ಚಿಕ್ಕಮಗಳೂರು: ಡಿಸೆಂಬರ್ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್
ವಿದ್ಯುತ್ ದರ ಏರಿಕೆ ಖಂಡಿಸಿ ಮೆಸ್ಕಾಂ ಕಚೇರಿ ಮುಂದೆ ಬಿಜೆಪಿ ಪ್ರತಿಭಟನೆ; ಕಲ್ಲು ತೂರಿದ ಕಾರ್ಯಕರ್ತ ಅರೆಸ್ಟ್
ಶಿವಮೊಗ್ಗ: ವಿದ್ಯುತ್ ದರ ಏರಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ಜೋರಾಗಿವೆ. ಅದರಂತೆ ಇಂದು(ಜೂ.14) ಮೆಸ್ಕಾಂ ಕಚೇರಿ ಮುಂದೆ ಬಿಜೆಪಿ(BJP) ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂಧನ ಸಚಿವ ಕೆ.ಜೆ.ಜಾರ್ಜ್ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿ ಶಾಸಕ ಎಸ್.ಎನ್ ಚನ್ನಬಸಪ್ಪ(S.N Channabasappa) ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಕಾರ್ಯಕರ್ತರು ಕಚೇರಿ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಕಲ್ಲು ತೂರಿದ ಕಾರ್ಯಕರ್ತರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದು, ಓರ್ವ ಕಾರ್ಯಕರ್ತನನ್ನು ವಶಕ್ಕೆ ಪಡೆಯಲಾಗಿದೆ.
ಕೈಗಾರಿಕೆಗಳಿಗೂ ಕರೆಂಟ್ ಶಾಕ್: ಕೈಗಾರಿಕೆಗೆ ಬೀಗ ಹಾಕಿ, ಕೀ ಸರ್ಕಾರಕ್ಕೆ ಕೊಡ್ತೀವಿ ನೀವೇ ನಡೆಸಿ ಎಂದ ಪೀಣ್ಯ ಕೈಗಾರಿಕೆ ಸಂಘ
ಬೆಂಗಳೂರು: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಒಂದು ಕಡೆ ಉಚಿತ ವಿದ್ಯುತ್ ಎಂದು ಘೋಷಿಸಿ ಅದಕ್ಕೆ ಷರತ್ತುಗಳನ್ನು ವಿಧಿಸಿದೆ. ಮತ್ತೊಂದೆಡೆ ಉಚಿತ ವಿದ್ಯುತ್ ಪಡೆಯುವ ಮೊದಲೇ ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆಯ ಶಾಕ್ ತಗುಲಿದೆ. 200 ರೂಪಾಯಿ ವಿದ್ಯುತ್ ಬಿಲ್ ಬರುತ್ತಿದ್ದದ್ದು, ಜೂನ್‌ನಲ್ಲಿ 600 ರೂಪಾಯಿ ಬಂದಿದ್ದರೆ, 500 ರೂಪಾಯಿ ಕಟ್ಟುತ್ತಿರುವವರು, ಜೂನ್‌ನಲ್ಲಿ 1500-1800 ರೂಪಾಯಿವರೆಗೆ ವಿದ್ಯುತ್ ಬಿಲ್ ಕಂಡು ಶಾಕ್ ಆಗಿದ್ದಾರೆ. ಇನ್ನು ಜನಸಾಮಾನ್ಯರದೊಂದು ಸಮಸ್ಯೆಯಾದ್ರೆ, ಕೈಗಾರಿಕೆಗಳು ಕೂಡ ವಿದ್ಯುತ್ ದರ ಏರಿಕೆಗೆ ಕಂಗಾಲಾಗಿವೆ. ವಿದ್ಯುತ್ ಬಿಲ್ಗೆ ಬೆದರಿ ಸಣ್ಣ ಕೈಗಾರಿಕೆಗಳು ಬಳಲಿ ಬೆಂಡಾಗಿವೆ.
ಕೈಗಾರಿಕೆಗೆ ಬೀಗ ಹಾಕಿ ಸರ್ಕಾರಕ್ಕೆ ನಡೆಸುವಂತೆ ಕೀ ಕೊಡಲು ಪೀಣ್ಯ ಸಣ್ಣ ಕೈಗಾರಿಕೆಗಳು ಮುಂದಾಗಿವೆ. ಏಷ್ಯಾದಲ್ಲಿ ಸುಪ್ರಸಿದ್ದ, ಖ್ಯಾತಿ ಪಡೆದಿರುವ ಬೆಂಗಳೂರಿನ ಪೀಣ್ಯ ಕೈಗಾರಿಕೆಯು ಮೆಕಾನಿಕಲ್, ಗಾರ್ಮೆಂಟ್ ಸಣ್ಣ ಕೈಗಾರಿಕೆಗೆ ಹೆಸರುವಾಸಿ. ಆದ್ರೆ, ಈಗ ಕರೆಂಟ್ ಯೂನಿಟ್ ಬೆಲೆ ಹಾಗೂ ನಿಗಧಿತ ಶುಲ್ಕ ಹೆಚ್ಚಳದಿಂದ ಕೈಗಾರಿಕೆ ನಡೆಸಲು ಭಾರೀ ಸಮಸ್ಯೆ ಎದುರಾಗಿದೆ. ಇನ್ನು ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ಕೊಡಿ. ಅದು ಬಿಟ್ಟು ಈ ರೀತಿ ಕರೆಂಟ್ ಶಾಕ್ ಕೊಡಬೇಡಿ. 4 ಸಾವಿರಕ್ಕೂ ಹೆಚ್ಚು ಮೆಕಾನಿಕಲ್ ಸಣ್ಣ ಕೈಗಾರಿಕೆಗಳಿಗೆ ಸಂಕಷ್ಟ ಎದುರಾಗಿದೆ. ಹೀಗೆ ಮುಂದುವರೆದ್ರೆ ಕೈಗಾರಿಕೆ ಬೀಗ ಹಾಕಿ ಅದರ ಕೀ ನಿಮಗೆ ಕೊಡ್ತೀವಿ, ನೀವೇ ನಡೆಸಿ ಎಂದು ಪೀಣ್ಯ ಕೈಗಾರಿಕೆ ಸಂಘದ ಅಧ್ಯಕ್ಷ ಮಂಜುನಾಥ್ ಅವರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.