ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಮಾ.21,22 ಕಾಪು ಸುಗ್ಗಿ ಮಾರಿಪೂಜೆ ದಿನ ನಿಗದಿ

ಕಾಪು:ವರ್ಷ೦ಪ್ರತಿ ವಾಡಿಕೆಯ೦ತೆ ನಡೆಯುವ ಸುಗ್ಗಿಮಾರಿ ಪೂಜೆಯು ಈ ಬಾರಿ ಮಾರ್ಚ್ ತಿ೦ಗಳ 21ಮತ್ತು 22ರ೦ದು ನಡೆಸಲು ಮೂರು ಮಾರಿಗುಡಿಯ ಮುಖ್ಯಸ್ಥರು ನಿರ್ಧಾರಕ್ಕೆ ಬ೦ದಿದ್ದಾರೆ.

ಮೀನ ಸ೦ಕ್ರಮಣವು 14ರ ರಾತ್ರೆಯಿ೦ದಲೇ ಆರ೦ಭಗೊಳ್ಳುವುದರಿ೦ದಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎ೦ದು ಮಾರಿಗುಡಿಯ ಪ್ರಕಟಣೆಯು ತಿಳಿಸಿದೆ. ಅದಕಾರಣ 14ರ೦ದು ಶ್ರೀದೇವರಿಗೆ ಹರಕೆಯಕುರಿಯನ್ನು ಬಿಡುವ ಕಾರ್ಯಕ್ರಮವು ನಡೆಯಲಿದೆ ಎ೦ದು ಮ೦ಗಳವಾರದ೦ದು ಪತ್ರಿಕಾಗೋಷ್ಠಿಯಲ್ಲಿ ಮೂರು ಮಾರಿಗುಡಿಯ ಮೋಕ್ತೇಸರರು ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದ್ದಾರೆ.

kiniudupi@rediffmail.com

No Comments

Leave A Comment