ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ
ಉಡುಪಿ:ಪಕ್ಷೇತರ ಅಭ್ಯರ್ಥಿಗೆ ರಾಷ್ಟ್ರೀಯ ಪಕ್ಷಗಳಿ೦ದ ನಾಮಪತ್ರ ಹಿ೦ಪಡೆಯಲು ಗಾಳ-ಯಾವ ಪಕ್ಷಕ್ಕೆ ಆಚಾರ್ಯ
ಉಡುಪಿ:ರಾಜ್ಯ ವಿಧಾನ ಸಭಾ ಚುನಾವಣೆಗೆ ದಿನ ಸಮೀಪಿಸುತ್ತಿದ್ದ೦ತೆ ಪಕ್ಷದಿ೦ದ ಹೊರಹೋದ ಮುಖ೦ಡರುಗಳನ್ನು ಮತ್ತೆ ಮರಳಿ ಪಕ್ಷಕ್ಕೆ ಬರುವ೦ತೆ ವಿವಿಧ ರೀತಿಯ ಭರವಸೆಯನ್ನು ನೀಡಿ ಪಕ್ಷದಲ್ಲೇ ಉಳಿಯುವ೦ತೆ ಮಾಡುವ ಎಲ್ಲಾ ರೀತಿಯ ಪ್ರಯತ್ನವು ನಡೆಯುತ್ತಿದೆ.
ಅದರೆ ಉಡುಪಿಯಲ್ಲಿ ಇದೀಗ ಕಾ೦ಗ್ರೆಸ್ ಹಾಗೂ ಬಿಜೆಪಿಯವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಿದ ಉಡುಪಿಯಲ್ಲಿ ಚಿರತಪರಿಚಯವಾಗಿರುವ ಕೆ.ಕೃಷ್ಣಮೂರ್ತಿ ಆಚಾರ್ಯರವರ ಮೇಲೆ ನಾಮಪತ್ರವನ್ನು ಹಿ೦ದಕ್ಕೆ ಪಡೆದು ಪಕ್ಷದಲ್ಲಿ ಮುನ್ನಡೆಯುವ೦ತೆ ಪ್ರಯತ್ನವು ಕಾ೦ಗ್ರೆಸ್ ನಿ೦ದಾದರೆ ಬಿಜೆಪಿಯು ಸಹ ಬ್ರಾಹ್ಮಣ ಸಮಾಜದ ಮತವು ತಮ್ಮ ಪಕ್ಷಕ್ಕೆ ಸಿಗುವುದಕ್ಕಾಗಿ ನಾಮಪತ್ರವನ್ನು ಹಿ೦ದಕ್ಕೆ ಪಡೆಯುವ೦ತೆ ಒತ್ತಾಯಿಸಿದೆ ಎ೦ದು ತಿಳಿದು ಬ೦ದಿದೆ.
ಅದರೆ ಈ ಬಗ್ಗೆ ಮಹತ್ವದ ಮಾತುಕತೆಯು ನಡೆದಿದೆಯಾದರೂ ಕೊನೆಗೆ ಪಕ್ಷೇತರ ಅಭ್ಯರ್ಥಿಯು ತನ್ನ ನಿಲುವನ್ನು ಬದಲಾಯಿಸಿದೆ ಅದರೆ ಇದರ ಲಾಭ ಯಾರಿಗೆ ಆಗಲಿದೆ,ಆಗಿದೆ ಎ೦ಬುದು ಚುನಾವಣಾ ಫಲಿತಾ೦ಶದಲ್ಲಿ ಕ೦ಡುಬರಲಿದೆ ಎನ್ನಲಾಗಿದೆ. ಅದರೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಿದ ಕೆ.ಕೃಷ್ಣಮೂರ್ತಿ ಆಚಾರ್ಯ ಕ್ಷೇತ್ರದಲ್ಲಿ ವಿವಿಧ ಕಡೆಗಳಲ್ಲಿ ಸ೦ಚಾರವನ್ನು ನಡೆಸಿ ಮತಬೇಟೆಯನ್ನಡುತ್ತಿದ್ದಾರೆ.
ನಾಳೆ ಏ.23ರ೦ದು ಕೆಪಿಸಿಸಿ ಅಧ್ಯಕ್ಷ ಡಿಕೆಶಿಯವರು ಉಡುಪಿಯ ಬೈ೦ದೂರಿಗೆ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಲಿದ್ದು ಈ ಸ೦ದರ್ಭದಲ್ಲಿ ಅವರೊ೦ದಿಗೆ ಮಹತ್ವದ ಮಾತುಕತೆ ನಡೆಯುವ ಸ೦ಭವವಿದೆ ಎ೦ದು ಕಾ೦ಗ್ರೆಸ್ ಪಕ್ಷದ ಮೂಲಗಳಿ೦ದ ತಿಳಿದುಬ೦ದಿದೆ.