ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

RCB ದಾಖಲೆಗೆ ಕಂಟಕ ತಂದಿದ್ದ ‘ಲಕ್ನೋ ಸೂಪರ್’ ಬ್ಯಾಟಿಂಗ್, ಐಪಿಎಲ್ ಇತಿಹಾಸದ 2ನೇ ಗರಿಷ್ಠ ಮೊತ್ತ, ಹಲವು ದಾಖಲೆ ಧೂಳಿಪಟ

ಮೊಹಾಲಿ: ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೊಸಿಯೇಶನ್ ಐಎಸ್‌ ಬಿಂದ್ರಾ ಕ್ರೀಡಾಂಗಣದಲ್ಲಿ ಇಂದು ನಡೆದ ಪಂಜಾಬ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಅಕ್ಷರಶಃ ರನ್ ಗಳ ಮೇಘಸ್ಫೋಟವೇ ಸಂಭವಿಸಿತ್ತು.

ಐಪಿಎಲ್ ಟೂರ್ನಿಯಲ್ಲಿ ಇಂದು ನಡೆದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಪ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ರನ್ ಗಳ ಸುರಿಮಳೆಯೇ ಸುರಿದಿದ್ದು, ಉಭಯ ಇನ್ನಿಂಗ್ಸ್ ಗಳ 39.5 ಓವರ್ ನಲ್ಲಿ ಬರೊಬ್ಬರಿ 458 ರನ್ ಗಳು ಹರಿದು ಬಂದಿವೆ. ಅದರಲ್ಲೂ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ನಡೆಸಿದ್ದ ಲಕ್ನೋ ಸೂಪರ್ ಜೈಂಟ್ಸ್ ಅಕ್ಷರಶಃ ರನ್ ಗಳ ಮೇಘಸ್ಫೋಟವನ್ನೇ ಸುರಿಸಿದರು.

ಐಪಿಎಲ್ ಇತಿಹಾಸದ 2ನೇ ಗರಿಷ್ಠ ಮೊತ್ತ
ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ ಬರೊಬ್ಬರಿ 257 ರನ್‌ಗಳನ್ನು ಕಲೆ ಹಾಕಿತು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿಯೇ ಎರಡನೇ ಬಾರಿಗೆ 250ಕ್ಕೂ ಅಧಿಕ ರನ್‌ಗಳಿಸಿದಂತಾಗಿದೆ. ಇದು ಐಪಿಎಲ್ ಇತಿಹಾಸದಲ್ಲಿ ದಾಖಲಾದ ಎರಡನೇ ಅತಿ ಹೆಚ್ಚಿನ ಸ್ಕೋರ್ ಎನಿಸಿಕೊಂಡಿದೆ. ಈ ಪಟ್ಟಿಯಲ್ಲಿ ಆರ್‌ಸಿಬಿ ಮೊದಲ ಸ್ಥಾನದಲ್ಲಿದ್ದು 2013ರ ಆವೃತ್ತಿಯಲ್ಲಿ ಆರ್‌ಸಿಬಿ ಗಳಿಸಿದ 263/5 ರನ್ ಸಾರ್ವಕಾಲಿಕ ಶ್ರೇಷ್ಠ ಸ್ಕೋರ್ ಎನಿಸಿಕೊಂಡಿದೆ.

ಹಲವು ದಾಖಲೆ ಧೂಳಿಪಟ
ಈ ಬೃಹತ್ ರನ್ ಸ್ಕೋರಿಂಗ್ ಪಂದ್ಯ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದ್ದು, ಅತೀ ಹೆಚ್ಚು 200ಕ್ಕೂ ಅಧಿಕ ಟೀಂ ಟೋಟಲ್ ಕಂಡ ಐಪಿಎಲ್ ಟೂರ್ನಿಯಲ್ಲಿ ಹಾಲಿ ಟೂರ್ನಿ ಅಗ್ರ ಸ್ಥಾನದಲ್ಲಿದೆ. ಈ ಬಾರಿ ಟೂರ್ನಿ ಇನ್ನೂ ಅರ್ಧ ಹಾದಿಯಲ್ಲಿರುವಂತೆಯೇ ಬರೊಬ್ಬರಿ 20 ಬಾರಿ ತಂಡಗಳು 200ಕ್ಕೂ ಅಧಿಕ ರನ್ ಗಳಿಸಿವೆ. ಕಳೆದ ವರ್ಷದ ಟೂರ್ನಿಯಲ್ಲಿ 18 ಬಾರಿ 200ಕ್ಕೂ ಅಧಿಕ ರನ್ ಗಳಿಕೆಯಾಗಿತ್ತು. 2018ರಲ್ಲಿ 15 ಬಾರಿ 200ಕ್ಕೂ ಅಧಿಕ ರನ್ ಗಳಿಕೆ ಬಂದಿತ್ತು.

Most 200-plus team totals in an IPL season:
20 – 2023
18 – 2022
15 – 2018

ಐಪಿಎಲ್ ಇತಿಹಾಸದ 3ನೇ ಗರಿಷ್ಠ ಸ್ಕೋರ್ ಮ್ಯಾಚ್
ಇನ್ನು ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ರನ್ ಗಳು ಹರಿದುಬಂದ ಪಂದ್ಯಗಳ ಪಟ್ಟಿಯಲ್ಲಿ ಇಂದಿನ ಪಂದ್ಯ 3ನೇ ಸ್ಥಾನಕ್ಕೇರಿದ್ದು, ಈ ಹಿಂದೆ 2010ರಲ್ಲಿ ಚೆನ್ನೈ ಮತ್ತು ರಾಜಸ್ಥಾನ ನಡುವಿನ ಪಂದ್ಯದಲ್ಲಿ 469ರನ್ ಹರಿದು ಬಂದಿತ್ತು. ಇದು ಐಪಿಎಲ್ ಇತಿಹಾಸದ ಗರಿಷ್ಛ ಸ್ಕೋರಿಂಗ್ ಮ್ಯಾಚ್ ಆಗಿದೆ.

Highest match-aggregates in the IPL:
469 – CSK vs RR, Chennai, 2010
459 – PBKS vs KKR, Indore, 2018
458 – PBKS vs LSG, Mohali, today
453 – MI vs PBKS, Mumbai WS, 2017
449 – RR vs PBKS, Sharjah, 2020

ಐಪಿಎಲ್ ಇತಿಹಾಸದ 2ನೇ ಗರಿಷ್ಠ ಬೌಂಡರಿ (4s, 6s)ಗಳ ಪಂದ್ಯ
ಇನ್ನು ಇಂದಿನ ಪಂದ್ಯದಲ್ಲಿ ರನ್ ಗಳ ಸುರಿಮಳೆಯೇ ಹರಿದಿದ್ದು, ಈ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್ ನಲ್ಲಿ 45 ಫೋರ್ ಮತ್ತು 22 ಸಿಕ್ಸರ್ ಗಳ ಸಹಿತ ಒಟ್ಟು 67 ಬೌಂಡರಿಗಳು ಬಂದಿವೆ. ಆ ಮೂಲಕ ಈ ಪಂದ್ಯ ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಬೌಂಡರಿಗಳ ಕಂಡ 2ನೇ ಪಂದ್ಯ ಎಂಬ ದಾಖಲೆ ಬರೆದಿದೆ. ಇದಕ್ಕೂ ಮೊದರು 2010ರಲ್ಲಿ ಚೆನ್ನೈ ಮತ್ತು ರಾಜಸ್ಥಾನ ನಡುವಿನ ಪಂದ್ಯದಲ್ಲಿ 69 (39 ಫೋರ್, 30 ಸಿಕ್ಸರ್) ಬೌಂಡರಿಗಳು ಹರಿದುಬಂದಿದ್ದವು. ಇದು ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.

Highest boundary count in an IPL match (4s, 6s):
69 (39, 30) – CSK vs RR, Chennai, 2010
67 (45, 22) – PBKS vs LSG, Mohali, today
67 (36, 31) – PBKS vs KKR, Indore, 2018
65 (42, 23) – Deccan Chargers vs RR, Hyderabad, 2008

kiniudupi@rediffmail.com

No Comments

Leave A Comment