ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಬಂಟ್ವಾಳ: ಚುನಾವಣಾ ಪ್ರಚಾರ ವೇಳೆ ಕುಸಿದು ಬಿದ್ದು ಮೃತ್ಯು

ಬಂಟ್ವಾಳ:ಮೇ 05.ಬಿಜೆಪಿ ಪಕ್ಷದ ಅಭ್ಯರ್ಥಿ ಪರವಾಗಿ ಚುನಾವಣಾ ಪ್ರಚಾರಕ್ಕೆ ತೆರಳಿ ಮತಯಾಚನೆ ನಡೆಸುತ್ತಿದ್ದ ವ್ಯಕ್ತಿಯೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕಾವಳಮೂಡೂರು ಎಂಬಲ್ಲಿ ನಡೆದಿದೆ.

ಪ್ರವೀಣ್ ಚಂದ್ರ ನಾಯಕ್ (45) ಮೃತಪಟ್ಟ ವ್ಯಕ್ತಿ.

ಇನ್ನು ಪ್ರವೀಣ್ ಅವರು ವೃತ್ತಿಯಲ್ಲಿ ಛಾಯಗ್ರಾಹಕನಾಗಿದ್ದು, ಪಕ್ಷದ ಕ್ರಿಯಾಶೀಲ ಕಾರ್ಯಕರ್ತನಾಗಿದ್ದರು ಎನ್ನಲಾಗಿದೆ.

ಪ್ರಗತಿ ಪರ ಕೃಷಿಕನಾಗಿಯೂ ಗುರುತಿಸಿಕೊಂಡಿದ್ದ ಪ್ರವೀಣ್ ಅವರು ಇಂದು ಚುನಾವಣಾ ಪ್ರಚಾರದ ವೇಳೆ ತಲೆ ಸುತ್ತು ಕಂಡು ನೆಲಕ್ಕೆ ಬಿದ್ದಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ‌

No Comments

Leave A Comment