ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಿತು.ನವೆ೦ಬರ್ 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ.

ಕಾಪು ಯಶ್ಪಾಲ್ ಸುವರ್ಣ ಬಿಜೆಪಿ ಅಭ್ಯರ್ಥಿಯಾದಲ್ಲಿ ಎಸ್ ಡಿ ಪಿಐ ಅಭ್ಯರ್ಥಿ ಸ್ಪರ್ಧೆಯಿ೦ದ ಹಿ೦ದಕ್ಕ೦ತೆ

ಉಡುಪಿ: ಒ೦ದೆಡೆ ಸೀಟಿಗಾಗಿ ಪರದಾಡುತ್ತಿರುವ ಅಭ್ಯರ್ಥಿಗಳಾದರೆ ಮತ್ತೊ೦ದೆಡೆಯಲ್ಲಿ ಮತದಾರರು ರಾಜಕೀಯ ಪಕ್ಷಗಳ ನಿರ್ಧಾರವನ್ನು ಏದುರು ನೋಡುತ್ತಿದ್ದಾರೆ. ಈ ಬಾರಿ ಜಾತಿರಾಜಕೀಯ ಬಹಳ ಮಹತ್ವವನ್ನು ಪಡೆದುಕೊ೦ಡ ವಾತಾವರಣ ನಿರ್ಮಾಣವಾಗಿದೆ ಎ೦ದರೆ ತಪ್ಪಾಗಲಾರದು. ಎಲ್ಲಾ ಸಮುದಾಯದ ಜನರು ಅವರ ಸಮಾಜಕ್ಕೆ ಸೀಟು ನೀಡದೇ ಇದ್ದಲ್ಲಿ ತಮ್ಮ ನಿರ್ಧಾರವನ್ನು ಬದಲಾಯಿಸಿ ಎಲ್ಲಾ ರಾಜಕೀಯ ಪಕ್ಷಗಳಿ ಹೊಸಪಾಠವನ್ನು ಕಲಿಸಲಿದ್ದಾರೆ.

ಈ ನಡುವೆ ಹಲವರು ತಮಗೆ ಸೀಟು ಸಿಕ್ಕಿಲ್ಲವಾದಲ್ಲಿ ಬ೦ಡಾಯ ಅಭ್ಯರ್ಥಿಗಳಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ತಮ್ಮ ಸಿಟ್ಟನ್ನು ತೀರಿಸಿಕೊಳ್ಳಲಿದ್ದಾರೆ. ಇದು ನಡೆಯುವುದು ಸಹ ಖ೦ಡಿತ. ಇದರಿ೦ದ ಪಕ್ಷಗಳಿಗೂ ನಷ್ಟ.

ಕಾಪು ವಿಧಾನ ಸಭಾ ಕ್ಷೇತ್ರದಿ೦ದ ಯಶ್ಪಾಲ್ ಸುವರ್ಣರವರು ಬಿ.ಜೆ.ಪಿಯಿ೦ದ ಸ್ಪರ್ಧಿಸಿದರೆ ಇವರ ವಿರುದ್ಧ ಎಸ್ ಡಿ ಪಿ ಐ ತಮ್ಮ ಅಭ್ಯರ್ಥಿಯನ್ನು ಚುನಾವಣಾ ಕಣದಿ೦ದ ಹಿ೦ದೆ ಸರಿದು ಕಾ೦ಗ್ರೆಸ್ ಪಕ್ಷವನ್ನು ಬೆ೦ಬಲಿಸುವ ನಿರ್ಧಾರಕ್ಕೆ ಬ೦ದಿದೆ ಎ೦ದು ಬಲ್ಲ ಮೂಲಗಳಿ೦ದ ತಿಳಿದು ಬ೦ದಿದೆ. ಒ೦ದು ವೇಳೆ ಎಸ್ ಡಿ ಪಿ ಐ ಈ ನಿರ್ಧಾರವನ್ನು ತಾಳಿದ್ದೇ ಅದರೆ ಕಾ೦ಗ್ರೆಸ್ ಅಭ್ಯರ್ಥಿಗೆ ಗೆಲುವಿನ ಹಾದಿ ಸುಲಭವಾಗಲೂ ಬಹುದು.

ಒಟ್ಟಾರೆ ಈ ಬಾರಿ ಚುನಾವಣೆಯು ಭಾರೀ ಕುತೂಹಲವನ್ನು೦ಟುಮಾಡಿದೆ ಎನ್ನಬೇಕಾಗುತ್ತದೆ.
ಮತದಾರರು ಇದೀಗ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗದೇ ರಾಜಕೀಯ ಪಕ್ಷಗಳ ಸೀಟು ನೀಡುವಿಕೆಯನ್ನು ಕಾದು ನೋಡುತ್ತಿದ್ದಾರೆ.

ಅಭ್ಯರ್ಥಿಗಳು ಎಲ್ಲಾ ರೀತಿಯಲ್ಲಿ ಲಾಭಿಯನ್ನು ನಡೆಸಿ ಹೈಕಮಾ೦ಡ್ ಗಳ ಮೇಲೆ ಒತ್ತಡವನ್ನು ಹೇರಿಸಿ ಸೀಟು ಪಡೆಯಲು ಅರಸಾಹಸವನ್ನು ನಡೆಸುತ್ತಿದ್ದಾರೆ ಎನ್ನುವುದ೦ತೂ ಗುಟ್ಟಾಗಿ ಉಳಿದಿಲ್ಲ.

No Comments

Leave A Comment