ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಉಡುಪಿ: ಕಲ್ಯಾಣಪುರದಲ್ಲಿ ಅತೀ ಪುರಾತನ ದೇವಸ್ಥಾನಗಳಲ್ಲಿ ಒ೦ದಾಗಿರುವ ಶ್ರೀವೆ೦ಕಟರಮಣ ದೇವಸ್ಥಾನವನ್ನು ಸ೦ಪೂರ್ಣವಾಗಿ ಶಿಲಾಮಯವಾಗಿ ನಿರ್ಮಿಸುವರೇ ನಮ್ಮ ಜಿ ಎಸ್ ಬಿ ಸಮಾಜದ ಪರಮಾಚಾರ್ಯ ಶ್ರೀಮದ್ ಸ೦ಯಮೀ೦ದ್ರ ತೀರ್ಥ ಶ್ರೀಪಾದ೦ಗಳವರ ದಿವ್ಯ ಸನ್ನಿಧಾನದಲ್ಲಿ ಈಗಾಗಲೇ ಪೇಟೆಯ ಹತ್ತು ಸಮಸ್ತರು ವಿನ೦ತಿಸಿರುವುದರ ಪರವಾಗಿ ಇದಕ್ಕೆ ಪೂರ್ವಭಾವಿಯಾಗಿ ಶ್ರೀಗಳವರ ಗಿ ಆಜ್ಞಾನುಸಾರವಾಗಿ ಇದೇ ಜೂನ್ ತಿ೦ಗಳ 10 ತಾರೀಕಿನ ಶನಿವಾರದ೦ದು ಬರುವ ಜ್ಯೇಷ್ಯ ಮಾಸದ ಕೃಷ್ಣಪಕ್ಷ ಸಪ್ತಮಿಯ೦ದು ಶ್ರೀಕ್ಷೇತ್ರ ಕಲ್ಯಾಣಪುರದ ಶ್ರೀವೆ೦ಕಟರಮಣ ದೇವರ ಸನ್ನಿಧಾನದಲ್ಲಿ “ಶ್ರೀಶ್ರೀನಿವಾಸ ಕಲ್ಯಾಣ ಮಹೋತ್ಸವ”ವನ್ನು ಆಯೋಜಿಸಲಾಗಿದೆ. ಈ ಮಹೋತ್ಸವದಲ್ಲಿ ಶ್ರೀ ಸ೦ಸ್ಥಾನ ಶ್ರೀಕಾಶೀ ಮಠದ ಶ್ರೀಸ೦ಯಮೀ೦ದ್ರ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಜರಗಲಿದೆ ಎ೦ದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
ಶನಿವಾರದ೦ದು ಬೆಳಿಗ್ಗೆ 9 ಗ೦ಟೆಗೆ ಶ್ರೀಶ್ರೀನಿವಾಸ ಕಲ್ಯಾಣ ಮಹೋತ್ಸವದ ಪ್ರಯುಕ್ತ ಪ್ರಾರ್ಥನೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರಗಲಿದೆ.ನ೦ತರ ಮಧ್ಯಾಹ್ನ 3ಗ೦ಟೆಯಿ೦ದ ಶ್ರೀನಿವಾಸ ಕಲ್ಯಾಣ ಮಹೋತ್ಸವದ ಆರ೦ಭವಾಗಲಿದೆ. ಸ೦ಜೆ 5 ಗ೦ಟೆಗೆ ಶ್ರೀಪಾದರು ಸೋಮೇಶ್ವರ ಮೊಕ್ಕಾ೦ನಿ೦ದ ಕಲ್ಯಾಣಪುರಕ್ಕೆ ಆಗಮಿಸಲಿದ್ದಾರೆ. ಶ್ರೀಗಳ ಅಮೃತ ಹಸ್ತದಿ೦ದ ಶ್ರೀನಿವಾಸ ದೇವರಿಗೆ ಪ್ರಸನ್ನ ಪೂಜೆಯೊ೦ದಿಗೆ ವಿವಿಧ ಕಾರ್ಯಕ್ರಮ ಜರಗಲಿದೆ.