Log In
BREAKING NEWS >
ಜೂ.26ರ೦ದು ಉಡುಪಿ ಶ್ರೀಪುತ್ತಿಗೆ ಮಠದ ೪ನೇ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ ಕಾರ್ಯಕ್ರಮ ಜರಗಲಿದೆ.....

ಬಿಜೆಪಿ ಅಭ್ಯರ್ಥಿ‌ ವಿ.ಸುನೀಲ್ ಕುಮಾರ್ ನಾಮಪತ್ರ ಸಲ್ಲಿಕೆ

ಕಾರ್ಕಳ:ಏ 19.ಬಿಜೆಪಿ ಅಭ್ಯರ್ಥಿ‌ ವಿ.ಸುನೀಲ್ ಕುಮಾರ್ ಅವರು‌ ಬುಧವಾರದಂದು ನಾಮಪತ್ರ ಸಲ್ಲಿಸಿದರು.ನಗರದ ಸ್ವರಾಜ್ ಮೈದಾನದಿಂದ ಹೊರಟ ಮೆರವಣಿಗೆಯು ಕುಕ್ಕುಂದೂರು ಗ್ರಾಮ ಪಂಚಾಯತ್ ಮೈದಾನದವರೆಗೆ ಸಾಗಿಬಂದು ಅಲ್ಲಿ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗಿತ್ತು.

ಮೆರವಣಿಗೆಯಲ್ಲಿ ಪಾಲ್ಗೊಂಡವರು ಬೃಹತ್ ಗಾತ್ರದ ಪಕ್ಷದ ಧ್ವಜ ಹಾಗೂ ಓಂಕಾರ ಧ್ವಜ ಹಿಡಿದು ಪಕ್ಷದ ಹಾಗೂ ಅಭ್ಯರ್ಥಿ ಸುನೀಲ್ ಕುಮಾರ್ ಪರ ಜಯಘೋಷ ಮೊಳಗಿಸಿದರು. ಬಿಸಿಲಿನ ತಾಪ ತೀವ್ರವಾಗಿದ್ದರೂ, ಚೆಂಡೆ ಹಾಗೂ‌ ಡಿಜೆ ಸೌಂಡ್ ಗೆ‌ ಮೆರವಣಿಗೆಯಲ್ಲಿ ಪಾಲ್ಗೊಂಡವರಲ್ಲಿ ಹುರುಪು ಹೆಚ್ಚುವಂತೆ ಮಾಡಿತು.

ಮತರಾದರರು ಹಾಗೂ ಸುನೀಲ್ ಕುಮಾರ್ ಅವರ ಅಭಿಮಾನಿಗಳು‌ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಆರ್ ಎಸ್ ಎಸ್ ಮುಖಂಡ ಬೋಳ ಪ್ರಭಾಕರ ಕಾಮತ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಇರ್ವತ್ತೂರು ಭಾಸ್ಕರ್ ಎಸ್.ಕೋಟ್ಯಾನ್, ಮಹೇಶ್ ಕುಡುಪುಲಾಜೆ, ಎಂ.ಕೆ.ವಿಜಯಕುಮಾರ್, ಮಣಿರಾಜ್ ಶೆಟ್ಟಿ, ಮಹಾವೀರ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.

No Comments

Leave A Comment