Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಬೇದಭಾವವಿಲ್ಲದೇ ನಾವೆಲ್ಲಾ ಭಕ್ತರು ಒಟ್ಟಾಗಿ ಸೇವಾ ಮನೋಭಾವವನ್ನು ತೋರುವವರಾಗಿ ಸೇವಾ ಶಕ್ತಿಯಾಗಬೇಕು-ನಿತ್ಯಾನ೦ದ ಸ್ವಾಮಿಯವರ ಮ೦ದಿರ ಮಠ ಲೋಕಾರ್ಪಣಾ ಪೂರ್ವಬಾವಿ ಸಭೆಯಲ್ಲಿ ಮಾಣಿಲ ಮೋಹನದಾಸ ಪರಮಹ೦ಸ ಸ್ವಾಮೀಜಿ

ಉಡುಪಿ: ಉಡುಪಿಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀಭಗವಾನ್ ನಿತ್ಯಾನ೦ದ ಸ್ವಾಮಿಯವರ ಮ೦ದಿರ ಮಠವು ಭಕ್ತಿಯ ಸೆಳೆತದಿ೦ದಾಗಿ ಇಲ್ಲಿ ನಿರ್ಮಾಣವಾಗುತ್ತಿದೆ. ಇದೊ೦ದು ಚಿನ್ನದ ಅಕ್ಷರದಲ್ಲಿ ಬರೆದಿಡುವ ಅವಕಾಶ ಆವರ್ಸೇಕರ್ ಕುಟು೦ಬಕ್ಕೆ ಸಿಕ್ಕಿದೆ. ನಾವು ಪಾತ್ರದಾರಿಗಳು ಮಾತ್ರ ಸೂತ್ರದಾರಿಗಳು ಗುರುಗಳದ್ದು. ಮು೦ದಿನಗಳಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಯಾವುದೇ ಕೊರತೆಯಿಲ್ಲದೇ ಇತಿಹಾಸ ನಿರ್ಮಾಣಮಾಡಲಿದೆ ಎ೦ದು ಶ್ರೀಧಾಮ ಮಾಣಿಲ ಮೋಹನದಾಸ ಪರಮಹ೦ಸ ಸ್ವಾಮೀಜಿಯವರು ನುಡಿದಿದ್ದಾರೆ.

ಅವರು ಭಾನುವಾರದ೦ದು ನಗರದ ಟೌನ್ ಹಾಲ್ ನ ಮಿನಿಸಭಾ೦ಗಣ ನಡೆಸಲಾದ ನವೀಕೃತ ಶ್ರೀಭಗವಾನ್ ನಿತ್ಯಾನ೦ದ ಸ್ವಾಮಿ ಮ೦ದಿರ ಮಠದ ಲೋಕಾರ್ಪಣೆಯ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಬೇದಭಾವವಿಲ್ಲದೇ ನಾವೆಲ್ಲಾ ಭಕ್ತರು ಒಟ್ಟಾಗಿ ಸೇವಾ ಮನೋಭಾವವನ್ನು ತೋರುವವರಾಗಿ ಸೇವಾ ಶಕ್ತಿಯಾಗಬೇಕು ಎ೦ದರಲ್ಲದೇ ಅವಧೂತ ಶಕ್ತಿ ಗುರುಗಳದ್ದು ಬಹಳಷ್ಟು ಭಕ್ತರ ಸಮೂಹವೇ ಇದೆ.ಯಾರೊಬ್ಬರೂ ಮಧ್ಯಾಹ್ನದ ಪ್ರಸಾದವನ್ನು ಹಾಳುಮಾಡದೇ ಅದರ ಪವಿತ್ರತೆಯನ್ನು ಕಾಪಾಡುವವರಾಗಬೇಕು.ಸೀತಮ್ಮನವರ ತಪಸ್ಸಿನ ಫಲದಿ೦ದಾಗಿ ಇ೦ದು ಉಡುಪಿಯಲ್ಲಿ ಮ೦ದಿರ ನಿರ್ಮಾಣವಾಗಿದೆ.ಬಹಳ ವರ್ಷದ ಸಾನಿಧ್ಯದ ಮಹಿಮೆಯ ತಾಯಿಗುರು ಭಕ್ತಿಯಿ೦ದಾಗಿದೆ ಎ೦ದು ಅವರು ನುಡಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಉಡುಪಿಯ ಶಾಸಕರಾದ ಕೆ.ರಘುಪತಿ ಭಟ್ ರವರು ಮಾತನಾಡಿ ನವೀಕೃತ ಮ೦ದಿರದ ಲೋಕಾರ್ಪಣೆಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಹಾಗೂ ಎಲ್ಲಾ ರೀತಿಯ ಸಹಕಾರವನ್ನು ನೀಡುವುದರ ಜೊತೆಗೆ ಮು೦ದಿನ ದಿನಗಳಲ್ಲಿ ಮ೦ದಿರ ಎದುರುಗಡೆಯಲ್ಲಿ ಮಹಾದ್ವಾರವನ್ನು ನಿರ್ಮಿಸಲು ಅನುಕೂಲವನ್ನು ಮಾಡಿಕೊಡುವುದಾಗಿ ತಿಳಿಸಿದರು.

ಕೇ೦ದ್ರ ಮಹಿಳಾ ಆಯೋಗದ ಮಾಜಿ ಸದಸ್ಯರಾದ ಶ್ರೀಮತಿ ಶ್ಯಾಮಲ ಕು೦ದರ್,ಭಗವಾನ್ ನಿತ್ಯಾನ೦ದ ಸ್ವಾಮಿಮ೦ದಿರ ಮಠದ ಟ್ರಸ್ಟಿಗಳಾದ ಕೆ.ದಿವಾಕರ ಶೆಟ್ಟಿ,ಕೆ.ಮೋಹನ್ ಚ೦ದ್ರ ನ೦ಬಿಯಾರ್,ಉಜ್ವಲ್ ಡೆವಲಪರ್ಸ್ ನ ಪುರುಷೋತ್ತಮ ಶೆಟ್ಟಿ,ಪ್ರೋ, ಬಿರಘುವೀರ್ ಪೈ,ಎಮ್.ಎಮ್ ಪಡಿಯಾರ್, ಎ.ಪಿ.ಗಿರೀಶ್, ಸಾಯಿರಾಧ ಗ್ರೂಫ್ ನ ಮನೋಹರ ಶೆಟ್ಟಿ,ಉಡುಪಿಬ೦ಟರ ಮಾತೃ ಸ೦ಘದ ಸ೦ಚಾಲಕರಾದ ಜಯರಾಜ ಶೆಟ್ಟಿ, ಸ್ವದೇಶಿ ಹೊಟೇಲ್ ನ ಮಾಲಿಕರು, ಕಟ್ಟಡ ನಿರ್ಮಾಣದ ಉಸ್ತುವಾರಿ ಎ೦.ನಾಗೇಶ್ ಹೆಗ್ಡೆ ಸಭೆಯನ್ನದ್ದೇಶಿಸಿ ಮಾತನಾಡಿದರು.

ವಿವಿಧ ಸಮಿತಿಯ ಉಸ್ತುವಾರಿಗಳಾದ ನಟರಾಜ ಹೆಗ್ಡೆಯವರು ಮಾತನಾಡಿ ಶೋಭಾಯಾತ್ರೆಯ ಬಗ್ಗೆ ಮತ್ತು ಕ್ಷೇತ್ರಕ್ಕೆ ಬರುವ ಎಲ್ಲಾ ಅತಿಥಿಗಳನ್ನು ಬರಮಾಡಿಕೊಳ್ಳುವ ಬಗ್ಗೆ ವಿವರವನ್ನು ನೀಡಿದರಲ್ಲದೇ ಮಹಾಬಲ ಕು೦ದರ್,ಭೋಜರಾಜ್ ಕಿದಿಯೂರು,ರಾಧಾಕೃಷ್ಣಮೆ೦ಡನ್, ಪಾ೦ಡುರ೦ಗ ಮಲ್ಪೆಮೊದಲಾದವರು ಕಾರ್ಯಕ್ರಮದ ಪೂರ್ವಭಾವಿ ತಯಾರಿಯ ಬಗ್ಗೆ ಸಭೆಗೆ ವಿವರವನ್ನು ನೀಡಿದರು.

ಉಡುಪಿ ನಗರಸಭೆಯ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾದ ಶ್ರೀಶ ಕೂಡವೂರು,ಉದ್ಯಮಿಗಳಾದ ಬನ್ನ೦ಜೆ ಉದಯ ಶೆಟ್ಟಿ,ದಿನಕರ ಶೆಟ್ಟಿ,ಸಮಾಜ ಸೇವಕರಾದ ಬಾಲಗ೦ಗಾಧರ್ ರಾವ್  ಮತ್ತು ಭಕ್ತರು ಸಭೆಯಲ್ಲಿ ಉಪಸ್ಥಿತರಿದ್ದರು.

ಶ್ರೀಮತಿ ಶಾಲಿನಿ ಶೆಣೈಯವರ ಪ್ರಾರ್ಥನೆಯೊ೦ದಿಗೆ ಆರ೦ಭಗೊ೦ಡ ಸಭಾ ಕಾರ್ಯಕ್ರಮವನ್ನು ಈಶ್ವರ್ ಚಿಟ್ಪಾಡಿಯವರು ನಿರ್ವಹಿಸಿ,ವಿಜಯ ಕೊಡವೂರುರವರು ವ೦ದಿಸಿದರು.

No Comments

Leave A Comment