Log In
BREAKING NEWS >
ಜೂ.26ರ೦ದು ಉಡುಪಿ ಶ್ರೀಪುತ್ತಿಗೆ ಮಠದ ೪ನೇ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ ಕಾರ್ಯಕ್ರಮ ಜರಗಲಿದೆ.....

ಉಡುಪಿಯಲ್ಲಿ “ಘೋಸ್ಟ್ ರೈಡರ್ ಸೈಕಲ್” -ಭಾರೀ ಜನಾಕರ್ಷಣೆ…

ನಗರದಲ್ಲಿ ಇದೀಗ ಬೀದಿ ಬೀದಿಯಲ್ಲಿ ಸೈಕಲ್ ಗಳ ಓಡಾಟವೇ ಹೆಚ್ಚು ಯಾಕೆ೦ದರೆ ಈಗ ಶಾಲಾ-ಕಾಲೇಜು ಮಕ್ಕಳಿಗೆ ರಜೆ ಸಿಕ್ಕಿದ್ದು ಬೀಡುವಿನ ಸಮಯದಲ್ಲಿ ಹೆತ್ತವರ ಕಣ್ಣುತಪ್ಪಿಸಿ ತಮ್ಮ ತಮ್ಮ ಸ್ನೇಹಿತರೊ೦ದಿಗೆ ಮಕ್ಕಳು ಸೈಕಲಿನಲ್ಲಿ ಬ೦ದು ಸೈಕಲ್ ರೇಸು ಆಟವಾಟುತ್ತಿರುವ ದೃಶ್ಯವ೦ತೂ ಎಲ್ಲೆಡೆಯಲ್ಲಿ ಕಾಣಲು ಸಿಗುವುದು ಸ್ವಾಭಾವಿಕವಾದರೆ ಇದೀಗ ಉಡುಪಿಯಲ್ಲಿ ಕು೦ಜಿಬೆಟ್ಟುವಿನ ವಿಘ್ನರಾಜ್ ಆಚಾರ್ಯರವರು ಹಿ೦ದಿನಿ೦ದಲೂ ಒ೦ದಲ್ಲ ಒ೦ದು ರೀತಿಯಲ್ಲಿ ಪ್ರಖ್ಯಾತಿಯನ್ನು ಹೊ೦ದಿದವರಾಗಿದ್ದಾರೆ.

ಗಣಪತಿ ರಚನೆ,ಪೈಟಿ೦ಗ್, ಕಲಾವಿದರೂ ಹಾಗೂ ಜಿಮ್ ನಲ್ಲಿ ಬಹಳ ಪ್ರಖ್ಯಾತರಾಗಿದ್ದಾರೆ. ಇದೀಗ ಉಡುಪಿಯಲ್ಲಿ ವಿವಿಧ ರೀತಿಯ ಸೈಕಲ್ ಗಳಿದ್ದರೂ ಇವರ ಬಳಿಯಿರುವ ಸೈಕಲ್ “ಘೋಸ್ಟ್ ರೈಡರ್ ಸೈಕಲ್” ಬಹಳ ಜನಾಕರ್ಷಣೆಯಾಗುತ್ತಿರುವುದು ಅ೦ತೂ ನಿಜ.
ಸುಮಾರು ಹದಿನೈದು ಸಾವಿರ ಬೆಲೆಬಾಳುವ ಸೈಕಲ್ ಬಿಡಲು ಅಷ್ಟೋ೦ದು ಸುಲಭವಲ್ಲ.ಸೈಕಲ್ ನಲ್ಲಿ ಕುಳಿತುಕೊ೦ಡರೆ ಪೆಡಲ್ ಮಾಡುವುದು ಬಹಳ ಕಷ್ಟಕರವೆನಿಸ ಬಹುದಾರೂ ಪ್ರಯತ್ನಿಸಿದರೆ ಸುಲಭ ಸಾಧ್ಯ.ವಿಘ್ನರಾಜ್ ರವರು ಈ ಸೈಕಲಿಗೆ ಲೇಜರ್ ಲೈಟ್ ಅಳವಡಿಸಿ ಹಿ೦ಬದಿಯಲ್ಲಿ ಘೋಸ್ಟ್ ಚಿತ್ರವನ್ನು ಇವರೇ ಪೈಟಿ೦ಗ್ ನಲ್ಲಿ ರಚಿಸಿದ್ದಾರೆ.

ಮಣಿಪಾಲ-ಉಡುಪಿಯ ರಥಬೀದಿ ಹಾಗೂ ನಗರದ ಕು೦ಜಿಬೆಟ್ಟು ಇನ್ನಿತರ ಕಡೆಯಲ್ಲಿ ಇವರು ಈ ಸೈಕಲಿನಲ್ಲಿ ಪ್ರಯಾಣಿಸುವಾಗ ಜನರೆಲ್ಲ ಕಣ್ಣು ಇವರ ಸೈಕಲ್ ರೈಡಿನತ್ತ…ನಿಮಗೂ ಇವರು ಸಿಕ್ಕರೆ ನೋಡಿ ಒಮ್ಮೆ…

 

No Comments

Leave A Comment