ಚಿಕ್ಕಮಗಳೂರು: ಡಿಸೆಂಬರ್ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್....ಮುಂದುವರೆದ ನಕ್ಸಲ್ ಕೂಂಬಿಂಗ್: ಶರಣಾಗತಿಗೆ ಸೂಚನೆ, ಪ್ಯಾಕೇಜ್ ನೀಡುತ್ತೇವೆ ಎಂದ ಪರಮೇಶ್ವರ್
ಕಾರು ಹತ್ತುವ ವೇಳೆ ಕುಸಿದ ಸಿದ್ದರಾಮಯ್ಯ, ತಕ್ಷಣ ವೈದ್ಯರಿಂದ ಉಪಚಾರ
ವಿಜಯನಗರ: ಪ್ರತಿಪಕ್ಷ ನಾಯಕ ನಾಯಕ ಸಿದ್ದರಾಮಯ್ಯ ಅವರು ತಮ್ಮ ಕಾರು ಹತ್ತುವಾಗ ಬಾಗಿಲ ಬಳಿಯೇ ಕುಸಿದು ಬಿದ್ದಿರುವ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಗಿಯಲ್ಲಿ ಶನಿವಾರ ನಡೆದಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ್ಲಗಿ ಕಾಂಗ್ರೆಸ್ ಅಭ್ಯರ್ಥಿ ಡಾ. ಎನ್ ಟಿ ಶ್ರೀನಿವಾಸ್ ಅವರ ಪರ ಪ್ರಚಾರ ಮಾಡುವುದಕ್ಕಾಗಿ ಹೆಲಿಕಾಪ್ಟರ್ ಮೂಲಕ ಕೂಡ್ಲಗಿಗೆ ಕೂಡ್ಲಿಗಿಗೆ ತೆರಳಿದ್ದರು.
ಹೆಲಿಕ್ಯಾಪ್ಟರನಿಂದ ಇಳಿದ ಕೂಡಲೇ ಮೊಬೈಲ್ನಲ್ಲಿ ಬ್ಯೂಸಿ ಆದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಕಾರಿನ ಬಳಿ ಆಗಮಿಸಿದ್ದಾರೆ. ನಂತರ ಕಾರಿನೊಳಗೆ ಕೂಡಬೇಕೆನ್ನುವಷ್ಟರಲ್ಲಿ ಬಾಗಿಲ ಬಳಿಯೇ ಕುಸಿದು ಬಿದ್ದಿದ್ದಾರೆ. ತಕ್ಷಣವೆ ಸ್ಥಳದಲ್ಲಿದ್ದ ಅವರ ಅಂಗರಕ್ಷಕ ನೆರವಿಗೆ ಧಾವಿಸಿ ಕೈ ಹಿಡಿದು ಎತ್ತಿದ್ದಾರೆ.
ನಂತರ ಕಾರಿನ ಸೀಟಿನ ಮೇಲೆ ಕೂಡಿಸಿ ವೈದ್ಯರು ಗುಕ್ಲೋಸ್ ನೀಡಿದ್ದಾರೆ. ಗುಕ್ಲೋಸ್ ಕುಡಿದ ಬಳಿಕ ಚೇತರಿಸಿಕೊಂಡು ಮತ್ತೆ ಸಿದ್ದರಾಮಯ್ಯ ಜನರತ್ತ ಕೈ ಬೀಸಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಬಿಡುವಿಲ್ಲದೆ ಓಡಾಡುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸ್ವಲ್ಪ ಸುಸ್ತು ಆದಂತೆ ಕಂಡುಬಂದರು.
ಗಾಬರಿ ಪಡುವಂತಹದ್ದೇನಿಲ್ಲ, ಗಟ್ಟಿಮುಟ್ಟಾಗಿದ್ದೇನೆ.
ನಿತ್ಯ ಅಡ್ಡಾಡುವ ಕಾರು ಬದಲಾಗಿರುವ ಕಾರಣ ಸೈಡ್ ಸ್ಟೆಪ್ ಇಲ್ಲದ ಕಾರಿನಲ್ಲಿ ಕಾಲು ಜಾರಿ ಹಿಂದಕ್ಕೆ ಮುಗ್ಗರಿಸಿದ್ದೆ.
ಈಗ ಆರಾಮಾಗಿದ್ದೇನೆ. ಇದನ್ನು ಅತಿರಂಜಿತ ರೀತಿಯಲ್ಲಿ ವರದಿಮಾಡಿ ಜನ ಗಾಬರಿ ಪಡುವಂತೆ ಮಾಡಬೇಡಿ ಎಂದು ಮಾಧ್ಯಮ ಮಿತ್ರರಲ್ಲಿ ವಿನಂತಿ. ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ