣೆಯಲ್ಲಿ ಮಲಗುವುದಾಗಿ ಪತ್ನಿಗೆ ಹೇಳಿದ್ದ. ಮರುದಿನ ಬೆಳಗ್ಗೆ ಕೊಠಡಿ ತೆರೆಯದಿದ್ದಾಗ ಪತ್ನಿ ಸಂಬಂಧಿಕರಿಗೆ ಕರೆ ಮಾಡಿದ್ದಾರೆ. ಕೊಠಡಿಯ ಕಿಟಕಿ ಒಡೆದು ನೋಡಿದಾಗ ಮಂಜುನಾಥ್ ಶವವಾಗಿ ಪತ್ತೆಯಾಗಿದ್ದಾರೆ. ನಾಲ್ವರು ಸಿಬ್ಬಂದಿ ವಿರುದ್ಧ ಅವರ ಪತ್ನಿ ಪ್ರಕರಣ ದಾಖಲಿಸಿದ್ದಾರೆ.