ಉಡುಪಿಯಲ್ಲಿ ಎನ್ ಕೌಂಟರ್: ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಮ್ ಗೌಡ ಸಾವು....ಮಹಾ ಚುನಾವಣೆ: ಮತದಾರರು ಬೂತ್‌ಗಳಿಗೆ ತೆರಳಲು QR ಕೋಡ್‌ ಪರಿಚಯ...ನವೆಂಬರ್ 25ರಿಂದ ಸಂಸತ್ ಚಳಿಗಾಲದ ಅಧಿವೇಶನ: ಭಾನುವಾರ ಸರ್ವಪಕ್ಷ ಸಭೆ...

ಮಾರ್ಚ್ 26ರಂದು ಇಸ್ರೋದಿಂದ ಒನ್​ವೆಬ್​ನ 36 ಉಪಗ್ರಹ ಉಡಾವಣೆ!

ಒನ್​ವೆಬ್ ಅಭಿವೃದ್ಧಿಪಡಿಸಿರುವ 36 ಉಪಗ್ರಹಗಳನ್ನು ಮಾರ್ಚ್ 26ರಂದು ಉಡಾವಣೆ ಮಾಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಿದ್ಧವಾಗಿದೆ.

ಬ್ರಿಟನ್ ಮೂಲದ ನೆಟ್‌ವರ್ಕ್ ಆಕ್ಸೆಸ್ ಅಸೋಸಿಯೇಟೆಡ್ ಲಿ(ಒನ್​ವೆಬ್)​ ಅನ್ನು ಭಾರತದ ಟೆಲಿಕಾಂ ಪ್ರಮುಖ ಭಾರ್ತಿ ಗ್ರೂಪ್ ಬೆಂಬಲಿಸುತ್ತದೆ. ಮಾರ್ಚ್ 26 ರಂದು ಉಪಗ್ರಹಗಳ ಯಶಸ್ವಿ ಉಡಾವಣೆಯೊಂದಿಗೆ, ಕಂಪನಿಯು ತನ್ನ Gen 1 ಸಮೂಹದ ಜಾಗತಿಕ ಹೆಜ್ಜೆಗುರುತನ್ನು ಪೂರ್ಣಗೊಳಿಸುತ್ತದೆ.

OneWeb ಅದಾಗಲೇ ಕಕ್ಷೆಯಲ್ಲಿ 582 ಉಪಗ್ರಹಗಳನ್ನು ಹೊಂದಿದೆ. ಮಾರ್ಚ್ 26ರಂದು 36 ಉಪಗ್ರಹ ಉಡಾವಣೆಯೊಂದಿಗೆ ಒಟ್ಟು ಸಂಖ್ಯೆ 618ಕ್ಕೆ ಏರಿಕೆಯಾಗಲಿದೆ.

OneWeb ಪ್ರಕಾರ, 36 ಉಪಗ್ರಹಗಳ ಎರಡನೇ ಬ್ಯಾಚ್ ಅನ್ನು ಭಾರತೀಯ ಕಾಲಮಾನ ಮಾರ್ಚ್ 26 ರಂದು ಬೆಳಿಗ್ಗೆ 9 ಗಂಟೆಗೆ ಇಸ್ರೋ ರಾಕೆಟ್ LVM3 ಉಡಾವಣೆ ಮಾಡಲಿದೆ.

ಇದಕ್ಕೂ ಮೊದಲು 18 ಉಪಗ್ರಹ ಗಳ ಮೊದಲ ಬ್ಯಾಚ್ ಅನ್ನು 2022ರ ಅಕ್ಟೋಬರ್ 23 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ LVM3 ರಾಕೆಟ್‌ನೊಂದಿಗೆ ಉಡಾವಣೆ ಮಾಡಲಾಗಿತ್ತು.

No Comments

Leave A Comment