ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ(Karnataka Assembly Elections 2023) ಕೇವಲ 8 ದಿನಗಳು ಮಾತ್ರ ಬಾಕಿ ಇವೆ. ಹೀಗಾಗಿ ರಾಜ್ಯಕೀಯ ನಾಯಕರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಮತ್ತೊಂದೆಡೆ ಇಂದು ಬೆಳಗ್ಗೆ ಕಾಂಗ್ರೆಸ್ನ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಕೆ ಶಿವಕುಮಾರ್(DK Shivakumar) ಕೋಲಾರದ ಮುಳುಬಾಗಿಲಿಗೆ ಪ್ರಯಾಣಿಸುವ ವೇಳೆ ಅವಘಡವೊಂದು ಸಂಭವಿಸಿದೆ. ಡಿಕೆ ಶಿವಕುಮಾರ್ ಮುಳುಬಾಗಿಲಿಗೆ ತೆರಳಲು ಹೆಚ್ಎಎಲ್ ಏರ್ಪೋರ್ಟ್ಗೆ ಬಂದಿದ್ದರು. ಆದ್ರೆ ಹೆಲಿಕಾಪ್ಟರ್ ಕೊಂಚ ದೂರ ಸಾಗಿ ತುರ್ತು ಭೂಸ್ಪರ್ಶವಾಗಿದೆ. ಏಕೆಂದರೆ ಹಾರಾಟ ವೇಳೆ ಹೆಲಿಕಾಪ್ಟರ್ ಮುಂಭಾಗದ ವಿಂಡೋ ಗಾಜು ಪುಡಿಪುಡಿಯಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಪ್ರಚಾರ ಹಿನ್ನೆಲೆ ಮುಳುಬಾಗಿಲಿಗೆ ತೆರಳಬೇಕಿತ್ತು. ಹೀಗಾಗಿ ಬೆಂಗಳೂರಿನ ಹೆಚ್ಎಎಲ್ನಿಂದ ಮುಳಬಾಗಿಲಿಗೆ ತೆರಳಲು ಹೆಲಿಕಾಪ್ಟರ್ ಹತ್ತಿದ್ದಾರೆ. ಕೊಂಚ ದೂರ ಸಾಗುತ್ತಿದ್ದಂತೆ ಹೆಲಿಕಾಪ್ಟರ್ಗೆ ರಣಹದ್ದು ಬಡಿದಿದೆ. ಇದರಿಂದ ಹೆಲಿಕಾಪ್ಟರ್ ವಿಂಡೋ ಗ್ಲಾಸ್ ಪುಡಿಪುಡಿಯಾಗಿದ್ದು ತಕ್ಷಣ ಎಚ್ಚೆತ್ತ ಪೈಲೆಟ್ ತುರ್ತು ಭೂಸ್ಪರ್ಶ ಮಾಡಿದ್ದಾರೆ. ರಣಹದ್ದು ಬಡಿಯುತ್ತಿದ್ದಂತೆ ಡಿಕೆ ಶಿವಕುಮಾರ್ ಕೆಲ ಸಮಯ ಗಾಬರಿಯಾಗಿದ್ದಾರೆ. ಸದ್ಯ ಯಾವುದೇ ಹಾನಿಯಾಗಿಲ್ಲ. ಹೆಲಿಕಾಪ್ಟರ್ ಸಿಬ್ಬಂದಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಟಿವಿ9 ಪ್ರತಿನಿಧಿ, ಕ್ಯಾಮರಾಮೆನ್ ಎಲ್ಲರೂ ಕೂಡ ಸುರಕ್ಷಿತರಾಗಿದ್ದಾರೆ. ಹೆಚ್ಎಎಲ್ ಏರ್ಪೋರ್ಟ್ಗೆ ಹಿಂದಿರುಗಿದ್ದಾರೆ. ಘಟನೆ ನಡೆದ ವೇಳೆ ಟಿವಿ9 ಪ್ರತಿನಿಧಿ ಡಿಕೆ ಶಿವಕುಮಾರ್ರೊಂದಿಗೆ ಸಂದರ್ಶನದಲ್ಲಿದ್ದರು.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ದೊಡ್ಡ ಹದ್ದು ಹೆಲಿಕಾಪ್ಟರ್ಗೆ ಗ್ಲಾಸ್ಗೆ ಹೊಡೆಯಿತು. ಹೊಸಕೋಟೆ ಹತ್ತಿರ ತೆರಳುತ್ತಿದ್ದಾಗ ಈ ಘಟನೆ ಆಗಿದೆ. ಘಟನೆಯಿಂದಾಗಿ ಹೆಲಿಕಾಪ್ಟರ್ ಗ್ಲಾಸ್ ಬ್ಲ್ಯಾಸ್ಟ್ ಆಗಿದೆ. ಪೈಲಟ್ ನಿಧಾನವಾಗಿಯೇ ಕೆಳಗೆ ಇಳಿಸಿದ್ದಾರೆ. ಸದ್ಯಕ್ಕೆ ಹೆಚ್ಎಎಲ್ಗೆ ವಾಪಸ್ ಆಗಿದ್ದೇನೆ. ಎಲ್ಲರೂ ಕೂಡ ಸುರಕ್ಷಿತವಾಗಿಯೇ ವಾಪಸಾಗಿದ್ದೇವೆ ಎಂದರು.