ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ

ಉಡುಪಿ: ಖ್ಯಾತ ಸ್ಯಾಕ್ಸೋಫೋನ್ ಗುರು ಅಲೆವೂರು ಸುಂದರ ಸೇರಿಗಾರ ಇನ್ನಿಲ್ಲ

ಉಡುಪಿ:ಜೂ 14.. ಖ್ಯಾತ ಸ್ಯಾಕ್ಸೋಫೋನ್ ವಾದಕ, ಮತ್ತು ಸ್ಯಾಕ್ಸೋಫೋನ್ ಗುರು ಉಡುಪಿಯ ಅಲೆವೂರು ಮೂಲದ ಸುಂದರ ಸೇರಿಗಾರ ಬುಧವಾರ ಜೂನ್ 14 ರಂದು ಬೆಳಿಗ್ಗೆ ನಿಧನರಾಗಿದ್ದಾರೆ. ಸುಂದರ ಸೇರಿಗಾರ ಅವರಿಗೆ 76 ವರ್ಷ ವಯಸ್ಸಾಗಿತ್ತು.

ಸುಂದರ ಸೇರಿಗಾರ್ ಅವರು ಉಡುಪಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರಥಮವಾಗಿ ಸ್ಯಾಕ್ಸೋಫೋನ್ ವಾದನದ ಕಲಿಕೆಯನ್ನು ಆರಂಭಿಸಿದ್ದರು. ಉಡುಪಿ ಮಂಗಳೂರು ಭಾಗದಲ್ಲಿ ಸ್ಯಾಕ್ಸೋಫೋನ್ ಗುರುಗಳಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಸ್ಯಾಕ್ಸೋಫೋನ್ ಅನ್ನು ಕಲಿಸಿಕೊಟ್ಟಿದ್ದಾರೆ. ಸುಂದರ ಸೇರಿಗಾರ್ ಅವರಲ್ಲಿ ಸ್ಯಾಕ್ಸೋಫೋನ್ ವಾದನವನ್ನು ಕಲಿತ ವಿದ್ಯಾರ್ಥಿಗಳು ಇಂದು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಯಾಕ್ಸೋಫೋನ್ ವಾದನದ ಪ್ರದರ್ಶನಗಳನ್ನು ನೀಡುತ್ತಿದ್ದಾರೆ.

ಸುಂದರ ಸೇರಿಗಾರ ಮಹಿಳೆಯರಿಗೆ ಸ್ಯಾಕ್ಸೋಫೋನ್ ತರಬೇತಿ ಯನ್ನು ನೀಡಿದವರಲ್ಲಿ ಪ್ರಥಮತರು.

ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಕೂಡಾ ಲಭಿಸಿತ್ತು. ಕರ್ನಾಟಕ ಮಾತ್ರವಲ್ಲದೇ ಕೇರಳ, ಹೈದರಾಬಾದ್, ತಮಿಳುನಾಡು, ಗೋವಾ, ಮುಂಬಯಿ, ಮತ್ತು ದೇಶದ ವಿವಿಧ ಭಾಗಗಳಲ್ಲಿ ಸ್ಯಾಕ್ಸೋಫೋನ್ ತರಗತಿಗಳನ್ನು ನಡೆಸಿಕೊಟ್ಟದ್ದಾರೆ, ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ಉತ್ಸವ ಸಂಧರ್ಭದಲ್ಲಿ ಸುಂದರ ಸೇರಿಗಾರ ಅವರು ಸೇವೆಯನ್ನು ನಡೆಸಿಕೊಡುತ್ತಿದ್ದರು.

ಸೇರಿಗಾರ ಅವರ ಮೊಮ್ಮಗಳು ಪೂಜಾ ದೇವಾಡಿಗ ಮುಂಬಯಿಯಲ್ಲಿ ಖ್ಯಾತ ಸ್ಯಾಕ್ಸೋಫೋನಿಸ್ಟ್ ಆಗಿದ್ದಾರೆ, ಇವರು ಓರ್ವ ಪುತ್ರ, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ. ಸುಂದರ ಸೇರಿಗಾರ ಅವರು ಇಂಟರ್ನ್ಯಾಷನಲ್ ವರ್ಚುವಲ್ ಪೀಸ್ ಯುನಿವರ್ಸಿಟಿ ಯಿಂದ ಗೌರವ ಡಾಕ್ಟರೇಟ್ ಪದವಿಯನ್ನು ಮತ್ತು ವಿವಿಧ ಸಂಘ ಸಂಸ್ಥೆಗಳಿಂದ ಗೌರವವನ್ನು ಕೂಡಾ ಪಡೆದಿದ್ದರು.

No Comments

Leave A Comment