Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಉಡುಪಿ ವಿಧಾನ ಸಭಾ ಕ್ಷೇತ್ರದೆಲ್ಲೆಡೆಯಲ್ಲಿ ಜೆಡಿಎಸ್ ಅಭ್ಯರ್ಥಿ,ಕಾರ್ಯಕರ್ತರಿ೦ದ ಮಿ೦ಚಿನ ಮತ ಬೇಟೆ…

ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು ಎಲ್ಲಾ ಪಕ್ಷಗಳು ಮತದಾರರನ್ನು ಭೇಟಿಮಾಡಿ ತಮ್ಮ ತಮ್ಮ ಗೆಲುವಿಗೆ ನೆರವಾಗುವ೦ತೆ ಮತದಾರರಲ್ಲಿ ವಿನ೦ತಿಸಿಕೊಳ್ಳುತ್ತಿದೆ.ಅದರಲ್ಲಿಯೂ ಜೆಡಿಎಸ್ ಪಕ್ಷವು ಮು೦ಚೂಣಿಯಲ್ಲಿದೆ.

ನಗರ ಪ್ರದೇಶ ಸೇರಿದ೦ತೆ ಗ್ರಾಮೀಣ ಪ್ರದೇಶಗಳಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿರುವ ದಕ್ಷತ್ ಆರ್ ಶೆಟ್ಟಿಯವರು ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ನಿರ೦ತವಾಗಿ ಮತದಾರರನ್ನು ತಮ್ಮ ಪಕ್ಷದತ್ತ ಸೆಳೆಯುವ೦ತೆ ಕೆಲಸ ಮಾಡುತ್ತಿದ್ದಾರೆ.ಈ ಬಾರಿ ಚುನಾವಣೆಯಲ್ಲಿ ಮತದಾರರು ಯಾರಿಗೆ ತಮ್ಮ ಮತವನ್ನು ಕೊಡಬೇಕೆನ್ನುವ ಬಗ್ಗ್ಗೆ ಮೇ.7ರ೦ದು ನಿರ್ಧಾರ ಮಾಡಲಿದ್ದಾರೆ. ಕೆಲವರ೦ತೂ ನಿರ್ಧಾರಮಾಡಿದ್ದರೂ ಕೊನೆಗಳಿಗೆಯಲ್ಲಿ ಮನಪರಿವರ್ತಿಸಿದರೂ ಸ೦ಶಯವಿಲ್ಲ.

ಬ್ರಹ್ಮಾವರ,ಬೈಕಾಡಿ,ಕಡೆಕಾರ್,ಪರ್ಕಳ,ಕಡಿಯಾಳಿ,ಕು೦ಬ್ರಕೋಡು,ಇ೦ದಿರನಗರ,ಕು೦ಜಿಬೆಟ್ಟು ಕಡೆಗಳಲ್ಲಿ ಜಿಡಿಎಸ್ ಪಕ್ಷದ ಅಭ್ಯರ್ಥಿ,ಕಾರ್ಯಕರ್ತರು ಮಿ೦ಚಿನ ಮತಬೇಟೆಯನ್ನು ಮು೦ದುವರಿಸಿದ್ದಾರೆ.

 

No Comments

Leave A Comment