ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ
ಕೆಮುತ್ತೂರು ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ – ಸುವರ್ಣ ಪೂಜಾಸೇವಾ ಮೊಹೋತ್ಸವ ಅರ್ಚಕರಿಗೆ ಸನ್ಮಾನ
ಉಡುಪಿ ಸಮೀಪದ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ ಕೆಮುತ್ತೂರಿನಲ್ಲಿ ಭಾನುವಾರದ೦ದು ದೇವಳದಲ್ಲಿ ಪ್ರಧಾನ ಅರ್ಚಕರಾಗಿ ನಿರಂತರವಾಗಿ ಸುಮಾರು 50 ವರ್ಷ ಗಳ ಕಾಲ ( ಸುವರ್ಣ ಪೂಜಾ ಸೇವಾ ಮೊಹೋತ್ಸವ ) ಪೂಜೆಯ ಸೇವೆ ಸಲ್ಲಿಸಿದ ವೇದಮೂರ್ತಿ ಸುಜಯ ಆಚಾರ್ಯ ಉದ್ಯಾವರರವರನ್ನು ದೇವಾಲಯ ಸಭಾ ವೇದಿಕೆಯಲ್ಲಿ ಗೌರವಿಸಿ ಅಭಿನಂದಿಸಲಾಯಿತು .
ಶ್ರೀ ದೇವರ ಸನ್ನಿಧಿಯಲ್ಲಿ ವಿಶೇಷ ಹೂವಿನ ಅಲಂಕಾರ , ಸಾಮೂಹಿಕ ಪ್ರಾಥನೆ , ಗಣಹೋಮ , ಸತ್ಯನಾರಾಯಣ ಪೂಜೆ , ವಿವಿಧ ಭಜನಾ ಮಂಡಳಿಯ ವತಿಯಿಂದ ಬೆಳ್ಳಿಗೆಯಿಂದ ಸಂಜೆಯ ವರೆಗೆ ಭಜನಾ ಕಾರ್ಯಕ್ರಮ ,ಮಹಾ ಪೂಜೆ ದರ್ಶನ ಸೇವೆ -ಪ್ರಸಾದ ವಿತರಣೆ , ಸರ್ವ ಜನಿಕ ಅನ್ನಸಂತರ್ಪಣೆ ಹಾಗೂ ಭಾರತನಾಟ್ಯ ಕಾರ್ಯ ಕ್ರಮ ನೆಡೆಯಿತು.
ಧಾರ್ಮಿಕ ಸಭೆಯಲ್ಲಿ ವೇದ ಮೂರ್ತಿ ಗಣೇಶ್ ಭಟ್ ಕಾಪು , ವೇದಮೂರ್ತಿ ಕಮಲಾಕ್ಷ ಭಟ್ ಕಾಪು , ವೇದಮೂರ್ತಿ ರವೀಂದ್ರ ಭಟ್ ಶಿರ್ವ , ದರ್ಶನ ಪಾತ್ರಿ ಕೆ ರಮೇಶ ಕಾಮತ್ , ದೇವಳದ ಆಡಳಿತ ಮೊಕ್ತೇಸರಾದ ರಾಮದಾಸ ಕಾಮತ್ , ಆಡಳಿತ ಮಂಡಳಿಯ ಸದಸ್ಯರಾದ ಉಮೇಶ್ ಕಾಮತ್ , ವೆಂಕಟೇಶ ಕಾಮತ್ , ನರಹರಿ ಕಾಮತ್ , ವಿಠ್ಠಲದಾಸ ಕಾಮತ್ , ಅನಂತ ಕಾಮತ್ , ಪ್ರದೀಪ್ ಕಾಮತ್ , ವಸಂತ ಕಾಮತ್ , ಪದ್ಮನಾಭ ಕಾಮತ್ , ವಾಸುದೇವ ಕಾಮತ್ , ಜಿ ಎಸ್ ಬಿ ಮಹಿಳಾ,ಯುವಕ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.