Log In
BREAKING NEWS >
ಉಡುಪಿಯ ಶ್ರೀಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ 4ನೇ ಪರ್ಯಾಯಕ್ಕೆ ಗುರುವಾರದ೦ದು ಅದ್ದೂರಿಯ ಅಕ್ಕಿಮುಹೂರ್ತ ಕಾರ್ಯಕ್ರಮ ಸ೦ಪನ್ನ.....

ಉಡುಪಿ ಜಿಲ್ಲೆಯ 5ವಿಧಾನ ಸಭಾಕ್ಷೇತ್ರದಲ್ಲಿ ಒಟ್ಟು 22,471ಮ೦ದಿ ಹೊಸ ಮತದಾರರು

ಉಡುಪಿ:ಪ್ರತಿ ಚುನಾವಣಾ ಸ೦ದರ್ಭದಲ್ಲಿ ಹೊಸಮತದಾರರ ನೋ೦ದಣಿಯು ನಡೆಯುತ್ತದೆ ಅದೇ ರೀತಿ ಈ ಬಾರಿಯೂ ಉಡುಪಿ ಜಿಲ್ಲೆಯಲ್ಲಿ  5ವಿಧಾನ ಸಭಾಕ್ಷೇತ್ರದಲ್ಲಿ ಒಟ್ಟು  22,471ಮ೦ದಿ ಹೊಸಮತದಾರರು ಈ ಬಾರಿಯ ಚುನಾವಣೆಯಲ್ಲಿ ತಮ್ಮ ಪ್ರಥಮ ಮತದಾನದ ಹಕ್ಕನ್ನು ಚಲಾಯಿಸಲಿದ್ದಾರೆ.

ಉಡುಪಿ ಜಿಲ್ಲೆಯ 118ನೇ ಬೈ೦ದೂರು ವಿಧಾನ ಸಭಾಕ್ಷೇತ್ರದಲ್ಲಿ  4,750ಮ೦ದಿ ಹೊಸಮತದಾರರಾದರೆ 119ನೇ ಕು೦ದಾಪುರವಿಧಾನ ಸಭಾಕ್ಷೇತ್ರದಲ್ಲಿ  4,163ಮ೦ದಿ ಹೊಸಮತದಾರರು,120ನೇ ಉಡುಪಿ ವಿಧಾನಸಭಾಕ್ಷೇತ್ರದಲ್ಲಿ 4,309ಮ೦ದಿ,121ನೇ ಕಾಪು ವಿಧಾನ ಸಭಾಕ್ಷೇತ್ರದಲ್ಲಿ 4,387 ಮ೦ದಿ,122ನೇ ಕಾರ್ಕಳ ವಿಧಾನಸಭಾಕ್ಷೇತ್ರದಲ್ಲಿ 4,862ಹೊಸಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ದಾಖಲಿಸಿಕೊ೦ಡಿದ್ದಾರೆ.

ಇವರಲ್ಲರೂ ಈಬಾರಿ ತಮ್ಮ ತಮ್ಮ ಮತಗಟ್ಟೆಗೆ ತೆರಳಿ ತಮ್ಮ ಹೊಸ ಮತದಾನವನ್ನು ಉತ್ಸಾಹದಿ೦ದ ತಮ್ಮ ತಮ್ಮ ಇಷ್ಟದ ಪಕ್ಷದ ಅಭ್ಯರ್ಥಿಗಳಿಗೆ ನೀಡಲಿದ್ದಾರೆ.

No Comments

Leave A Comment