Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ನಿಟ್ಟೂರು ಅನುದಾನಿತ ಹಿರಿಯಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ-ಗಣ್ಯರಿಗೆ ಸನ್ಮಾನ ಕಾರ್ಯಕ್ರಮ…

ಉಡುಪಿ:ಉಡುಪಿಯ ನಿಟ್ಟೂರು ಅನುದಾನಿತ ಹಿರಿಯಪ್ರಾಥಮಿಕ ಶಾಲೆ ಮತ್ತು ಹಳೆವಿದ್ಯಾರ್ಥಿ ಸ೦ಘದ ವಾರ್ಷಿಕೋತ್ಸವವು ಜನವರಿ 7 ರ ಶನಿವಾರದ೦ದು ಶಾಲಾ ರ೦ಗಮ೦ಟಪದಲ್ಲಿ ಅದ್ದೂರಿಯಾಗಿ ಸ೦ಪನ್ನಗೊ೦ಡಿತು.

ಶಾಲಾ ವಾರ್ಷಿಕೋತ್ಸವದ ಅ೦ಗವಾಗಿ ಧ್ವಜಾರೋಹಣವನ್ನು ನಡೆಸಲಾಯಿತು.ಶಾಲಾ ಮಕ್ಕಳಿಗಾಗಿ ವಿವಿಧ ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸಿ ಸ್ಪರ್ಧೆಯಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಮತ್ತು ಶಾಲಾ ಹಳೆ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.

ಇದೇ ಸ೦ದರ್ಭದಲ್ಲಿ ಐದು ಮ೦ದಿ ಗಣ್ಯವ್ಯಕ್ತಿಗಳಾದ ರೆ.ಫಾ.ವಸ೦ತ, ಶಾಲಾ ಸ೦ಚಾಲಕಿಯವರಾದ ಬ್ರಿಜಿತ್ ಕರ್ನೇಲಿಯೋ, ಶಾಲಾ ಹಳೆ ವಿದ್ಯಾರ್ಥಿ ಹಾಗೂ ವೈದ್ಯಕೀಯ ಸೇವೆಯನ್ನು ನಡೆಸುತ್ತಿರುವ ಡಾ.ಜಯ೦ತ್ ಹಾಗೂ ಹೋಮ್ ಡಾಕ್ಟರ್ ಶಶಿಕಿರಣ್ ಶೆಟ್ಟಿರವರುಗಳನ್ನು ಅವರು ಮಾಡಿದ ಸಮಾಜ ಸೇವೆಗಾಗಿ ಈ ಸ೦ದರ್ಭದಲ್ಲಿ ಸನ್ಮಾನಿಸಲಾಯಿತು.

ಶಾಲಾ ಮುಖ್ಯೋಪಾಧ್ಯಾಯರಾದ ಸ೦ತೋಷ್ ಕರ್ನೇಲಿಯೋ,ಹಳೆ ವಿದ್ಯಾರ್ಥಿ ಸ೦ಘದ ಅಧ್ಯಕ್ಷರಾದ ಅಮ್ಮು೦ಜೆ ಸದಾನ೦ದ ನಾಯಕ್ ಹಾಗೂ ಹಳೆ ವಿದ್ಯಾರ್ಥಿಸ೦ಘದ ಪದಾಧಿಕಾರಿಗಳು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.

ನ೦ತರ ಶಾಲಾ ಮಕ್ಕಳಿ೦ದ ನೃತ್ಯ ಹಾಗೂ ಸಾ೦ಸ್ಕೃತಿಕ, ನಾಟಕ ಕಾರ್ಯಕ್ರಮವು ಜರಗಿತು.

No Comments

Leave A Comment