ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಏ. 21ರಂದು ಉಡುಪಿ, ಶಿವಮೊಗ್ಗ, ಮಂಗಳೂರು ವಿಭಾಗ ಮಟ್ಟದ ಬಿಜೆಪಿ ಮಹಿಳಾ ಕಾರ್ಯಗಾರ
ಉಡುಪಿ:ಏ 19 . ಶಿವಮೊಗ್ಗ ಮತ್ತು ಮಂಗಳೂರು ವಿಭಾಗದ ಮಹಿಳಾ ಕಾರ್ಯಗಾರವು ಎಪ್ರಿಲ್ 21 ರಂದು ಉಡುಪಿ ಜಿಲ್ಲಾ ಬಿಜಪಿ ಕಚೇರಿಯಲ್ಲಿ ನಡೆಯಲಿದೆ ಎಂದು ರಾಜ್ಯ ಮಹಿಳಾ ಕಾರ್ಯದ ಸಹ ಸಂಚಾಲಕಿಯಾದ ಶ್ಯಾಮಲಾ ಕುಂದರ್ ತಿಳಿಸಿದರು.
ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಕಾರ್ಯಕರ್ತರು ನಮ್ಮ ಪಕ್ಷದಲ್ಲಿ ಇದ್ದಾರೆ. ಆ ಹಿನ್ನಲೆಯಲ್ಲಿ ಚುನಾವಣೆಯಲ್ಲಿ ನಿರ್ಣಾಯಕವಾದ ಪಾತ್ರ ಮಹಿಳೆಯರದ್ದಾಗಿದೆ. ಇವತ್ತು ರಾಜ್ಯದಲ್ಲಿ ಮಹಿಳಾ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿದೆ. ಬಿ.ಜೆ.ಪಿ. ರಾಷ್ಟ್ರೀಯ ಮಹಿಳಾ ಮೋರ್ಚಾದ ಉಪಾಧ್ಯಕ್ಷೆಯಾಗಿರುವ ಜ್ಯೋತಿ ಶೇಟ್ ರವರು ಕಾರ್ಯಕ್ರಮವನ್ನು ಉದ್ಟಾಟಿಸಲಿದ್ದಾರೆ. ಕರ್ನಾಟಕದ ಮಹಿಳಾ ಮೋರ್ಚಾದ ಸಹ ಪ್ರಭಾರಿ ಮತ್ತು ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಅಶ್ವಿನಿ ಎಂ.ಮ್.ಎಲ್. ಕೂಡ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಒಟ್ಟು 6 ಜಿಲ್ಲೆಗಳ ಪ್ರತಿಯೊಂದು ವಿಧಾನ ಸಭಾ ಕ್ಷೇತ್ರದಿಂದ 90 ರಿಂದ 95 ಮಂದಿ ಭಾಗವಹಿಸಲಿದ್ದಾರೆ. ಗೋವಾ,ಕೇರಳ ರಾಜ್ಯಗಳಿಂದ ಮತ್ತು ದೆಹಲಿಯಿಂದ ಮಹಿಳಾ ಮೋರ್ಚಾದ ಕಾರ್ಯಕರ್ತರು ಭಾಗವಹಿಸಿ ಮಾರ್ಗದರ್ಶನ ಮಾಡಲಿದ್ದಾರೆ ಎಂದರು.
ಮಹಿಳಾ ಕಾರ್ಯಕರ್ತರ ಗುಂಪುಸಭೆಗಳು ಮತ್ತು ವಿಶೇಷವಾಗಿ ಜಾತ್ರೆಯನ್ನು ಮಾಡುವ ಮೂಲಕ ಮಹಿಳೆಯರನ್ನ ಒಟ್ಟುಗೂಡಿಸುವ ಕಾರ್ಯಕ‍್ರಮದ ತಯಾರಿ ಕೂಡ ನದೆಯುತ್ತಿದೆ. ಅತೀ ಹೆಚ್ಚು ಮಹಿಳಾ ಫಲಾನುಭವಿಗಳು ನಮ್ಮಲ್ಲಿದ್ದಾರೆ. ಅವರ ಜೊತೆ ಮಾತನಾಡಿ“ಸೆಲ್ಫಿವಿತ್ ಮಹಿಳಾ ಲಾಬಾರ್ತಿ” ಎನ್ನುವ ವಿಶೇಷ ಕಾರ್ಯಕ್ರಮವನ್ನು ಮಾಡಲಿದ್ದೇವೆ. ಮಹಿಳೆಯರಿಗೆ ಕೊಟ್ಟಂತಹ ಕೇಂದ್ರ ಸರಕಾರ ಮತ್ತುರಾಜ್ಯ ಸರಕಾರ ಯೋಜನೆ ಮುಟ್ಟುವಲ್ಲಿ ನಮ್ಮ ಮಹಿಳಾ ಕಾರ್ಯಕರ್ತರು ಒಳ್ಳೆಯ ರೀತಿಯಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ.ಅದಕ್ಕೆನಮಗೆಹೆಮ್ಮೆಇದೆ”ಎಂದುತಿಳಿಸಿದರು.
ಉಡುಪಿ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ವೀಣಾಶೆಟ್ಟಿ, ರಾಜ್ಯ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾದ ಶಿಲ್ಪಾ ಸುವರ್ಣ, ಜಿಲ್ಲಾ ಮಹಿಳಾ ಕಾರ್ಯದ ಸಂಚಾಲಕಾರಾದ ನಳಿನಿ ಪ್ರದೀಪ್ ಅವರುಉಪಸ್ಥಿತರಿದ್ದರು.