Log In
BREAKING NEWS >
ಮಾರ್ಚ್ 22ರ೦ದು ಚ೦ದ್ರಾಮಾನ ಯುಗಾದಿ ,ಏಪ್ರಿಲ್ 15ರ೦ದು ಸೌರಮಾನ ಯುಗಾದಿ ಹಬ್ಬವು ನಡೆಯಲಿದೆ.ಹಲವಾರು ಗಣ್ಯರು ಯುಗಾದಿ ಹಬ್ಬದ ಶುಭಾಶಯವನ್ನು ಕೋರಿರುತ್ತಾರೆ.....

ಉಪ್ಪುನೀರಿನಿಂದ ಮುಳುಗಡೆಯಾಗುವುದನ್ನು ತಡೆಗಟ್ಟಲು ಕಿಂಡಿ ಅಣೆಕಟ್ಟು ಕಾಮಗಾರಿಗೆ ಚಾಲನೆ

ಉಡುಪಿಯ ಸ೦ತೆಕಟ್ಟೆ ಕೆ ಜಿ ರೋಡ್ ಸಮೀಪದಲ್ಲಿ ಪ್ರಸಿದ್ಧ ನಗರದ ಜೀವನದಿಯಾಗಿರುವ ಸ್ವರ್ಣನದಿಗೆ ಕಿ೦ಡಿಅಣೆಕಟ್ಟನ್ನು ನಿರ್ಮಿಸುವ ಕಾಮಗಾರಿಗೆ ಚಾಲನೆಯನ್ನು ನೀಡಲಾಗಿದೆ. ಉಪ್ಪೂರು ಹಾಗೂ ನಯಂಪಲ್ಲಿ ಪ್ರದೇಶದಲ್ಲಿ ಅಗತ್ಯವಾಗಿ ಬೇಕಾಗಿರುವ ಈ ಅಣೆಕಟ್ಟು ಬಹಳ ಮಹತ್ವವನ್ನು ಪಡೆಯಲಿದೆ.

ಉಡುಪಿ ಜಿಲ್ಲೆಯಲ್ಲಿ ಹರಿಯುತ್ತಿರುವ ನದಿಗಳಿಗೆ ಬೇಕಾಗಿರುವ ಕಿಂಡಿ ಅಣೆಕಟ್ಟುಗಳು ಭೂಗೋಳದ ಮೇಲೆ ಇತ್ತೀಚಿನ ದಶಕದಲ್ಲಿ ಪರಿಣಾಮ ಬೀರುತ್ತಿರುವ ಹವಾಮಾನ ವೈಪರೀತ್ಯದಿಂದಾಗಿ ಪರಿಸರಕ್ಕೆ ಬಹಳಷ್ಟು ಹಾನಿಯಾಗುತ್ತಿತ್ತು.ವಿಜ್ಞಾನಿಗಳ ಪ್ರಕಾರ ಇತ್ತೀಚೆಗೆ ಭೂಗೋಳದ ತಾಪಮಾನವು ಏರುತ್ತಿದ್ದು ಉತ್ತರ ಹಾಗೂ ದಕ್ಷಿಣ ಧ್ರುವಗಳ ಹಿಮ ಕರಗಿದ ಪರಿಣಾಮದಿಂದ ಸಮುದ್ರದ ಉಪ್ಪು ನೀರು ಬಹಳಷ್ಟು ದೇಶಗಳ ಕರಾವಳಿಯ ಭೂಪ್ರದೇಶ ಬಹಳಷ್ಟು ತಗ್ಗುಪ್ರದೇಶಗಳು ಮುಳುಗಡೆಯಾಗಲಿವೆ .

ನದಿತೀರದಲ್ಲಿರುವ ತಗ್ಗು ಪ್ರದೇಶಗಳನ್ನು ಪರಿಸರವನ್ನು ಸಂರಕ್ಷಿಸುವಲ್ಲಿ ಕಿಂಡಿ ಅಣೆಕಟ್ಟುಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ.
ಇತ್ತೀಚಿನ ದಿನಗಳಲ್ಲಿ ಸಮುದ್ರದ ಉಬ್ಬರ ಹೆಚ್ಚುತ್ತಿದ್ದು ಬಹಳಷ್ಟು ತಗ್ಗುಪ್ರದೇಶಗಳು ಹಾನಿಗೊಳಗಾಗಿವೆ. ಸಮುದ್ರದ ಉಪ್ಪು ನೀರು ಕೃಷಿ ಭೂಮಿಗಳಿಗೆ ನುಗ್ಗಿದ ಪ್ರದೇಶವೆಲ್ಲವೂ ಬಂಜಾರ ಭೂಮಿ ಆಗುವುದು. ಮುಂದಿನ ದಶಕಗಳಲ್ಲಿ ಅಲ್ಲಿ ಯಾವುದೇ ಬೆಳೆಯ ಬೆಳೆಯಲಾಗದು.

ಕಿಂಡಿ ಅಣೆಕಟ್ಟುಗಳ ಒಳಗೆ ಸಂಗ್ರಹಿಸಲಾದ ಲಕ್ಷಾಂತರ ಟಿಎಂಸಿ ನೀರು ಕೃಷಿ ಪಶು-ಪಕ್ಷಿ ಮಾನವ ಸಂಕುಲಕ್ಕೆ ಉಪಯುಕ್ತವಾಗುತ್ತದೆ ಪರಿಸರವನ್ನು ಕಾಪಾಡುವುದುಕಿಂಡಿ ಅಣೆಕಟ್ಟುಗಳ ಉದ್ದೇಶವೇವಾಗಿದೆ.

No Comments

Leave A Comment