ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...
‘ನೋ ಬಾಲ್’ ಕೊಟ್ಟದಕ್ಕೆ ಅಂಪೈರ್‌ನ ಪ್ರಾಣ ತೆಗೆದ ಆಟಗಾರ!
ಭುವನೇಶ್ವರ್:ಮಾ 3. ಒಡಿಶಾದ ಭುವನೇಶ್ವರ್‌ನಲ್ಲಿ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದ ವೇಳೆ ಎಸೆತವೊಂದಕ್ಕೆ ‘ನೋ ಬಾಲ್’ ಎಂದು ಅಂಪೈರ್ ತೀರ್ಪು ನೀಡಿರುವುದಕ್ಕೆ ಆತನನ್ನು ಆಟಗಾರ ಕೊಲೆ ಮಾಡಿರುವ ಘಟನೆ ನಡೆದಿದೆ.
ಒಡಿಶಾದ ಕಟಕ್ ನಲ್ಲಿ ಬ್ರಹ್ಮಪುರ ಮತ್ತು ಶಂಕರಪುರ ಎಂಬ ಎರಡು ತಂಡಗಳ ನಡುವೆ ಕ್ರಿಕೆಟ್ ಮ್ಯಾವ್ ನಡೆಯುತ್ತಿದ್ದು, ಈ ಪಂದ್ಯಕ್ಕೆ ಲಕ್ಕಿ ರಾವುತ್( 22) ತೀರ್ಪುಗಾರನಾಗಿ ನಿಂತಿದ್ದರು. ಪಂದ್ಯ ನಡೆಯುತ್ತಿದ್ದ ವೇಳೆ ಎಸೆತವೊಂದಕ್ಕೆ ನೋ ಬಾಲ್ ಎಂದು ಅಂಪೈರ್ ತೀರ್ಪು ನೀಡಿದ್ದಾರೆ. ಈ ವೇಳೆ ಇದು ನೋ ಬಾಲ್ ಅಲ್ಲ ಎಂದು ಸ್ಮೃತಿ ರಂಜನ್ ರೌತ್ ಎಂಬಾತ ಅಂಪೈರ್ ನೊಂದಿಗೆ ವಾದಕ್ಕೆ ಇಳಿದಿದ್ದಾನೆ.
ಇನ್ನು ವಾದ ಜಗಳಕ್ಕೆ ತಿರುಗಿ ಚೂರಿಯಿಂದ ತೀರ್ಪುಗಾರನಾಗಿ ನಿಂತಿದ್ದ ಲಕ್ಕಿ ರಾವುತ್ ಗೆ ಇರಿದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಲಕ್ಕಿ ರಾವುತ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸುವಾಗಲೇ ಆತ ಮೃತಪಟ್ಟಿದ್ದಾನೆ ಎಂದು ವರದಿ ತಿಳಿಸಿದೆ.
ಆರೋಪಿಯನ್ನು ಜನ ಪೊಲೀಸರಿಗೆ ಒಪ್ಪಿಸಿದ್ದು, ಘಟನೆಯಿಂದ ಗ್ರಾಮದಲ್ಲಿ ಉದ್ವಿಗ್ನತೆ ಉಂಟಾಗಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.