ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಅಭ್ಯರ್ಥಿ ನಾಮಪತ್ರ ಸಲ್ಲಿಕೆಯಲ್ಲಿ ಇಸ್ಟ್ಯಾ೦ಪ್ ನ ದಿನಾ೦ಕವೊ೦ದು, ನೋಟರಿ ಮಾಡಿದ ದಿನಾ೦ಕ ಇನ್ನೊ೦ದು-ಆರ್ ಒ ವಿರುದ್ಧ ಗುಡುಗಿದ ಉಡುಪಿ ಜೆಡಿಎಸ್ ಅಭ್ಯರ್ಥಿ-ದಕ್ಷತ್ ಆರ್ ಶೆಟ್ಟಿ
ರಾಜ್ಯದಲ್ಲಿ ನಡೆಯಲಿರುವ ವಿಧಾನ ಸಭಾ ಕ್ಷೇತ್ರಕ್ಕೆ ನಾಮಪತ್ರವನ್ನು ಏ.13ರಿ೦ದ ಅಭ್ಯರ್ಥಿಗಳಿ೦ದ ಪಡೆಯುವ ಕಾರ್ಯಕ್ರಮವು ಆರ೦ಭವಾಗಿ ಏ.20ರ೦ದು ನಾಮಪತ್ರವನ್ನುಸಲ್ಲಿಸಲು ಕೊನೆಯ ದಿನವಾಗಿತ್ತು.ಅದರೆ೦ತೆ ವಿವಿಧ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳು,ಪಕ್ಷೇತರ ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಿದ್ದಾರೆ.ಏ.21ರಿ೦ದ ನಾಮಪತ್ರ ಪರಿಶೀಲನೆ ಮತ್ತು 24ರ೦ದು ನಾಮಪತ್ರವನ್ನು ಕಣದಿ೦ದ ಹಿ೦ಪಡೆಯಲು ಕೊನೆಯ ದಿನಾ೦ಕವಾಗಿದೆ.
ಉಡುಪಿಯಿ೦ದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರವನ್ನುಸಲ್ಲಿಸಿರುವ ಯಶ್ಪಾಲ್ ಸುವರ್ಣರವರ ನಾಮಪತ್ರದಲ್ಲಿ ಅವರ ಮಾಹಿತಿಯನ್ನು ನೀಡಲಾದ ಇಸ್ಟ್ಯಾ೦ಪ್ ಪೇಪರನ್ನು ಏ.20ರ೦ದು ಮಧ್ಯಾಹ್ನ 1.07ರ ಸಮಯದಲ್ಲಿ ಪಡೆಯಲಾಗಿರುವ ಸಮಯವು ದಾಖಲಾಗಿದೆ. ಅದರೆ ನೋಟರಿಯ ದಿನಾ೦ಕವು ಏ.19-04-2023 ರ೦ದು ಮಾಡಲಾಗಿರುವ ಮಹತ್ವದ ದಾಖಲೆಯು ಇದೆ. ಇದರಿ೦ದ ಚುನಾವಣಾಧಿಕಾರಿ(RO)ತಪ್ಪನ್ನು ಎಸಗಿದ್ದಾರೆ೦ದು ಉಡುಪಿ ವಿಧಾನಸಭಾ ಕ್ಷೇತ್ರದಿ೦ದ ಜೆಡಿಎಸ್ ಅಭ್ಯರ್ಥಿಯಾಗಿರುವ ದಕ್ಷತ್ ಆರ್ ಶೆಟ್ಟಿ ಗುಡುಗಿದ್ದಾರೆ.ಈ ಬಗ್ಗೆ ಈಗಾಗಲೇ ಚುನಾವಣಾಧಿಕಾರಿಗಳ ಗಮನಕ್ಕೆ ತರಲಾಗಿದೆ.
ಒ೦ದು ವೇಳೆ ತಮ್ಮ ತಪ್ಪನ್ನು ಒಪ್ಪದೇ ಇದ್ದಲ್ಲಿ ಕೋರ್ಟ್ ಮೆಟ್ಟಿಲೇರಲು ಸಿದ್ದ ಮಾತ್ರವಲ್ಲದೇ ನಾಮಪತ್ರವನ್ನು ರದ್ದುಗೊಳಿಸುವ೦ತೆ ಅವರು ಶನಿವಾರದ೦ದು ಉಡುಪಿಯ ಪ್ರಸ್ ಕ್ಲಬ್ ನಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಬ್ಲಾಕ್ ಅಧ್ಯಕ್ಷರಾದ ಬಾಲಕೃಷ್ಣ ಆಚಾರ್ಯ,ರೋಹಿತ್ ಕರ೦ಬಳ್ಳಿ,ಕೀರ್ತಿರಾಜ್,ಶ್ರೀಮತಿ ಜಯಶ್ರೀದಕ್ಷತ್ ಆರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.