Log In
BREAKING NEWS >
````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಹಾಗೂ ಓದುಗರಿಗೆ ಶ್ರೀ ಗೌರಿ-ಗಣೇಶನ ಹಬ್ಬದ ಶುಭಾಶಯಗಳು```````

ರಾಜ್ ಕುಮಾರ್ ಉಪಾಧ್ಯಾಯ ಚಿಟ್ಪಾಡಿ ನಿಧನ-ಗಣ್ಯರಿ೦ದ ಸ೦ತಾಪ

ಉಡುಪಿ:ಉಡುಪಿಯ ಚಿಟ್ಪಾಡಿಯ ನಿವಾಸಿ ರಾಜ್ ಕುಮಾರ್ ಉಪಾಧ್ಯಾಯ(56)ರವರು ಶುಕ್ರವಾರದ೦ದು ಹೃದಯಾಘಾತದಿ೦ದ ನಿಧನ ಹೊ೦ದಿದ್ದಾರೆ. ಮೃತರು ಪತ್ರಿಕಾ ಏಜೆ೦ಟರಾಗಿ,ಹಾಲು ವಿತರಣೆಯನ್ನು ಹಾಗೂ ಉಡುಪಿಯಲ್ಲಿ ನಡೆಯುವ ಶುಭಕಾರ್ಯಕ್ರಮಗಳಲ್ಲಿ ಬಡಿಸುವ ವ್ಯವಸ್ಥೆಯನ್ನು ಉತ್ತಮವಾಗಿ ನಿರ್ವಹಣೆ ಮಾಡಿ ಉಡುಪಿ ಹಾಗೂ ರಥಬೀದಿಯಲ್ಲಿ ಉತ್ತಮ ಜನಮನ್ನಣೆಯನ್ನು ಹೊ೦ದಿದವರಾಗಿದ್ದರು.

ಇವರ ನಿಧನಕ್ಕೆ ಉಡುಪಿ ರಥಬೀದಿಯ ವ್ಯಾಪಾರಸ್ಥರು, ರಥಬೀದಿ ಗಣೇಶೋತ್ಸವ ಸಮತಿ ಹಾಗೂ ಅಪಾರ ಅಭಿಮಾನಿಗಳು ಸ೦ತಾಪವನ್ನು ಸೂಚಿಸಿರುತ್ತಾರೆ.  ಮೃತರು ಪತ್ನಿ ಹಾಗೂ ಒಬ್ಬ ಪುತ್ರ ಹಾಗೂ ಬ೦ಧುವರ್ಗದವರನ್ನು ಬಿಟ್ಟು ಅಗಲಿದ್ದಾರೆ.
ಕರಾವಳಿ ಕಿರಣ ಡಾಟ್ ಕಾ೦ ಇವರ ಅಗಲುವಿಕೆಗೆ ಸ೦ತಾಪವನ್ನು ಸೂಚಿಸಿದೆ.

No Comments

Leave A Comment