ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ
ಮಂಗಳೂರು:ಏ 27. ಬೆಳ್ತಂಗಡಿಯಿಂದ ಈ ಬಾರಿ ರಕ್ಷಿತ್ ಶಿವರಾಂ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು ಅವರನ್ನು ಗೆಲ್ಲಿಸಬೇಕೆಂದು ಬಿಲ್ಲವ ಸಮುದಾಯ ಪ್ರಯತ್ನ ಪಡುತ್ತಿದೆ. ಹಾಗಾಗಿ ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ಹರೀಶ್ ಪೂಂಜಾ ಅವರಿಗೆ ಈ ಬಾರಿ ಗೆಲುವಿನ ದಾರಿ ಕಠಿಣವಾಗಲಿದೆ ಎನ್ನಲಾಗುತ್ತಿದೆ.
ರಕ್ಷಿತ್ ಶಿವರಾಂ ಅವರು ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದು, ಈ ಬಾರಿ ಚುನಾವಣಾ ಕಣಕ್ಕೆ ಇಳಿಯುವ ಉದ್ದೇಶದಿಂದ ಸಾಕಷ್ಟು ಮೊದಲೇ ಹೋಂ ವರ್ಕ್ ಕೂಡಾ ಮಾಡಿದ್ದರು.
ಇತ್ತ ಹರೀಶ್ ಪೂಂಜ ಅವರು ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಆದರೆ ಅದರ ಜತೆಗೆ ಸ್ವಲ್ಪ ವಿರೋಧವನ್ನೂ ಪಡೆದುಕೊಂಡಿದ್ದಾರೆ. ಬಿಲ್ಲವರು ಕೂಡ ತಮ್ಮ ಸಮುದಾಯದ ಅಭ್ಯರ್ಥಿ ಪರವಾಗಿ ರಾಜಕೀಯ ಮರೆತು ಒಂದಾಗಿದ್ದಾರೆ.
ರಕ್ಷಿತ್ ಶಿವರಾಂ ಅವರ ವೈಯುಕ್ತಿಕ ವರ್ಚಸ್ಸು, ಅವರ ಕುಟುಂಬದ ಪ್ರಭಾವ ಮುಂತಾದವು ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೇಸ್ ಪರವಾದ ಅಲೆಯನ್ನು ಗಟ್ಟಿ ಮಾಡಿದೆ ಎಂದು ಹೇಳಲಾಗುತ್ತಿದೆ.
ಹರೀಶ್ ಪೂಂಜಾರ ಸಂಯಮವಿಲ್ಲ ವರ್ತನೆ, ಅರಣ್ಯಾಧಿಕಾರಿ ಸಂಧ್ಯಾ ಸಚಿನ್ ಅವರನ್ನು ಬೀದರ್ ಜಿಲ್ಲೆಗೆ ವರ್ಗಾವಣೆ ಮಾಡಲು ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಹೀಗೆ ಅನೇಕ ವಿಷಯಗಳಲ್ಲಿ ಈಗಾಗಲೇ ಪೂಂಜಾರ ಹೆಸರು ಕೇಳಿ ಬಂದಿತ್ತು.
ಇನ್ನು ರಕ್ಷಿತ್ ಶಿವರಾಂ ಅವರು ಈಗ ಕ್ಷೇತ್ರದಲ್ಲಿ ಕಾಡುತ್ತಿರುವ ಕುಡಿಯುವ ನೀರಿನ ಸಮಸ್ಯೆಗೆ ಆದ್ಯತೆಯಲ್ಲಿ ಸ್ಪಂದಿಸುತ್ತಿದ್ದಾರೆ. ಟ್ಯಾಂಕರ್ ಗಳಲ್ಲಿ ನೀರು ಪೂರೈಕೆ ಮಾಠಡಿಬೇಕಾದ ಕಾರ್ಯವನ್ನು ರಕ್ಷಿತ್ ಮಾಡುತ್ತಿದ್ದಾರೆ ಎಂಬ ಮಾತು ಕ್ಷೇತ್ರದ ಜನರಿಂದ ಕೇಳಿ ಬರುತ್ತಿದೆ.