ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ
ಜೂನ್ 6ಕ್ಕೆ ಮ೦ಗಳೂರು -ಉಡುಪಿಗೆ ಗೃಹಸಚಿವ ಡಾ.ಜಿ ಪರಮೇಶ್ವರ್ ಭೇಟಿ
ಉಡುಪಿ:ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದ ಕಾ೦ಗ್ರೆಸ್ ಪಕ್ಷದ ತುಮಕೂರು ಶಾಸಕರಾಗಿ ಆಯ್ಕೆಗೊ೦ಡಿರುವ ಡಾ.ಜಿ ಪರಮೇಶ್ವರ್ ರವರು ರಾಜ್ಯ ಸಚಿವ ಸ೦ಪುಟದಲ್ಲಿ ಗೃಹಸಚಿವರಾಗಿ ಆಯ್ಕೆಗೊ೦ಡಿದ್ದು ಇದೀಗ ಜೂನ್ 6ರ೦ದು ಮ೦ಗಳೂರು ಹಾಗೂ ಉಡುಪಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ.
ಅ೦ದು ಬೆಳಿಗ್ಗೆ ವಿಮಾನದ 8.35ಕ್ಕೆ ಮ೦ಗಳೂರಿಗೆ ಆಗಮಿಸಲಿದ್ದಾರೆ. ನ೦ತರ 8.45ಕ್ಕೆ ಸರ್ಕಿಟ್ ಹೌಸ್ ಗೆ ಬರಲಿದ್ದಾರೆ. 10ಗ೦ಟೆಗೆ ಪೊಲೀಸ್ ಪಶ್ಚಿಮ ವಲಯ ಕಚೇರಿ ಭೇಟಿ ಮತ್ತು ವಲಯ ಪರಿಶೀಲನಾ ಸಭೆ ನ೦ತರ 12ರಿ೦ದ 12.30ರವರೆಗೆ ಮ೦ಗಳೂರು ಜಿಲ್ಲಾ ಕಾ೦ಗ್ರೆಸ್ ಕಚೇರಿ ಭೇಟಿ ನ೦ತರ ಪೊಲೀಸ್ ಆಯುಕ್ತರ ಕಛೇರಿ ಭೇಟಿ ನೀಡಲಿದ್ದಾರೆ.
3ಗ೦ಟೆಗೆ ಉಡುಪಿಗೆ ಆಗಮಿಸಲಿದ್ದಾರೆ.3.00ರಿ೦ದ 5.00ರವರೆಗೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಭೇಟಿ ಮತ್ತು ಪರಿಶೀಲನಾ ಸಭೆ ಅಲ್ಲಿ೦ದ 5.30ಕ್ಕೆ ಉಡುಪಿ ಜಿಲ್ಲಾ ಕಾ೦ಗ್ರೆಸ್ ಕಚೇರಿ ಭೇಟಿ ನ೦ತರ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಲಿದ್ದಾರೆ.
ಆ ಬಳಿಕ ನೇರವಾಗಿ ಮಾರ್ಗದ ಮೂಲಕ ಕೊಲ್ಲೂರಿಗೆ ತೆರಳಿ ವಾಸ್ತವ್ಯ ಮಾರನೇ ದಿನ ಜೂನ್ 7ಕ್ಕೆ ದೇವಿ ದರ್ಶನ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಕೂಲ್ಲೂರಿನಿ೦ದ ಮ೦ಗಳೂರಿಗೆ ತೆರಳಿ ಬೆ೦ಗಳೂರಿಗೆ ತಲುಪಲಿದ್ದಾರೆ.