ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಬಿಡುಗಡೆಯಾದ ಮೊದಲ ದಿನವೇ ವಿಶ್ವದಾದ್ಯಂತ ರೂ. 140 ಕೋಟಿ ಬಾಚಿದ ‘ಅದಿಪುರುಷ’
ಭಾಸ್ ಅಭಿನಯದ ಬಹುನಿರೀಕ್ಷಿತ ‘ಆದಿಪುರುಷ’ ಬಿಡುಗಡೆಯಾದ ಮೊದಲ ದಿನವೇ ವಿಶ್ವದಾದ್ಯಂತ ರೂ. 140 ಕೋಟಿ ಕಲೆಕ್ಷನ್ ಮಾಡಿದೆ. ಓಂ ರಾವತ್ ನಿರ್ದೇಶನದ ರಾಮಾಯಣ ಕೃತಿ ಆಧಾರಿತ ಸಿನಿಮಾ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೊದಲ ದಿನವೇ ಅತಿ ಹೆಚ್ಚು ಹಣ ಗಳಿಸಿದ ಮೊದಲ ಹಿಂದಿ ಚಿತ್ರವಾಗಿದೆ ಎಂದು ನಿರ್ಮಾಣ ಸಂಸ್ಥೆ ಟಿ- ಸಿರೀಸ್ ಶನಿವಾರ ತಿಳಿಸಿದೆ.
ಸಿನಿಮಾ ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವುದು ಗಲ್ಲಾಪೆಟ್ಟಿ ಮೇಲೆ ಪ್ರಭಾವ ಬೀರಿದೆ. ಈ ಅದ್ಬುತ ಚಿತ್ರ ವಿಶ್ವದಾದ್ಯಂತ ಬಾಕ್ಸ್ ಆಫೀಸ್ ನಲ್ಲಿ 140 ಕೋಟಿ ರೂ. ದೋಚುವ ಮೂಲಕ ಆರಂಭದಲ್ಲಿಯೇ ಪ್ರೇಕ್ಷಕರ ಹೃದಯ ಗೆದ್ದಿದೆ ಎಂದು ಚಿತ್ರ ನಿರ್ಮಾಪಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
3D ಚಮತ್ಕಾರದ ನಡುವೆ ಶುಕ್ರವಾರ ಬಿಡುಗಡೆಯಾದ ಬಹುಭಾಷಾ ಚಿತ್ರದಲ್ಲಿ ರಾಮನ ಪಾತ್ರದಲ್ಲಿ ಪ್ರಭಾಸ್, ಜಾನಕಿಯಾಗಿ ಕೃತಿ ಸನೋನ್ ಮತ್ತು ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸಿದ್ದಾರೆ. ಇದನ್ನು ಟಿ-ಸೀರೀಸ್‌ನ ಭೂಷಣ್ ಕುಮಾರ್ ನಿರ್ಮಿಸಿದ್ದಾರೆ.
ಆದಿ ಪುರುಷ್ ಮೊದಲ ದಿನದ ಕಲೆಕ್ಷನ್ ವಿಚಾರದಲ್ಲಿ ಹೃತಿಕ್ ರೋಷನ್ ಅಭಿನಯದ ವಾರ್, ರಣಬೀರ್ ಕಪೂರ್ ನಟಿಸಿರುವ ಬ್ರಹ್ಮಾಸ್ತ್ರ ಮತ್ತು ಶಾರೂಖ್ ಖಾನ್ ಅಭಿನಯದ ಪಠಾಣ್ ಚಿತ್ರಗಳಿಗಿಂತ ಅತಿ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ತೆಲುಗು, ಕನ್ನಡ ಮತ್ತು ತಮಿಳಿನಲ್ಲಿ ಬಿಡುಗಡೆಯಾದ ಆದಿಪುರುಷನ ಮುಂಗಡ ಬುಕಿಂಗ್ ನಲ್ಲಿಯೂ ಬಂಪರ್ ಓಪನಿಂಗ್ ಬಗ್ಗೆ ವ್ಯಾಪಾರ ತಜ್ಞರು ಸುಳಿವು ನೀಡಿದ್ದು, ಮೊದಲ ದಿನ 80 ಕೋಟಿ ರೂಪಾಯಿಗಳಿಗಿಂತ ಹೆಚ್ಚು ವ್ಯವಹಾರ ಮಾಡಿದೆ ಎಂದಿದ್ದಾರೆ.
500 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾದ ಚಿತ್ರದ ಬಿಡುಗಡೆಗೆ ಮುನ್ನ ತಯಾರಕರು ಬೃಹತ್ ಪ್ರಚಾರ ಅಭಿಯಾನ ನಡೆಸಿದ್ದರು. ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ, ಪ್ರತಿ ಸ್ಕ್ರೀನಿಂಗ್‌ನಲ್ಲಿ ಭಗವಾನ್ ಹನುಮಾನ್‌ಗೆ ಒಂದು ಆಸನವನ್ನು ಮೀಸಲಿಡಲಾಗುವುದು ಎಂದು ನಿರ್ದೇಶಕರು ತಿಳಿಸಿದ್ದರು.