ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಮೆಕ್ಸಿಕೋದಲ್ಲಿ ದೆಹಲಿ ಪೊಲೀಸ್ ಕಾರ್ಯಾಚರಣೆ: ‘ಲಾರೆನ್ಸ್ ಬಿಷ್ಣೋಯ್’ ಗಾಂಗ್ ನ ‘ಮೋಸ್ಟ್ ವಾಂಟೆಡ್ ಗ್ಯಾಂಗ್ ಸ್ಟರ್’ ದೀಪಕ್ ಬಾಕ್ಸರ್ ಬಂಧನ
ನವದೆಹಲಿ: ದೆಹಲಿಯ ‘ಮೋಸ್ಟ್ ವಾಂಟೆಂಡ್’ ಗ್ಯಾಂಗ್ ಸ್ಟರ್ ದೀಪಕ್ ಬಾಕ್ಸರ್ ನನ್ನು ಮೆಕ್ಸಿಕೋದಲ್ಲಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಬಾಲಿವುಟ್ ನಟ ಸಲ್ಮಾನ್ ಖಾನ್ ಗೆ ಬೆದರಿಕೆ ಹಾಕಿದ್ದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಲ್ಲಿ ಗುರುತಿಸಿಕೊಂಡಿದ್ದ ದೀಪಕ್ ಬಾಕ್ಸರ್ ನನ್ನು ಮೆಕ್ಸಿಕೋ ಅಧಿಕಾರಿಗಳ ನೆರವಿನೊಂದಿಗೆ ದೆಹಲಿ ಪೊಲೀಸರ ತಂಡ ವಿಶೇಷ ಕಾರ್ಯಾಚರಣೆ ನಡೆಸಿ ಬಂಧಿಸಿದೆ.
ದೆಹಲಿಯ ಮೋಸ್ಟ್ ವಾಂಟೆಡ್ ಗ್ಯಾಂಗ್ ಸ್ಟರ್ ಗಳಲ್ಲಿ ಒಬ್ಬನಾದ ದೀಪಕ್ ಬಾಕ್ಸರ್ ನನ್ನು ಮೆಕ್ಸಿಕೊದಲ್ಲಿ ಬಂಧಿಸಲಾಗಿದ್ದು, ಈ ವಾರದ ಕೊನೆಯಲ್ಲಿ ಭಾರತಕ್ಕೆ ಕರೆತರಲಾಗುವುದು ಎಂದು ಕಾರ್ಯಾಚರಣೆಯ ಭಾಗವಾಗಿದ್ದ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ಸಹಾಯದಿಂದ ದಿಲ್ಲಿಯ ವಿಶೇಷ ತಂಡವು ದೀಕಪ್ ಬಾಕ್ಸರ್ ನನ್ನು ಮೆಕ್ಸಿಕೊದಲ್ಲಿ ಸೆರೆ ಹಿಡಿದಿದೆ ಎಂದು ಅವರು ಹೇಳಿದ್ದಾರೆ.
“ಗ್ಯಾಂಗ್ ಸ್ಟರ್ ನನ್ನು ಒಂದು ಅಥವಾ ಎರಡು ದಿನಗಳಲ್ಲಿ ಭಾರತಕ್ಕೆ ಕರೆತರಲಾಗುವುದು. ಆತ ದಿಲ್ಲಿ-ಎನ್‌ಸಿಆರ್‌ನ ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್‌ಗಳಲ್ಲಿ ಒಬ್ಬನಾಗಿದ್ದಾನೆ. ಆತ ನಕಲಿ ಪಾಸ್‌ಪೋರ್ಟ್‌ನಲ್ಲಿ ದೇಶದಿಂದ ಪಲಾಯನ ಮಾಡಿದ್ದ. ದಿಲ್ಲಿ ಪೊಲೀಸರು ಭಾರತದ ಹೊರಗೆ ದರೋಡೆಕೋರನನ್ನು ಬಂಧಿಸಿರುವುದು ಇದೇ ಮೊದಲು ಎಂದು ಅಧಿಕಾರಿ ತಿಳಿಸಿದ್ದಾರೆ.
ಯಾರು ಈ ದೀಪಕ್ ಬಾಕ್ಸರ್?
ದೀಪಕ್ ಬಾಕ್ಸರ್ (27ವರ್ಷ) 2021ರಲ್ಲಿ ಮಾಜಿ ಕಿಂಗ್ ಪಿನ್ ಜಿತೇಂದ್ರ ಗೋಗಿ ಹತ್ಯೆಯ ನಂತರ ಗೋಗಿ ಗ್ಯಾಂಗ್ ನ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸಲು ಆರಂಭಿಸಿದ್ದ. 2016ರಲ್ಲಿ ಹರ್ಯಾಣದ ಪೊಲೀಸ್ ಕಸ್ಟಡಿಯಿಂದ ಗೋಗಿಯನ್ನು ಬಿಡುಗಡೆ ಮಾಡಿಸಿದ ನಂತರ ಬಾಕ್ಸರ್ ಕುಖ್ಯಾತಿ ಗಳಿಸಿದ್ದ. ಕಳೆದ ವರ್ಷ ಬಿಲ್ಡರ್, ಹೋಟೆಲ್ ಉದ್ಯಮಿ ಅಮಿತ್ ಗುಪ್ತಾ ಅವರನ್ನು ಹತ್ಯೆಗೈದ ಹೊಣೆಯನ್ನು ದೀಪಕ್ ಬಾಕ್ಸರ್ ಹೊತ್ತುಕೊಂಡಿದ್ದು, ಹಲವಾರು ಕ್ರಿಮಿನಲ್ ಚಟುವಟಿಕೆಯಲ್ಲಿ ಬಾಕ್ಸರ್ ಶಾಮೀಲಾಗಿರುವುದಾಗಿ ಪೊಲೀಸರು ಆರೋಪಿಸಿದ್ದಾರೆ.
ದೀಪಕ್ ಬಾಕ್ಸರ್ ಆಗಸ್ಟ್ 2022 ರಲ್ಲಿ ಬಿಲ್ಡರ್ ನನ್ನು ಕೊಲೆ ಮಾಡಿದ ನಂತರ ಪರಾರಿಯಾಗಿದ್ದ. ಬಿಲ್ಡರ್ ಅಮಿತ್ ಗುಪ್ತಾ ಅವರನ್ನು ದಿಲ್ಲಿಯ ಸಿವಿಲ್ ಲೈನ್ಸ್ ಪ್ರದೇಶದ ಜನನಿಬಿಡ ರಸ್ತೆಯಲ್ಲಿ ಹಲವಾರು ಬಾರಿ ಗುಂಡು ಹಾರಿಸಿ ಕೊಲೆಗೈಯ್ಯಲಾಗಿತ್ತು. ೇಗುಪ್ತಾನನ್ನು ನಾನೇ ಕೊಲೆ ಮಾಡಿಸಿದ್ದು ಹಾಗೂ ಕೊಲೆಯ ಉದ್ದೇಶವು ಸುಲಿಗೆ ಅಲ್ಲ, ಆದರೆ ಪ್ರತೀಕಾರ ಎಂದು ಫೇಸ್ ಬುಕ್ ನಲ್ಲಿ ಬಾಕ್ಸರ್ ಹೇಳಿಕೊಂಡಿದ್ದ.
2021 ರಲ್ಲಿ ಗೋಗಿ ಗ್ಯಾಂಗ್‌ನ ಮುಖ್ಯಸ್ಥ ಜಿತೇಂದ್ರ ಗೋಗಿ ಹತ್ಯೆಯಾದ ಬಳಿಕ ಆ ಗ್ಯಾಂಗನ್ನು ದೀಪಕ್ ಬಾಕ್ಸರ್ ಮುಂದುವರೆಸಿಕೊಂಡು ಹೋಗಿದ್ದ. ಗೋಲ್ಡಿ ಬ್ರಾರ್, ಲಾರೆನ್ಸ್ ಬಿಷ್ಣೋಯಿ ಅವರ ಸಹಚರಲ್ಲಿಯೂ ಒಬ್ಬನಾಗಿರುವ ದೀಪಕ್ ಬಾಕ್ಸರ್ 2022 ರ ಆಗಸ್ಟ್ ನಲ್ಲಿ ಕೊಲೆಯೊಂದನ್ನು ಮಾಡಿ ಅಲ್ಲಿಂದ ಪರಾರಿಯಾಗಿದ್ದ. ಬಿಲ್ಡರ್ ಅಮಿತ್ ಗುಪ್ತಾ ಅವರ ಮೇಲೆ ದೆಹಲಿಯ ಸಿವಿಲ್ ಲೈನ್ಸ್ ಪ್ರದೇಶದ ಜನನಿಬಿಡ ರಸ್ತೆಯಲ್ಲಿ ಹಲವಾರು ಬಾರಿ ಗುಂಡು ಹಾರಿಸಿದ್ದ.
ಜನವರಿ 29 ರಂದು ರವಿ ಆಂಟಿಲ್ ಎಂಬ ಹೆಸರಿನೊಂದಿಗೆ ನಕಲಿ ಪಾಸ್ ಪೋರ್ಟ್ ಮಾಡಿಸಿ ದೀಪಕ್ ಕೋಲ್ಕತ್ತಾದಿಂದ ಮೆಕ್ಸಿಕೋಗೆ ತೆರಳಿದ್ದ ಎಂದು ಪೊಲೀಸರು ಹೇಳಿದ್ದಾರೆ. ಈ ಹಿಂದೆ ಗ್ಯಾಂಗ್ ಸ್ಟರ್ ದೀಪಕ್ ನನ್ನು ಹುಡುಕಿಕೊಟ್ಟವರಿಗೆ 3 ಲಕ್ಷ ರೂ. ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದರು.