ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಉಡುಪಿಯಿ೦ದ ಮತ್ತೆ ರಘುಪತಿ ಭಟ್ ಗೆ ಬಿಜೆಪಿಯಿ೦ದ ಸ್ಪರ್ಧೆಗೆ ಗ್ರೀನ್ ಸಿಗ್ನಲ್
ಉಡುಪಿ:ರಾಜ್ಯ ವಿಧಾನ ಸಭಾ ಕ್ಷೇತ್ರದ ಚುನಾವಣೆಗೆ ದಿನನಿಗತಿಯಾದನ೦ತೆ ಎಲ್ಲರಿಗೂ ಅಭ್ಯರ್ಥಿಗಳು ಯಾರು ಎ೦ಬುವುದು ಕುತೂಹಲವನ್ನು೦ಟು ಮಾಡಿತು.ಕಾ೦ಗ್ರೆಸ್ ಪಕ್ಷವು ತನ್ನ ಮೊದಲ ಹಾಗೂ ದ್ವಿತೀಯ ಹ೦ತದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿ ಮೂರನೇ ಹ೦ತ ಅಭ್ಯರ್ಥಿಗಳ ಪಟ್ಟಿ ಘೋಷಣೆಗೆ ಕ್ಷಣಗಣನೆ ಎದುರುನೋಡುತ್ತಿದೆ. ಪಟ್ಟಿ ಬಿಡುಗಡೆಯನ್ನು ಮಾಡಿ ಹಲವುಕಡೆಯಲ್ಲಿ ಪಕ್ಷದಲ್ಲಿನ ಕಾರ್ಯಕರ್ತರ ಬಿನ್ನಭಿಪ್ರಾಯವನ್ನು೦ಟು ಮಾಡಿರುವ ಘಟನೆಯೂ ಪಕ್ಷದಿ೦ದ ಚುನಾವಣೆಗೆ ಘೋಷಣೆಯನ್ನು ಮಾಡಿರುವ ಅಭ್ಯರ್ಥಿಗಳಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.
ಇದರ ಹಿ೦ದೆಯೇ ಶಿಸ್ತಿನ ಪಾರ್ಟಿ,ಹಿ೦ದುತ್ವಕ್ಕೆ ಹೆಚ್ಚಿನ ಮಹತ್ವವನ್ನು ನೀಡಿ ಜನರ ಮನಸ್ಸುಗೆದ್ದ ಬಿಜೆಪಿಯಲ್ಲಿಯೂ ಸೀಟಿಗಾಗಿ ಗುದ್ದಾಟ, ಹಿಡಿತವಿಲ್ಲದ ಮಾತು, ಅಸಮಾದಾನ ಗುಟ್ಟಾಗಿ ಉಳಿಯದೇ ಬೀದಿಗೆ ಬ೦ದಿದೆ. ಸುಮಾರು 16 ಅಭ್ಯರ್ಥಿಗಳ ಬಗ್ಗೆ ಸೀಟು ಹ೦ಚುವಿಕೆಯಲ್ಲಿ ಇನ್ನೂ ಗೊ೦ದಲ ಪರಿಹರಿಸಲು ಬಿಜೆಪಿ ಹೈಕಮಾ೦ಡ್ ಶತಾಯಗಾತಯಾ ಪ್ರಯತ್ನಿಸುತ್ತಿದೆ.
ಉಡುಪಿ-ಕಾಪುವಿನಲ್ಲಿ ಅಭ್ಯರ್ಥಿಗಳನ್ನು ಘೋಷಿಸಲು ತೀವ್ರ ಕಸರತ್ತು ನಡೆಸುತ್ತಿದೆ. ಕೊನೆಯಲ್ಲಿ ಉಡುಪಿಯಿ೦ದ ಈ ಬಾರಿ ಚುನಾವಣಾ ಅಭ್ಯರ್ಥಿಯಾಗಿ ಹಾಲಿ ಶಾಸಕ ರಘುಪತಿ ಭಟ್ ರವರನ್ನೇ ಕಣಕ್ಕೆ ಇಳಿಸುವಲ್ಲಿ ಮು೦ದಾಗಿದೆ.ಇದರಿ೦ದಾಗಿ ಭಟ್ ರವರ ಸ್ಪರ್ಧೆಗೆ ಹೈಕಮಾ೦ಡ್ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗುತ್ತಿದೆ.ಬೇರೆಯಾವ ದಾರಿಯೂ ಬಿಜೆಪಿಗಿಲ್ಲದೇ ಮತ್ತೆ ರಘುಪತಿ ಭಟ್ ರವರಿಗೆ ಸೀಟು ಖಚಿತವಾಗಲಿದೆ.
ಕೊನೆಯ ಹ೦ತದಲ್ಲಿ ಸೀಟು ಕೈತಪ್ಪಿದರೂ ಆಶ್ಚರ್ಯಪಡುವ೦ತಿಲ್ಲ. ಹಲವಾರು ಆರೋಪಗಳು ಇವರ ಮೇಲಿದ್ದರೂ ಬಿಜೆಪಿಗೆ ಅನ್ಯಮಾರ್ಗವಿಲ್ಲದ೦ತಾಗಿದೆ.