Log In
BREAKING NEWS >
ಮಾರ್ಚ್ 8ರ೦ದು ಮಹಾಶಿವರಾತ್ರೆ-ಎಲ್ಲಾ ಈಶ್ವರ ದೇವಸ್ಥಾನಗಳಲ್ಲಿ ಭಜನಾ ಸ೦ಕೀರ್ತನೆ ಜರಗಲಿದೆ.....

ಹೈಕೊರ್ಟ್ ನ್ಯಾಯವಾದಿಗಳಾದ ನಾಗೇಂದ್ರ ನಾಯ್ಕ್ ಗೆ ಭಟ್ಕಳ ಜೆ.ಡಿ.ಎಸ್ ಟಿಕೆಟ್ : ತ್ರಿಕೋನ ಸ್ಪರ್ಧೆಗೆ ಸಜ್ಜಾದ ಭಟ್ಕಳ

ಭಟ್ಕಳ : ಭಟ್ಕಳ ತಾಲೂಕಿನ ಸರ್ಪನಕಟ್ಟೆಯ ಬಡ ಕುಟುಂಬದಲ್ಲಿ ಜನಿಸಿ, ತಮ್ಮ ಶಿಕ್ಷಣವನ್ನು ಭಟ್ಕಳದಲ್ಲಿ ಮುಗಿಸಿದ ಇವರು, ಆರಂಭದಲ್ಲಿ ಆಟೋ ಚಾಲಕ,  ಟೇಲರ್ , ಹೋಟೆಲ್ ಕಾರ್ಮಿಕ, ಯಕ್ಷಗಾನದಲ್ಲಿ ಬಣ್ಣಹಚ್ಚುವ ಹುಡುಗನಾಗಿ ವೃತ್ತಿ ಆರಂಭಿಸಿದ ನಾಗೇಂದ್ರ ನಾಯ್ಕರು ಕಾನೂನು ವಿಧ್ಯಾಭ್ಯಾಸ ಬೆಂಗಳೂರಿಗೆ ತೆರಳಿ ಅಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಲೇ ಹೆಸರಾಂತ ವಕೀಲರಾದರು. ತಮ್ಮ  ಯಶಸ್ವಿ ವೃತ್ತಿ ಮತ್ತು ಸಾಮಾಜಿಕ ಬದುಕಿನ ನಡುವೆ ಪ್ರಗತಿಪರ ಪುಷ್ಪ ಕೃಷಿಕರು ಆಗಿ ಕರ್ನಾಟಕದಲ್ಲಿ ಹೆಸರು ಮಾಡಿರುವ ನಾಗೇಂದ್ರ ನಾಯ್ಕ್ ತಮ್ಮ ಸರಳತೆ, ಸ್ನೇಹ ಮನೋಭಾವದಿಂದ ಜನಪ್ರಿಯರು.  ಸಮಾಜದ ಹಲವು ವರ್ಗಗಳ ಕಷ್ಟ, ನಷ್ಟಗಳ ಅಂತರಾಳವನ್ನು ಅರಿತಿರುವ ಇವರು ಭಟ್ಕಳಕ್ಕಾಗಿ ಸಮಗ್ರ ಅಧ್ಯಯನ ನಡೆಸಿ ಕ್ಷೇತ್ರವಾರು ಸಮಸ್ಯೆ ಮತ್ತು ಸೂಕ್ತ ಪರಿಹಾರ ದ ಯೋಚನೆ ಮತ್ತು ಯೋಜನೆಯೊಂದಿಗೆ ಜನರ ಮುಂದೆ ಬರುತ್ತಿರುವುದು ಭಟ್ಕಳದ ರಾಜಕೀಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಕಳೆದ ಮೂರು ದಶಕಗಳ ಯಶಸ್ವಿ ವಕೀಲ ವೃತ್ತಿಯೊಂದಿಗೆ  ನ್ಯಾಯಾಧೀಶರ ಸ್ಥಾನಕ್ಕೆ ಶಿಫಾರಸು ಮಾಡಲ್ಪಟ್ಟ ನಾಗೇಂದ್ರ ನಾಯ್ಕ್ ಅವರು  ಭಾರತದ ನ್ಯಾಯಾಂಗ ಪ್ರಕ್ರಿಯೆಯ ಇತಿಹಾಸದಲ್ಲಿ ಸತತ ನಾಲ್ಕು ಬಾರಿ ಹೈಕೊರ್ಟ್ ನ್ಯಾಯಾದೀಶರ ಸ್ಥಾನಕ್ಕೆ ಶಿಫಾರಸ್ಸು ಕಂಡರೂ ಕೂಡ, ರಾಜಕೀಯ ಕಾರಣಗಳಿಂದ ಕಳೆದ ನಾಲ್ಕು  ವರ್ಷಗಳಿಂದ ಕೇಂದ್ರ ಸರ್ಕಾರದಿಂದ ನೇಮಕಾತಿಯ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನಲೆಯಲ್ಲಿ ಜನಸೇವೆಯ ಆಶಯದೊಂದಿಗೆ  ಬಂದಿದ್ದಾರೆ.

ಸದ್ಯ ಹಾಲಿ ಮತ್ತು ಮಾಜಿ ಶಾಸಕರ ನೇರ ಸ್ಪರ್ಧೆಯ ಚಿತ್ರಣದಲ್ಲಿ ಭಟ್ಕಳದ ಚುನಾವಣಾ ರಾಜಕೀಯ ಈಗ ನಾಗೇಂದ್ರ ನಾಯ್ಕರಿಗೆ ಟೀಕೆಟ್ ಘೋಷಣೆ ಆಗುತ್ತಲೆ ತ್ರೀಕೊನ  ಮಾರ್ಪಾಡಾಗಿದೆ.

ವಿದ್ಯಾವಂತರು ರಾಜಕೀಯದಲ್ಲಿ ಬರಬೇಕು ಅನ್ನೊ ನಿರೀಕ್ಷೆಯಲ್ಲಿದ್ದ ಜನಕ್ಕೆ ಇವರ ರಾಜಕೀಯ ಪ್ರವೇಶ ಆಶಾದಾಯಕವೆನಿಸುತ್ತಿರುವುದು ಸುಳ್ಳಲ್ಲ. ಕಾನೂನು ಹೋರಾಟ, ಕೃಷಿ, ಅಭಿವೃದ್ಧಿ, ಉದ್ಯಮಶೀಲತೆ, ಉದ್ಯೋಗ ಸೃಷ್ಟಿ ಬಗ್ಗೆ ತಮ್ಮದೆ ಪರಿಕಲ್ಪನೆ ಮತ್ತು ಯೋಜನೆ ಹೊಂದಿರುವ ಇವರ ಕಡೆ ಕ್ಷೇತ್ರದ ಪ್ರಜ್ಞಾವಂತ ಜನ ಮತ್ತು ಯುವಕರು ಇದಾಗಲೇ ಪ್ರಚಾರ ಆರಂಬಿಸಿದ್ದು,  ಗುಪ್ತಗಾಮಿನಿಯಂತೆ ಹರಿಯುತ್ತಿದ್ದ ಇವರ ಬೆಂಬಲ  ಕ್ಷೇತ್ರದಲ್ಲಿ ಇಂದು ಜೆ.ಡಿ.ಎಸ್ ಟೀಕೆಟ್ ಘೋಷಣೆ ಆಗುತ್ತಲೆ  ಗರಿಗೆದಿದೆ. ಕ್ಷೇತ್ರದಲ್ಲಿ  ಹೊಸ ಶಕೆ ಬರೆಯುತ್ತದೆ ಎನ್ನಲಾಗುತ್ತದೆ.

No Comments

Leave A Comment